ಅಳವಡಿಸಿಕೊಳ್ಳಬೇಕಿದೆ ಡಿಜಿಟಲ್ ಇಂಧನ ಗ್ರಿಡ್‌

Upayuktha
0

ಭವಿಷ್ಯದಲ್ಲಿ ಇಂಧನ ಕ್ಷೇತ್ರದ ದಕ್ಷತೆಗಾಗಿ ಸರ್ಕಾರಕ್ಕೆ ಮನವಿ



ವಿಶೇಷ ವರದಿ: ರಾಮಚಂದ್ರ ಮುಳಿಯಾಲ


ಬೆಂಗಳೂರು: ಎಲ್ಲಾ ಇಂಧನ ಸಂಪನ್ಮೂಲಗಳು, ಪ್ರಸರಣಗಳು ಮತ್ತು ಭಾಗೀದಾರರನ್ನು ಒಗ್ಗೂಡಿಸುವ ಏಕೀಕೃತ, ಪರಸ್ಪರ ಮಾಹಿತಿ ವಿನಿಮಯಗೊಳಿಸುವ ಡಿಜಿಟಲ್ ಮೂಲಸೌಕರ್ಯವಾದ, ಡಿಜಿಟಲ್ ಇಂಧನ ಗ್ರಿಡ್ ಅನ್ನು ಭಾರತ ಅಧಿಕೃತ ಮೂಲಸೌಕರ್ಯವಾಗಿ ಅಳವಡಿಸಿಕೊಳ್ಳಬೇಕು ಎಂದು ಎಫ್ಐಡಿಇ ಸಂಸ್ಥೆಯ ಸಹಸಂಸ್ಥಾಪಕರಾದ ಸುಜಿತ್ ನಾಯರ್ ಮನವಿ ಮಾಡಿದ್ದಾರೆ.


ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮಿಟ್‌ನ ಎರಡನೇ ದಿನವಾದ ನ.19 ರಂದು “ಭವಿಷ್ಯದ ಇಂಧನ ಕ್ಷೇತ್ರ” ಕುರಿತು ಅವರು ಮಾತನಾಡಿದರು.


ಸಾಂಪ್ರದಾಯಿಕ ಗ್ರಿಡ್‌ಗಳ ಸ್ಥಾನದಲ್ಲಿ ಡಿಜಿಟಲ್ ಗ್ರಿಡ್‌ಗಳು ಬಂದರೆ, ಅಸೆಟ್‌ಗಳನ್ನು ಡಿಜಲೀಕರಣಗೊಳಿಸುವುದರಿಂದಾಗಿ ನೈಜ ಸಮಯದ ಡೇಟಾ ವಿನಿಮಯ ಸಾಧ್ಯವಾಗುತ್ತದೆ. ನವೀಕರಿಸಬಹುದಾದ ಇಂಧನ ಮತ್ತು ಇವಿಗಳಂತಹ ವಿಕೇಂದ್ರೀಕೃತ ಇಂಧನ ಮೂಲಗಳನ್ನು ಸಮಗ್ರಗೊಳಿಸಬಹುದು. ಅನುಕೂಲಕರ ಪಿ2ಪಿ ವ್ಯಾಪಾರ ಮತ್ತು ಹೊಸ ಇಂಧನ ಸೇವೆಗಳಿಗೆ ಅವಕಾಶವೂ ದೊರೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.


ಇದೇ ವೇಳೆ, ಇಂಧನ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಸ್ಟಾರ್ಟಪ್‌ಗಳ ಪ್ರಮುಖರು ಹೊರಹೊಮ್ಮುತ್ತಿರುವ ಹಸಿರು ಇಂಧನ ಕ್ಷೇತ್ರದ ಕುರಿತು ಚರ್ಚಿಸಿದರು. ಕೈಗಾರಿಕಾ ತ್ಯಾಜ್ಯ ನೀರಿನಿಂದ ಜಲಜನಕ ಇಂಧನ ತಯಾರಿಕೆ, ವೇಗದ ಇವಿ ಚಾರ್ಜಿಂಗ್ ಸೊಲ್ಯೂಶನ್ ನೀಡುವಿಕೆ, ಬಿಲ್ಡಿಂಗ್ ನಿರ್ವಹಣೆಯಲ್ಲಿ ಆಟೊಮೇಶನ್‌ನಂತಹ ಸ್ಟಾರ್ಟಪ್‌ಗಳ ಪರಿಚಯ ಮಾಡಿದರು.



Post a Comment

0 Comments
Post a Comment (0)
Advt Slider:
To Top