ಸಾಲುಮರದ ತಿಮ್ಮಕ್ಕನಿಗೆ ನುಡಿ ನಮನ

Upayuktha
0


ಉಡುಪಿ: ಇತ್ತೀಚಿಗೆ ಇಹಲೋಕ ತ್ಯಜಿಸಿದ ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿ ನಮನ ಕಾರ್ಯಕ್ರಮ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು​ ಘಟಕ ಇದರ ವತಿಯಿಂದ ಉಡುಪಿ ಇನ್ ನಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಉರಗತಜ್ಞ ಗುರುರಾಜ್ ಸನಿಲ್ ದಿವಂಗತ ಸಾಲುಮರ ತಿಮ್ಮಕ್ಕರವರು ಯಾವುದೇ ರೀತಿಯ ಪ್ರತಿಫ​ಲಾಪೇಕ್ಷೆ ಇಲ್ಲದೆ ಪರಿಸರದ ಮೇಲಿನ ಅಪಾರ ಪ್ರೀತಿಯನ್ನು ಹೊಂದಿ ನೂರಾರು ಗಿಡಗಳನ್ನು ನೆಟ್ಟು ಘೋಷಣೆ ಮಾಡಿದ್ದರು​. ಅದನ್ನು ನೋಡಿ ವಿಶ್ವದಾದ್ಯಂತ ಪರಿಸರದ ಬಗ್ಗೆ ಅಭಿಯಾನಗಳು ನಡೆಯಲು ಸಾಧ್ಯವಾಯಿತು ಎಂದರು.


ನಿರೂಪಕ ಅವಿನಾಶ್ ಕಾಮತ್ ಮಾತನಾಡಿ, ತಿಮ್ಮಕ್ಕ ಅಜ್ಜಿ ಮತ್ತು ಉಡುಪಿಗೆ ಅವಿನಾಭಾವ ಸಂಬಂಧವಿದೆ ಇಂದು ಅಜ್ಜಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯಲು ಉಡುಪಿಯ ಜನತೆಯ ಸಹಕಾರವು ಇತ್ತು ಎಂದು ನೆನಪು ಮಾಡಿದರು.


ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ ಮಾತನಾಡಿ, ಸಾಲುಮರ ತಿಮ್ಮಕ್ಕರವರ ಹೆಸರಿನಲ್ಲಿ ಪ್ರತಿವರ್ಷ ಖ್ಯಾತ ವ್ಯಕ್ತಿಗಳನ್ನು ಉಡುಪಿಗೆ ಕರೆಸಿ ಅವರಿಂದ ಉಡುಪಿಯ ಪ್ರಮುಖವಾದ ಸ್ಥಳಗಳಲ್ಲಿ ಅರಳಿ ಮರವನ್ನು ನೆಟ್ಟು ಅವರನ್ನು ಗೌರವಿಸುವ ಕಾರ್ಯ ಮಾಡಲಾಗುವುದು ಎಂದರು.


ಸುಹಾಸಂನ ಶ್ರೀನಿವಾಸ್​ ಉಪಾಧ್ಯ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಂಕರ್ ಮಾತನಾಡಿದರು​. ಈ ಸಂದರ್ಭದಲ್ಲಿ ಉಡುಪಿ ಇನ್ ನ ಮುಖ್ಯಸ್ಥ ನಾಗರಾಜ ಹೆಬ್ಬಾರ್, ಹಾಸ್ಯ ಭಾಷಣಕಾರ್ತಿ ಸಂಧ್ಯಾ ಶೆಣೈ, ​ಜಿಲ್ಲಾ ಕಸಾಪ ​ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್,​ ಪದಾಧಿಕಾರಿಗಳಾದ ದೀಪಾ ಚಂದ್ರಕಾಂತ್, ರಂಜನಿ ವಸಂತ್, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಶಶಿಕಾಂತ ಶೆಟ್ಟಿ, ಲಕ್ಷ್ಮಿಕಾಂತ್, ರಾಜೇಶ್​, ರಾಮಾಂಜಿ​ ಮುಂತಾದ​ವರು ಉಪ​ಸ್ಥಿತರಿದ್ದರು​.  


ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ ಪ್ರಸ್ತಾವನೆಗೈದರು.​ ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು. ಗೌ. ಕಾರ್ಯದರ್ಶಿ ಜನಾರ್ದನ ಕೊಡವೂರು ನಿರೂಪಿಸಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.​ ಈ ಸಂದರ್ಭದಲ್ಲಿ ಸಾಲುಮರ ತಿಮ್ಮಕ್ಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top