ಜೀವಾಮೃತ ಮಿಶ್ರಣಕ್ಕಾಗಿ ಸೌರ ಚಾಲಿತ ಯಂತ್ರ

Upayuktha
0

ಗಮನಸೆಳೆದ ರೈತ  ಶರಣಬಸಪ್ಪ ಅವರ ಸರಳ ಉಪಕರಣ



ವಿಶೇಷ ವರದಿ: ರಾಮಚಂದ್ರ ಮುಳಿಯಾಲ


ಬೆಂಗಳೂರು: ಸ್ಟಾರ್ಟಪ್‌ಗಳ ಭರಾಟೆ, ಟೆಕ್ ಸಂತೆಯ ಮಧ್ಯೆ ಆವಿಷ್ಕಾರಿ ರೈತರೊಬ್ಬರು ಗಮನ ಸೆಳೆಯುವಂತಿದ್ದರು. ಸಾವಯವ ಕೃಷಿಗೆ ಅತ್ಯಗತ್ಯವಾಗಿರುವ ಜೀವಾಮೃತವನ್ನು ಸಮಯಕ್ಕೆ ಸರಿಯಾಗಿ ಮಿಶ್ರಣ ಮಾಡುವ ಸ್ವಯಂಚಾಲಿತ ಸೌರ ಯಂತ್ರ ಬಂದಿದೆ.


ಜೀವಾಮೃತ ತುಂದಿದ ದೊಡ್ಡ ಡ್ರಮ್‌ಗೆ 7 ದಿನ ಕೋಲು ಹಾಕಿ ಕಲಕುವುದು ತುಸು ಶ್ರಮದಾಯಕ. ಜತೆಗೆ, 2 ದಿನ ಕಳೆದ ಕೂಡಲೇ ಅದು ವಾಸನೆ ಬರತೊಡಗುತ್ತದೆ. ಹಾಗಾಗಿ ಕೆಲಸದವರೂ ಹಿಂದೇಟು ಹಾಕುತ್ತಾರೆ, ಸಮರ್ಪಕವಾಗಿ ಮಿಶ್ರಗೊಳಿಸದೇ ಇದ್ದರೆ, ಜೀವಾಣುಗಳು ಸಮರ್ಪಕವಾಗಿ ಅಭಿವೃದ್ಧಿಗೊಳ್ಳುವುದಿಲ್ಲ.


ಕಲಬುರ್ಗಿಯ ರೈತ ಶರಣಬಸಪ್ಪ ಪಿ.ಪಾಟೀಲ್ ಅವರು ಇದಕ್ಕೆ ಪರಿಹಾರವಾಗಿ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರವನ್ನು 200-300 ಲೀ. ಜೀವಾಮೃತ ದ್ರಾವಣ‌ ತುಂಬಿದ ಡ್ರಮ್‌ಗೆ ಅದ್ದಿ ಇರಿಸಿದರಾಯಿತು. ಟೈಮರ್ ಹೊಂದಿರುವ ಸೌರ ಚಾಲಿತ ಈ ಯಂತ್ರವು ದಿನಕ್ಕೆ 3 ಬಾರಿಯಂತೆ 7 ದಿನ ಸಮಯಕ್ಕೆ ಸರಿಯಾಗಿ ಮಿಶ್ರಗೊಳಿಸುತ್ತದೆ. ಸಮಯ, ಶ್ರಮ ಎರಡೂ ಉಳಿತಾಯವಾಗುತ್ತದೆ. ಪೇಟೆಂಟ್‌ನೊಂದಿಗೆ ಈ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಬೆಲೆ 7,000 ರೂ. ಇರಲಿದೆ ಎಂದು ಅವರ ಪುತ್ರ ಮಲ್ಲಿಕಾರ್ಜುನ್ ವಿವರಿಸಿದರು.


ಸ್ವತಃ ರೈತರಾಗಿರುವ ಶರಣಬಸಪ್ಪ ಅವರು ಈಗಾಗಲೇ ಕೃಷಿಕರಿಗೆ ಉಪಯುಕ್ತವಾಗುವಂತಹ ವಿವಿಧ 25 ಸರಳ ಉಪಕರಣಗಳನ್ನು ಅಭಿವೃದ್ಧಿಪಡಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶರಣಬಸಪ್ಪ ಪಿ.ಪಾಟೀಲ್ ಅವರ ಸಂಪರ್ಕ ಸಂಖ್ಯೆ: 9900438541


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Advt Slider:
To Top