ಪುತ್ತೂರು: ಮನುಷ್ಯ ಯಾವಾಗ ನೈತಿಕ ಭಾವನೆಯನ್ನು ತನ್ನಲ್ಲಿ ತಾನು ತೊಡಗಿಸಿಕೊಳ್ಳುತ್ತಾನೋ ಆಗ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯ. ಜನರ ಮನಸ್ಥಿತಿಗಳು ಯಾವ ರೀತಿಯಾಗಿ ಬದಲಾಗಿದೆ ಎಂದರೆ ತಾನು ಶ್ರೀಮಂತನಾದರೆ ಸಾಕು, ಅದರಿಂದ ನಾಶದಕಡೆಗೆ ಸಾಗುವ ಪ್ರಕೃತಿಯ ಮೇಲೆ ದಯೆಯೇ ಇಲ್ಲದಾಗಿದೆ. ದೇಶದ ಪ್ರಗತಿ, ಮನುಷ್ಯನ ಶ್ರೀಮಂತಿಕೆಗೆ ಪರಿಸರ ಬಲಿಯಾಗುತ್ತಿವೆ. ಜನರೆಲ್ಲರೂ ನೈತಿಕ ಭಾವನೆಯನ್ನು ಅಳವಡಿಸಿಕೊಳ್ಳದಿದ್ದರೆ, ಮುಂದಿನ ಜನಾಂಗಕ್ಕೆ ಜೀವಿಸುವುದೇ ಕಷ್ಟವಾಗಬಹುದು. ಅನಕ್ಷರಸ್ಥರಿಗೆ ಇರುವಂತಹ ಜ್ಞಾನ ಇಂದಿನ ಅಕ್ಷರಸ್ಥರಿಗಿಲ್ಲ. ಇಂದು ಪರಿಸರವನ್ನು ಉಳಿಸಿ, ಮುಂದಿನ ತಲೆಮಾರುಗಳಿಗೆ ಸ್ವಚ್ಛ ಪರಿಸರವನ್ನುಕೊಡುವ ಕೆಲಸ ಮಾಡಬೇಕು. ಸಹಿಷ್ಣುತಾ ಭಾವ ಎಲ್ಲರಲ್ಲೂ ಬೆಳೆದರೆ ಆಗ ಪ್ರಕೃತಿ ಸುಂದವಾಗಿರಲು ಸಾಧ್ಯವಾಗುವುದು ಎಂದು ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಅಧಿಕಾರಿ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಸ್ನಾತಕೋತ್ತರ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂಎಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಪ್ರಯುಕ್ತ ಪರಿಸರ ರಕ್ಷಣಾ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಕೆ.ಎಸ್ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ವಿದ್ಯಾವಂತರಿಂದಲೇ ಇಂದು ಪರಿಸರ ಹಾಳಾಗುತ್ತಿದೆ. ಅವಿದ್ಯಾವಂತರಿಗಿರುವ ಪರಿಸರ ಪ್ರೀತಿ ವಿದ್ಯಾವಂತರಿಗಿಲ್ಲ. ಶಿಕ್ಷಣ ಕಲಿತಷ್ಟು ಪ್ರಕೃತಿಯ ನಾಶವನ್ನೇ ಹೆಚ್ಚು ಮಾಡುತ್ತಿದ್ದಾರೆ. ಪ್ರಕೃತಿಯನ್ನು ಪ್ರಾಣಿ, ಪಕ್ಷಿಗಳು ಪ್ರೀತಿಸಿದಷ್ಟು ಮನುಷ್ಯರು ಪ್ರೀತಿಸುತ್ತಿಲ್ಲ. ಜನರು ತಮ್ಮ ಮನಸ್ಥಿತಿಗಳನ್ನು ಬದಲಾಯಿಸಿದಾಗ ಮಾತ್ರ ಪರಿಸರದ ಉಳಿವು ಸಾಧ್ಯವಾಗುವುದು. ಯಾವಾಗ ಮನುಷ್ಯರು ಸಣ್ಣ, ಪುಟ್ಟ ಕಾಳಜಿಯೊಂದಿಗೆ ಪ್ರಕೃತಿಯನ್ನು ಪ್ರೀತಿಸುತ್ತಾರೋ, ಆಗ ಪರಿಸರವು ಸುಂದರವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಬಿ ಹಾಗೂ ಐಕ್ಯೂಎಸಿ ಘಟಕದ ಸಂಯೋಜಕಿ ಡಾ. ರವಿಕಲಾ ಉಪಸ್ಥಿತರಿದ್ದರು.
ಕಾರ್ಯಕ್ರವನ್ನು ದ್ವಿತೀಯ ಎಂಕಾಂ ವಿದ್ಯಾರ್ಥಿನಿ ಯಶ್ವಿತಾ ಸ್ವಾಗತಿಸಿ, ದ್ವಿತೀಯ ಎಂಕಾಂ ವಿದ್ಯಾರ್ಥಿನಿ ಅನನ್ಯ ಬಿ ವಂದಿಸಿ, ದ್ವಿತೀಯ ಎಂಕಾಂ ವಿಭಾಗದ ವಿದ್ಯಾರ್ಥಿ ನವೀನ್‍ಕೃಷ್ಣ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಮತ್ತುಉಪನ್ಯಾಸಕರು ಗಿಡಗಳಿಗೆ ನೀರುಣಿಸಿದರು ಮತ್ತು ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







