ಭಾರತೀಯ ಅಸ್ಮಿತೆ ಮರುಸ್ಥಾಪನೆ ಯುವಕರ ಹೊಣೆ

Upayuktha
0

ಎಸ್.ಡಿ.ಎಂ ಕಾಲೇಜಿನಲ್ಲಿ ‘ವಿವೇಕ ಜಾಗೃತಿ’ ಉಪನ್ಯಾಸ



ಉಜಿರೆ: ಭಾರತದ ಕುರಿತು ಪಾಶ್ಯಾತ್ಯರ ದೃಷ್ಟಿಕೋನದಲ್ಲಿರುವ ತಪ್ಪುಕಲ್ಪನೆ ನಿವಾರಿಸಲು ಯುವಜನತೆ ಭಾರತೀಯ ಸಂಸ್ಕøತಿಯ ನಿಜವಾದ ಅಸ್ಮಿತೆ ಮರುಪ್ರತಿಷ್ಠಾಪಿಸುವ ಹೊಣೆಗಾರಿಕೆ ನಿಭಾಯಿಸಬೇಕು ಎಂದು ಬ್ರೆಜಿಲ್‍ನ ರಿಯೋ ಡಿ ಜನೈರೋ ರಾಮಕೃಷ್ಣ ವೇದಾಂತ ಆಶ್ರಮದ ಮುಖ್ಯಸ್ಥ ಸ್ವಾಮಿ ಆತ್ಮಜ್ಞಾನಾನಂದಜಿ ಅಭಿಪ್ರಾಯಪಟ್ಟರು.


ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ‘ವಿವೇಕ ಜಾಗೃತಿ’ ಸರಣಿಯ ಭಾಗವಾಗಿ ‘ಪವರ್ ಆಫ್ ಪರ್ಪಸ್: ಫೈಂಡಿಂಗ್ ಮೀನಿಂಗ್ ಇನ್ ವಾಟ್ ಯು ಡು’ ಕುರಿತು ಅವರು ಉಪನ್ಯಾಸ ನೀಡಿದರು. 


ಭಾರತದ ಜನಜೀವನದ ಕುರಿತು ಪಾಶ್ಚಾತ್ಯರಲ್ಲಿ ಅನೇಕ ತಪ್ಪುಕಲ್ಪನೆಗಳಿವೆ. ವಿಶ್ವಮಟ್ಟದಲ್ಲಿ ಸಮೂಹ ಮಾಧ್ಯಮಗಳೂ ಈ ತಪ್ಪುಕಲ್ಪನೆಗಳನ್ನು ವಿಜೃಂಭಿಸಿ ಇವುಗಳೇ ನಿಜ ಎಂದು ಬಿಂಬಿಸುತ್ತಲೇ ಇವೆ. ನಿಜಕ್ಕೆ ತದ್ವಿರುದ್ಧವಾದ ಈ ಬಗೆಯ ಜಾಗತಿಕ ಸುಳ್ಳುಕಥನಗಳನ್ನು ಅಲ್ಲಗಳೆಯಲು ಭಾರತದ ಹೊಸ ತಲೆಮಾರಿನ ಯುವಕರು ದೃಢಸಂಕಲ್ಪದೊಂದಿಗೆ ಭಾರತೀಯ ಸಾಂಸ್ಕøತಿಕ ಅಸ್ಮಿತೆಯನ್ನು ಮರುಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಮನುಷ್ಯ ಬದುಕಿಗೆ ಸಾರ್ಥಕತೆಯ ಆಯಾಮ ಇದೆ. ಪ್ರತಿಯೊಬ್ಬರೂ ಮನುಷ್ಯ ಬದುಕಿನ ಅರ್ಥವನ್ನು ಕಂಡುಕೊಳ್ಳಬೇಕು. ಅದಕ್ಕನುಗುಣವಾಗಿ ವ್ಯಕ್ತಿತ್ವ ಬೆಳವಣಿಗೆಯ ವಿವಿಧ ಹಂತಗಳನ್ನು ದಾಟಿಕೊಳ್ಳಬೇಕು. ನಿರಂತರ ಶ್ರಮ ಮತ್ತು ತಾಳ್ಮೆಯ ಮೂಲಕ ಯಶಸ್ಸಿನ ಗಮ್ಯ ತಲುಪಿಕೊಳ್ಳಬೇಕು. ಇದರೊಂದಿಗೆ ದೇಶದ ಹಿರಿಮೆ ಎತ್ತಿಹಿಡಿಯುವ ಮಹತ್ವದ ಹೊಣೆಗಾರಿಕೆಯನ್ನೂ ನಿಭಾಯಿಸಬೇಕು ಎಂದರು.


ಜೀವನದ ಅರ್ಥವನ್ನು ಕಂಡುಕೊಳ್ಳದೇ ನಿಜವಾದ ಸಂತೋಷವನ್ನು ಅನುಭವಿಸಲು ಸಾಧ್ಯವಿಲ್ಲ. ಉದ್ದೇಶವಿಲ್ಲದ ಕೆಲಸಕ್ಕೆ ಮೌಲ್ಯವಿರುವುದಿಲ್ಲ. ಜೀವನಕ್ಕೆ ಸ್ಪಷ್ಟ ದಿಕ್ಕು ಮತ್ತು ಗುರಿ ಇರಬೇಕು. ಇಂದಿನ ಸಮಾಜದಲ್ಲಿ ಬಹುತೇಕರು ಜೀವನದ ಅರ್ಥ ಅರಿಯದೇ ಗೊಂದಲ, ಖಿನ್ನತೆ ಮತ್ತು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದರೆ ಜೀವನದ ಉದ್ದೇಶವನ್ನು ಅರಿತಾಗ ಬದುಕು ಅರ್ಥಪೂರ್ಣವಾಗುತ್ತದೆ. ಎಲ್ಲ ಸವಾಲುಗಳನ್ನೂ ಸಮರ್ಥವಾಗಿ ಎದುರಿಸುವ ಶಕ್ತಿ ಉಂಟಾಗುತ್ತದೆ ಎಂದು ನುಡಿದರು.


ಮೊದಲು ಮನುಷ್ಯರು ಉತ್ತಮ ವ್ಯಕ್ತಿಗಳಾಗಿ ಜೀವಿಸಲು ಕಲಿತುಕೊಳ್ಳಬೇಕು. ಇದು ಮಾನವನ ಜೀವನಕ್ಕೆ ನೀಡುವ ಗೌರವ. .ಶರೀರದ ಬಗ್ಗೆ ಕಾಳಜಿ ವಹಿಸುವರು ಮನಸ್ಸಿನಲ್ಲಿ ಆಗುತ್ತಿರುವ ಆಲೋಚನೆ ಬಗ್ಗೆ ಗಮನ ಕೊಡುವುದು ಮುಖ್ಯ. ಜೀವನ ಒಳ್ಳೆಯ ರೀತಿಯಲ್ಲಿ ನಡೆಸಬೇಕಾದರೆ ಎಲ್ಲ ವ್ಯಕ್ತಿಗಳಿಗೂ ಒಂದು ಆದರ್ಶ ಇರಬೇಕು. ವಿವೇಕಾನಂದರು ಹೇಳಿದ ಹಾಗೆ ಆದರ್ಶ ಇರುವ ವ್ಯಕ್ತಿ ಒಂದು ಬಾರಿ ತಪ್ಪು ಮಾಡಿದರೆ ಅದನ್ನು ಪುನರಾವರ್ತಿಸದೇ ಸುಧಾರಿಸಿಕೊಳ್ಳುತ್ತಾನೆ. ಅದೇ ಆದರ್ಶ ಇಲ್ಲದಿರುವ ವ್ಯಕ್ತಿ ತಪ್ಪುಗಳನ್ನು ಮಾಡುತ್ತಲೇ ಇರುತ್ತಾನೆ. ಜೀವನದಲ್ಲಿ ಬದಲಾವಣೆ ಬೇಕು ಅಂದರೆ ಆದರ್ಶ ಇರುವುದು ಅತ್ಯಗತ್ಯ ಎಂದು ಹೇಳಿದರು.


ಎಸ್.ಡಿ.ಎಂ ಕಾಲೆಜೀನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಸ್ವಾಗತಿಸಿ ಮಾತನಾಡಿದರು. ಧರ್ಮಸ್ಥಳದ ಚತುರ್ದಾನಗಳಲ್ಲಿ ವಿದ್ಯಾದಾನದ್ದು ಮಹತ್ವದ ಪಾತ್ರ. ಈ ದೃಷ್ಟಿಯಿಂದ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಶೈಕ್ಷಣಿಕ ಅಸ್ಮಿತೆಗೆ ಸಾಮಾಜಿಕ ಆಯಾಮ ಇದೆ. ಇಲ್ಲಿ ವಿದ್ಯಾರ್ಥಿಗಳಿಗೆ ಶ್ರೇಷ್ಠ ಮಟ್ಟದ ಜೀವನದ ಮೌಲ್ಯಗಳನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ಸಂಸ್ಕಾರಗಳನ್ನು ರೂಢಿಸಲಾಗುತ್ತದೆ ಎಂದು ನುಡಿದರು. ಸ್ವಾಮಿ ವಿವೇಕಾನಚಿದರ ಆಧ್ಯಾತ್ಮಿಕ ಚಿಂತನೆಯನ್ನು ಯುವಜನತೆ ಆದರ್ಶವಾಗಿ ತೆಗೆದುಕೊಳ್ಳಬೇಕು. ಜ್ಞಾನದಜೊತೆಗೆ ವ್ಯಕ್ತಿತ್ವ ರೂಪಿಸುವುದು ಶಿಕ್ಷಣದ ಉದ್ದೇಶ ಎಂದರು.


ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ., ಉಪಸ್ಥಿತರಿದ್ದರು. ವೈದೇಹಿ ಮತ್ತು ತಂಡದವರು ಪ್ರಾರ್ಥಿಸಿದರು. ಬಯೋಟೆಕ್ನಾಲಜಿ ವಿಭಾಗದ ಡಾ.ಮನೋಜ ಗೋಡಬೋಲೆ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top