ತುಂಬೆ ಗ್ರೂಪ್ ಶಿಕ್ಷಣ ಸಂಸ್ಥೆಯಿಂದ ಪಶುವೈದ್ಯಕೀಯ ಶಿಕ್ಷಣದಲ್ಲಿ ಹೊಸ ಮೈಲುಗಲ್ಲು

Chandrashekhara Kulamarva
0

ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಪಶುವೈದ್ಯಕೀಯ ಪದವಿಗೆ ಸಿಎಎಯಿಂದ ಪ್ರಾಥಮಿಕ ಅನುಮೋದನೆ




ಮಂಗಳೂರು: ತುಂಬೆ ಗ್ರೂಪ್ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಮನುಷ್ಯನ ಆರೋಗ್ಯ, ಪ್ರಾಣಿಗಳ ಕ್ಷೇಮ ಹಾಗೂ ಪ್ರಕೃತಿಯೊಂದಿಗೆ ಗಾಢವಾದ ಸಂಬಂಧವನ್ನು ಬೆಸೆಯುವ “ವನ್ ಹೆಲ್ತ್ ಫಿಲೋಸೊಫಿ” ಎಂಬ ತತ್ವವನ್ನು ಆಧಾರವಾಗಿಟ್ಟುಕೊಂಡು ಪಶುವೈದ್ಯಕೀಯ ಕ್ಷೇತ್ರದಲ್ಲಿ ಸಂಪೂರ್ಣ ಪರಿಸರ ಸಂರಕ್ಷಣೆಯೊಂದಿಗೆ ಶೈಕ್ಷಣಿಕ ವಿಧಾನವನ್ನು ರೂಪಿಸುವ ಮೂಲಕ ತುಂಬೆ ಗ್ರೂಪ್ ತನ್ನ ಬದ್ಧತೆಯನ್ನು ಮತ್ತಷ್ಟು ದೃಢಪಡಿಸಿಕೊಂಡಿದೆ.


ಸಾಕುಪ್ರಾಣಿಗಳನ್ನು ಸಾಕುವವರ ಸಂಖ್ಯೆ ಹೆಚ್ಚಳ, ಪಶುಪಾಲನಾ ಆರೋಗ್ಯದ ಅಗತ್ಯತೆ, ಆಹಾರದ ಬಗ್ಗೆ ಜಾಗರೂಕತೆ ಮತ್ತು ಜಾಗತಿಕ ರೋಗ ನಿಯಂತ್ರಣದ ಜಾಗೃತಿಯೊಂದಿಗೆ ಯುಎಇ ಪಶುವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿಯ ಪ್ರಮುಖ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ತುಂಬೆ ಗ್ರೂಪ್ ವೈದ್ಯಕೀಯ, ಶಿಕ್ಷಣ ಹಾಗೂ ಸಂಶೋಧನಾ ಸಾಮರ್ಥ್ಯಗಳೊಂದಿಗೆ ದೇಶ ಸೇವೆಯನ್ನು ಮಾಡುತ್ತಾ ತನ್ನ ಗುರಿಮುಟ್ಟುವಲ್ಲಿ ಸತತವಾಗಿ ಪ್ರಯತ್ನಿಸುತ್ತಿದೆ.


ತುಂಬೆ ಗ್ರೂಪ್‌ನ ಸ್ಥಾಪಕಾಧ್ಯಕ್ಷರಾದ ಡಾ. ತುಂಬೆ ಮೊÊದೀನ್ ಅವರು ನೂತನ ಯೋಜನೆಗಳ ವಿವರಗಳನ್ನು ನೀಡುತ್ತಾ "ಈಗಾಗಲೇ ಶಾರ್ಜಾದ ಮುವೈಲೆಹ್‌ನಲ್ಲಿ ತುಂಬೆ ಪಶುವೈದ್ಯಕೀಯ ಕ್ಲಿನಿಕ್ ಪ್ರಾರಂಭಗೊಂಡಿದೆ. ಶೀಘ್ರದಲ್ಲೇ ತುಂಬೆ ಮೆಡಿಸಿಟಿಯಲ್ಲಿ ತುಂಬೆ ಪಶುವೈದ್ಯಕೀಯ ಆಸ್ಪತ್ರೆಯ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2027ರ ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ದುಬೈ, ರಾಸ್ ಅಲ್ ಖೈಮಹ್‌ದಲ್ಲಿ ದೊಡ್ಡ ಮತ್ತು ಸಣ್ಣ ಪ್ರಾಣಿಗಳಿಗಾಗಿ ತುಂಬೆ ಫಾರ್ಮ್, ತುಂಬೆ ಪಶುವೈದ್ಯಕೀಯ ಪ್ರಯೋಗಾಲಯ, ತುಂಬೆ ಪಶುವೈದ್ಯಕೀಯ ಔಷಧಾಲಯ ಮತ್ತು ತುಂಬೆ ಪಶುವೈದ್ಯಕೀಯ ಕ್ಲಿನಿಕ್‌ಗಳು ಹಾಗೂ ದುಬೈಯಲ್ಲಿ ಪಶುವೈದ್ಯಕೀಯ ಚಿಕಿತ್ಸಾ ಕೌಶಲ್ಯ ಪ್ರಯೋಗಾಲಯ ಸ್ಥಾಪನೆಯಾಗಲಿವೆ ಮತ್ತು ಇವುಗಳು ತುಂಬೆ ಪಶುವೈದ್ಯಕೀಯ ಕಾಲೇಜಿನ ಭಾಗವಾಗಿರುತ್ತದೆ ಎಂದು ತಿಳಿಸಿದರು. 


ಈ ಹೊಸ ಯೋಜನೆಯ ಪ್ರಮುಖ ಅಂಶವೆAದರೆ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ಜಿಎಂಯು)ಯ ತುಂಬೆ ಕಾಲೇಜ್ ಆಫ್ ವೆಟರಿನರಿ ಮೆಡಿಸಿನ್ ಅಡಿಯಲ್ಲಿ ಪ್ರಾರಂಭವಾಗುತ್ತಿರುವ ಡಾಕ್ಟರ್ ಆಫ್ ವೆಟರಿನರಿ ಮೆಡಿಸಿನ್ (ಡಿವಿಎಂ) ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಪಶುವೈದ್ಯಕೀಯ ಪದವಿಗೆ ಯುಎಇಯ ಅಕಾಡೆಮಿಕ್ ಅಕ್ರಿಡಿಟೇಶನ್ ಆಯೋಗದಿಂದ ಪ್ರಾಥಮಿಕ ಅನುಮೋದನೆ ದೊರೆತಿದೆ. ಈ ಶಿಕ್ಷಣವು ಅಂತಾರಾಷ್ಟ್ರೀಯ ಮಟ್ಟದ ಪಠ್ಯಕ್ರಮವನ್ನು ಅನುಸರಿಸುತ್ತದೆ. ವರ್ಷಕ್ಕೆ 60 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶದೊಂದಿಗೆ, 30ಕ್ಕೂ ಹೆಚ್ಚು ಅಕಾಡೆಮಿಕ್ ಮತ್ತು ಕೈಗಾರಿಕಾ ಸಹಭಾಗಿತ್ವಗಳ ಮೂಲಕ ವಿದ್ಯಾರ್ಥಿಗಳಿಗೆ ಆಧುನಿಕ ಡಯಾಗ್ನೋಸ್ಟಿಕ್ಸ್, ಸಂಶೋಧನಾ ಅವಕಾಶಗಳು, ಕ್ಲಿನಿಕಲ್ ತರಬೇತಿ ಮತ್ತು ಅಂತಾರಾಷ್ಟಿçÃಯ ಮಟ್ಟದ ಅನುಭವಗಳನ್ನು ನೀಡಲಾಗುತ್ತದೆ.


ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಈಗಾಗಲೇ ವಿಶ್ವದ ಪ್ರಮುಖ ಪಶುವೈದ್ಯಕೀಯ ಶಿಕ್ಷಣ ಸಂಸ್ಥೆಗಳೊAದಿಗೆ ಸಹಯೋಗ ಹೊಂದಿದೆ. ರೋಯಲ್ ವೆಟರಿನರಿ ಕಾಲೇಜ್ ಲಂಡನ್, ಡಾನ್ ಸ್ಟೇಟ್ ಟೆಕ್ನಿಕಲ್ ಯೂನಿವರ್ಸಿಟಿ ರಷ್ಯಾ ಮತ್ತು ಯುರೋಪ್, ಏಷ್ಯಾ ಹಾಗೂ ಮಧ್ಯಪ್ರಾಚ್ಯದ ಇತರೆ ಸಂಸ್ಥೆಗಳೊAದಿಗೆ ಒಡಂಬಡಿಕೆಯ ಯೋಜನೆಗಳು ರೂಪುಗೊಂಡಿವೆ. ಈ ಸಹಭಾಗಿತ್ವವು ತರಬೇತಿಯ ವಿಧಾನಗಳು, ಬೋಧಕ ವರ್ಗದ ತರಬೇತಿ, ಸಂಯುಕ್ತ ಸಂಶೋಧನೆ ಹಾಗೂ ವಿದ್ಯಾರ್ಥಿಳಲ್ಲಿ ವಿಚಾರ ವಿನಿಮಯ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲಿವೆ.


ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಚಾನ್ಸಲರ್ ಪ್ರೊ. ಮಂಡಾ ವೆಂಕಟ್ರಮಣ ಅವರು ಮಾತನಾಡಿ “ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಪಶುವೈದ್ಯಕೀಯ ಶಿಕ್ಷಣದ ಆರಂಭವು ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ವೃತ್ತಿಪರರನ್ನು ಮಾನವೀಯತೆಯ ಸಮಗ್ರ ಸೇವೆಗೆ ಸಜ್ಜುಗೊಳಿಸುವ ಧ್ಯೇಯವನ್ನು ಸಾಕಾರಗೊಳಿಸುತ್ತದೆ. ‘ಒನ್ ಹೆಲ್ತ್’ ತತ್ವವು ಇನ್ನು ಆಯ್ಕೆಯಲ್ಲ ಅದು ಜಾಗತಿಕ ಅಗತ್ಯ. ವೈದ್ಯಕೀಯ ಮತ್ತು ಪಶುವೈದ್ಯಕೀಯ ಶಿಕ್ಷಣವನ್ನು ಒಂದೇ ಪರಿಸರದಲ್ಲಿ ತರಲು ಮತ್ತು ಜಾಗತಿಕ ಸಹಕಾರ ಬಲಪಡಿಸಲು ನಾವು ಕೈಗೊಂಡಿರುವ ಈ ಹೆಜ್ಜೆ, ಸಾರ್ವಜನಿಕ ಆರೋಗ್ಯ, ಆಹಾರ ಭದ್ರತೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಬೆಳವಣಿಗೆಯನ್ನು ತರಲಿದೆ ಎಂದರು.


ಇತ್ತೀಚಿನ ಜಾಗತಿಕ ಸಂದರ್ಭವು ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಪರಸ್ಪರ ಸಂಬAಧವನ್ನು ಸ್ಪಷ್ಟವಾಗಿ ತೋರಿಸಿದೆ. ಝೂನೋಟಿಕ್ ರೋಗ ನಿರ್ವಹಣೆ, ಆಹಾರ ಸುರಕ್ಷತೆ ಮತ್ತು ವನ್ಯಜೀವ ಸಂರಕ್ಷಣೆ ಇವುಗಳ ನಿರ್ವಹಣೆಯಲ್ಲಿ ಪಶುವೈದ್ಯ ತಜ್ಞರ ಪಾತ್ರ ಅಮೂಲ್ಯ. ಈ ಅಗತ್ಯತೆಯನ್ನು ಅರಿತು, ತುಂಬೆ ಗ್ರೂಪ್ ಪಶುವೈದ್ಯ ಶಿಕ್ಷಣ, ಸಂಶೋಧನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಹೊಸ ಪೀಳಿಗೆಯ ವೃತ್ತಿಪರರನ್ನು ತಯಾರಿಸಲು ಪ್ರಯತ್ನಿಸುತ್ತಿದೆ.


ಯುಎಇದಾದ್ಯಂತ ಹೊಸ ಪಶುವೈದ್ಯಕೀಯ ಕ್ಲಿನಿಕ್‌ಗಳ ಸ್ಥಾಪನೆ ಮತ್ತು ತುಂಬೆ ಮೆಡಿಸಿಟಿಯಲ್ಲಿ ಪಶುವೈದ್ಯ ಆಸ್ಪತ್ರೆಯ ನಿರ್ಮಾಣದ ಮೂಲಕ ತುಂಬೆ ಗ್ರೂಪ್ ಪಶುವೈದ್ಯಕೀಯ ಕ್ಷೇತ್ರದಲ್ಲಿ ಶ್ರೇಷ್ಠತೆ, ಸಮುದಾಯ ಆರೋಗ್ಯ ಮತ್ತು ಹೊಸ ಸಂಶೋಧನೆಗಳಿAದ ಭವಿಷ್ಯವನ್ನು ನಿರ್ಮಿಸುತ್ತಿದೆ. ಇದು ಸೇವೆಗಳ ವಿಸ್ತರಣೆಯಷ್ಟೇ ಅಲ್ಲ, ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಗೂ ಆರೋಗ್ಯಕರ ನಾಳೆಯನ್ನು ರೂಪಿಸುವ ದೃಷ್ಟಿಕೋಣವಾಗಿದೆ.


ಹೊಸ ಕೋರ್ಸಿಗೆ ದಾಖಲಾತಿ ಪ್ರಾರಂಭವಾಗಿದೆ. ಆಸಕ್ತ ವಿದ್ಯಾರ್ಥಿಗಳು ನಮ್ಮ ವೆಬ್‌ಸೈಟ್ www.gmu.ac.ae ಅನ್ನು ಭೇಟಿ ನೀಡಬಹುದು ಅಥವಾ ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯವನ್ನು ಸಂಪರ್ಕಿಸಬಹುದು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
To Top