ಹುನಗುಂದ: ಶ್ರೀ ಗಚ್ಚಿನಮಠ ಪೂಜ್ಯಶ್ರೀ ಲಿಂ. ಮ.ನಿ.ಪ್ರ. ಮುರಗೇಂದ್ರ ಮಹಾಸ್ವಾಮಿಗಳವರ 60ನೇ ಪುಣ್ಯಸ್ಮರಣೋತ್ಸವ, ವಿಶೇಷ ಉಪನ್ಯಾಸ, ಸಾಧಕರಿಗೆ ಸನ್ಮಾನ, ಅಯ್ಯಚಾರ ಮತ್ತು ಲಿಂಗದೀಕ್ಷೆ ಸಮಾರಂಭ ಮಹಾ ಶಿವಶರಣೆ ವರದಾನಿ ಗುಡ್ಡಾಪುರ ದಾನಮ್ಮದೇವಿಯ ಪುಣ್ಯ ಪುರಾಣ ಚರಿತಾಮೃತ 24-11-2025 ರಂದು ಸೋಮವಾರ ಸಂಜೆ ಪ್ರಾರಂಭಗೊಂಡಿತು.
ದಿವ್ಯ ಸಾನಿಧ್ಯವನ್ನು ಅಮಿನಗಡದ ಮ.ನಿ.ಪ್ರ. ಶ್ರೀ ಪ್ರಭುಶಂಕರೇಶ್ವರ ಗಚ್ಚಿನಮಠ ಶ್ರೀಗಳು ವಹಿಸಿ ಮಾತನಾಡಿ, ಶರಣರ ಸಂತರ ಜೀವನದ ಆದರ್ಶಗಳನ್ನು ಪುರಾಣ ಪ್ರವಚನಗಳ ಮೂಲಕ ತಿಳಿದುಕೊಂಡರೆ ನಮ್ಮ ಪರಂಪರೆ ಚರಿತ್ರೆಗಳನ್ನು ತಿಳಿದುಕೊಂಡರೆ ನಮ್ಮ ಬದುಕನ್ನು ಸುಂದರ ಗೊಳ್ಳುತ್ತದೆ ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು. ಕಳೆದ ವರ್ಷದಿಂದ ಹುನಗುಂದದ ಗಚ್ಚಿನಮಠದಲ್ಲಿ ಕಳೆದ ವರ್ಷದಿಂದ ಪ್ರಾರಂಭಗೊಂಡಿರುವ ಪುರಾಣ ಪ್ರವಚನಗಳು ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರ್ದೈವದ ಸಂಗತಿ ಎಂದರಲ್ಲದೆ ಯುವಕರಲ್ಲಿ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕತೆಯನ್ನು ರೂಡಿಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಯುವಕರು ಪಣತೊಡಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಕೈಗಾರಿಕೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ ಜಿ ನಂಜಯ್ಯನಮಠ, ಮನುಷ್ಯನ ಜೀವನದಲ್ಲಿ ನೆನಪುಗಳು ಮಧುರವಾಗಿರುತ್ತವೆ. ನೆನಪು ಸನ್ನಿವೇಶಕ ಕಣ್ಣಿಗೆ ಕಟ್ಟುವಂತೆ ಬರುತ್ತವೆ ಮನಸು ಹಗುರವಾಗಿಸಿಕೊಳ್ಳಲು ಸುಂದರ ಜೀವನಕ್ಕೆ ಆಧ್ಯಾತ್ಮಿಕತೆ ಬಹಳ ಅವಶ್ಯಕವಾಗಿದೆ. ಶರಣರ ಸಂತರ ದಾರ್ಶನಿಕರ ನಡೆದು ಬಂದ ದಾರಿಗಳನ್ನು ಪುರಾಣ ಪ್ರವಚನಗಳ ತಿಳಿದುಕೊಂಡು ಸನ್ಮಾರ್ಗ ದತ್ತ ಕೊಂಡೊಯ್ಯಲು ಇಂಥ ನಾಡಿನ ಇಂಥ ಮಠಮಾನ್ಯಗಳು ಶ್ರಮಿಸುತ್ತಿವೆ ಎಂದರು. ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಿಳಿದುಕೊಂಡರೆ ನಮ್ಮ ಬದುಕು ಅರಳಿಸುತ್ತವೆ ಎಂದ ಅವರು ತಮ್ಮ ಮಕ್ಕಳನ್ನು ಸನ್ಮಾರ್ಗದ ಕಡೆ ಓಯ್ಯಲು ಇಂಥ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಲು ಪಾಲಕರು ಮಕ್ಕಳಲ್ಲಿ ಪ್ರೇರೇಪಿಸಬೇಕಾಗಿದೆ ಎಂದರು.
ಪೂಜ್ಯಶ್ರೀ ಅಮರೇಶ್ವರ ದೇವರು ಗಚ್ಚಿನಮಠ, ಹುನಗುಂದ ಹೊಸಮಠ-ಮುದ್ದೇಬಿಹಾಳ, ನೇತೃತ್ವ ವಹಿಸಿ ಮಾತನಾಡಿ, ಈ ವರ್ಷ ನಮ್ಮ ಶ್ರೀಮಠದಲ್ಲಿ 12ನೇ ಶತಮಾನದಲ್ಲಿ ಸಾಮೂಹಿಕ ವಿವಾಹ ಮಾಡಿದ ಶರಣೆ ಗುಡ್ಡಾಪುರ ದಾನಮ್ಮಳ ಪುರಾಣವನ್ನು 11 ದಿನಗಳ ಪರ್ಯಂತರ ಆಯೋಜಿಸಲಾಗಿದೆ ಎಂದು ಶರಣೆ ಗುಡ್ಡಾಪುರದ ದಾನಮ್ಮ ನೊಂದವರ ಪಾಲಿನ ದೇವತೆ ದಾನಮ್ಮ ದೇವಿ ಎಂದರು.
ಶೇಖರಪ್ಪ ಜಿ. ಬಾದವಾಡಗಿ ಅಧ್ಯಕ್ಷರು, ಸಂಗಮೇಶ್ವರ ದೇವಸ್ಥಾನ ಜೀರ್ಣೋದ್ಧಾರ, ಜಾತ್ರಾ ಸಮಿತಿ, ಹುನಗುಂದ ಪ್ರವಚನಕಾರರು: ವೇ.ಮೂ. ಗಣೇಶ ಶಾಸ್ತ್ರಿಗಳು ಸಾ|| ಕಮತಗಿ ವಚನ ಸಂಗೀತ, ಹಾರ್ಮೋನಿಯಂ: ಹನಮಂತಕುಮಾರ ಮೇಟಿ ಸಾ. ಚಿಕ್ಕಮನ್ನಾಪೂರ ತಬಲಾ ವಾದಕ ಶ ಸಿದ್ದೇಶಕುಮಾರ ಅಂಗನಬಂಡಿ ವೇದಿಕೆಯಲ್ಲಿದ್ದರುಶಿಕ್ಷಕಿ ಗೀತಾ ತಾರಿವಾಳ ಪ್ರಾರ್ಥಿಸಿದರು. ಪ್ರಭು ಮಾಲ್ಗತ್ತಿ ಮಠ ಆಶಯ ನುಡಿ ಹೇಳಿದರು. ಡಾ ಶಿವಗಂಗಾ ರಂಜನಿಗಿ ಹಾಗೂ ಸಂಗಮೇಶ ಹೋದ್ಲೂರ ನಿರೂಪಿಸಿದರು. ಅರುಣೋದಯ ದುದ್ದಿಗಿ ವ೦ದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ






