ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ ಎದುರಿಸಿ: ರಾಘವೇಂದ್ರ ಪ್ರಭು ಕರ್ವಾಲು

Upayuktha
0


ಹೆಬ್ರಿ: ಪೆರ್ಡೂರು ಪ್ರೌಢ ಶಾಲಾ ಸಭಾಂಗಣದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ವಿಶೇಷ ಕಾರ್ಯಾಗಾರ ನಡೆಯಿತು.


ತರಬೇತಿ ನಡೆಸಿಕೊಟ್ಟ ವ್ಯಕ್ತಿತ್ವ ವಿಕಸನ ತರಬೇತಿದಾರ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿ, ಪರೀಕ್ಷೆ ಎಂಬುದು ಒಂದು ವಾರ್ಷಿಕ ಹಬ್ಬ ಈ ಹಬ್ಬದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾದ ತಯಾರಿಯೊಂದಿಗೆ ಪರೀಕ್ಷೆಯನ್ನು ಖುಷಿಯಾಗಿ ಬರೆಯಬೇಕು, ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೆ ಪರೀಕ್ಷೆ ಎದುರಿಸಿದರೆ, ಉತ್ತಮವಾದ ಅಂಕಗಳನ್ನು ಪಡೆಯಲು ಸಾಧ್ಯ ಎಂದರು.


ಉತ್ತಮವಾದ ವ್ಯಕ್ತಿತ್ವ ಅದೇ ರೀತಿ ಜೀವನಕ್ಕೆ ಸ್ಪಷ್ಟವಾದ ಗುರಿ ಅದಕ್ಕೆ ಸರಿಯಾದ ಕಾರ್ಯಕ್ಷಮತೆ ಇದ್ದಲ್ಲಿ ಉತ್ತಮ ಬದುಕು ಸಾಗಿಸಲು ಸಾಧ್ಯವಾಗಬಹುದು ಎಂದರು.


ಕಾರ್ಯಕ್ರಮದಲ್ಲಿ ಶಾಲಾ ಆಡಳಿತ‌ ಮಂಡಳಿಯ ಉಪಾಧ್ಯಕ್ಷ ಡಾ. ಜಿ.ಎಸ್.ಕೆ. ಭಟ್ ಕಾಯ೯ಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಹಸೀನಾ ಬಾನು, ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕ ನಿಶಿತ್ ಹೆಗ್ಡೆ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.


Post a Comment

0 Comments
Post a Comment (0)
Advt Slider:
To Top