ಕೃಷಿ ಕ್ಷೇತ್ರದ ಸುಧಾರಣೆಗಾಗಿ ಬಂದಿದೆ ಡಿಜಿಟಲ್ ಅಗ್ರಿ ಮಿಶನ್
ವಿಶೇಷ ವರದಿ: ರಾಮಚಂದ್ರ ಮುಳಿಯಾಲ
ಬೆಂಗಳೂರು: ಹವಾಮಾನ ವೈಪರೀತ್ಯ, ಉತ್ಪಾದನೆ ಕುಸಿತ, ವೆಚ್ಚ ಹೆಚ್ಚಳ, ಬೆಲೆ ಅಸ್ಥಿರತೆಯಂತಹ ಕಾರಣಗಳಿಂದ ಗ್ರಾಮೀಣ ಜನರು ಕೃಷಿಗೆ ಬೆನ್ನುತೋರಿಸುತ್ತಿದ್ದಾರೆ. ರೈತ ಮಕ್ಕಳನ್ನು ಮರಳಿ ಹಳ್ಳಿಗೆ, ಕೃಷಿಗೆ ಕರೆತರಬೇಕಾಗಿದೆ. ಈ ನಿಟ್ಟಿನಲ್ಲಿ ಕೃಷಿಗೆ ಆಧುನಿಕ ತಂತ್ರಜ್ಞಾನಗಳ ಬಳಕೆ ನೆರವಾಗಲಿದೆ ಎಂದು ನಬಾರ್ಡ್‌ನ ಉಪ ವ್ಯವಸ್ಥಾಪಕ ನಿರ್ದೇಶಕರಾದ ಗೋವರ್ಧನ್ ಸಿಂಗ್ ರಾವತ್ ಹೇಳಿದರು.
ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮಿಟ್‌ನ ಎರಡನೇ ದಿನವಾದ ನ.19 ರಂದು “ಕೃಷಿ ಬಯೋಟೆಕ್ ಮತ್ತು ಆಹಾರ ನಾವೀನ್ಯತೆ” ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಸರ್ಕಾರ ಇತ್ತೀಚೆಗೆ ಡಿಜಿಟಲ್ ಅಗ್ರಿ ಮಿಶನ್ (ಡಿಎಎಂ) ಆರಂಭಿಸಿದ್ದು, ಇದರ ಅಡಿಯಲ್ಲಿ ರೈತರ ಹೊಲ, ರೈತರು ಹಾಗೂ ಕೃಷಿಯ ಡಿಜಿಟಲ್ ಡೇಟಾ ಸಂಗ್ರಹಿಸಲಾಗುತ್ತದೆ. ಈ ಡೇಟಾವನ್ನು ಆಧರಿಸಿ ಅಗ್ರಿ ಟೆಕ್ ಕಂಪನಿಗಳು ರೈತರಿಗೆ ನವೀನ ಪರಿಹಾರಗಳನ್ನು ಒದಗಿಸಬಲ್ಲವು. ಬಿತ್ತನೆಪೂರ್ವ ಹಂತದಿಂದ ಮಾರುಕಟ್ಟೆ ಸಲಹೆಯ ತನಕ ಎಲ್ಲಾ ಹಂತಗಳಲ್ಲೂ ನಿಖರ ಸಲಹೆ ನೀಡಲಾಗುತ್ತದೆ. ಬೆಳೆ ಯೋಜನೆ, ಹವಾಮಾನ ಮುನ್ಸೂಚನೆ, ಗೊಬ್ಬರ, ನೀರಾವರಿ, ಕೀಟ ನಿಯಂತ್ರಣ ಮಾರುಕಟ್ಟೆ, ವಿಮೆ ಇತ್ಯಾದಿ ಕೃಷಿಯ ಸಂಪೂರ್ಣ ಮಾಹಿತಿಯನ್ನು ರೈತರು ಪಡೆಯಬಹುದಾಗಿದೆ ಎಂದು ರಾವತ್ ವಿವರಿಸಿದರು.
ಭಾರತದಲ್ಲಿ 2047ರ ವೇಳೆಗೆ 402 ಟನ್ ಆಹಾರ ಧಾನ್ಯಗಳು, 365 ಟನ್ ತರಕಾರಿಗಳು, 480 ಟನ್ ಹಾಲಿನ ಬೇಡಿಕೆ ಬರಲಿದ್ದು, ಇದರ ಪೂರೈಕೆಗೆ ಕೃಷಿ ಕ್ಷೇತ್ರ ಸಜ್ಜಾಗಬೇಕು. ರೈತನ ಹೊಲಕ್ಕೆ ತಂತ್ರಜ್ಞಾನ ಇಳಿಯಬೇಕು. ಮಣ್ಣು, ಹವಾಮಾನ, ಇಳುವರಿ ಬಗ್ಗೆ ನಿಖರ ಜ್ಞಾನದೊಂದಿಗೆ ರೈತರು ಕೃಷಿ ಮಾಡುವಂತಾಗಬೇಕು +ಎಂದು ಅಭಿಪ್ರಾಯಪಟ್ಟರು.
ಕೃಷಿ ಕ್ಷೇತ್ರಕ್ಕೆ ಪರಸ್ಪರ ಸಂಬಂಧ ಹೊಂದಿರುವ ಹವಾಮಾನ ಬದಲಾವಣೆ, ಸುಸ್ಥಿರ ಉತ್ಪಾದಕತೆ ಹಾಗೂ ಮೌಲ್ಯ ಸೇರ್ಪಡೆ ಮುಖ್ಯವಾಗಿದ್ದು, ಈ ಪ್ರತಿಯೊಂದರ ಮೇಲೆ ವ್ಯಾಪಕ ಸಂಶೋಧನೆ, ಆವಿಷ್ಕಾರಗಳು ನಡೆಯಬೇಕಿವೆ ಎಂದು ಐಆರ್‌ಆರ್‌ಐ ಫಿಲಿಪ್ಪೀನ್ಸ್‌ನ ಮಾಜಿ ನಿರ್ದೇಶಕರಾದ ಅಜಯ್ ಕೊಹ್ಲಿ ಹೇಳಿದರು.
ಸ್ಥಾಯಿಕಾ ಸೀಡ್ಸ್ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಕೆ.ನಾರಾಯಣನ್ ಅವರು ಸಂವಾದವನ್ನು ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ






