ವಿವೇಕಾನಂದ ವಿದ್ಯಾಲಯದಲ್ಲಿ 'ಶಾಲೆಯೆಡೆಗೆ ಶಂಕರ' ಆಭಿಯಾನ

Upayuktha
0


ಹಾಸನ:  ಮನೆಮನೆಯಲ್ಲಿ ಶ್ರೀ ಶಂಕರ ತತ್ತ್ವ ಪ್ರಸಾರ ಪ್ರತಿಷ್ಠಾನವು ನಗರದ ಶ್ರೀ ವಿವೇಕಾನಂದ ವಿದ್ಯಾಲಯದಲ್ಲಿ ಶಾಲೆಯೆಡೆಗೆ ಶಂಕರ ಆಭಿಯಾನದಲ್ಲಿ ಪ್ರತಿಷ್ಠಾನದ 97 ಕಾರ್ಯಕ್ರಮವನ್ನು ಗುರುವಾರ ಅಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪರಮೇಶ್ವರ ಭಟ್ ರವರು ಶ್ರೀ ಶಂಕರರ ಕುರಿತು ಮಕ್ಕಳಿಗೆ ಮನನವಾಗುವಂತೆ ಪ್ರವಚನ ಮಾಡಿದರು.


ಶಾಲೆಯ ಅಧ್ಯಕ್ಷ ಉದಯಕುಮಾರ್, ವೆಂಕಟೇಶ್, ಶಿಕ್ಷಕರು, ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ಮಕ್ಕಳು ಪ್ರವಚನಕಾರರ ಪ್ರಶ್ನೆಗಳಿಗೆ ಸಮಪರ್ಕವಾಗಿ ಉತ್ತರಿಸಿದರು. ಮಕ್ಕಳಿಗೆ ಶಂಕರರ ಪ್ರಶ್ನೋತ್ತರ ಮಾಲಿಕೆಯ ಪುಟ್ಟ ಪ್ರಸ್ತಕಗಳನ್ನು ಪ್ರಸಾದವನ್ನು ವಿತರಿಸಲಾಯಿತು‌. ಪ್ರತಿಷ್ಠಾನದ ಅಧ್ಯಕ್ಷ ಹೆಚ್.ಎಸ್ ಬಾಲಸುಬ್ರಹ್ಮಣ್ಯ ಪ್ರಸಾದ್ ಪ್ರತಿಷ್ಠಾನದ ಕುರಿತು ಮಾಹಿತಿ ನೀಡಿದರು ಪ್ರಸನ್ನ ಇತರ ವಿಶ್ವಸ್ತರುಗಳಿದ್ದರು.


ಚಂದ್ರಶೇಖರ ರವರು ಸ್ವಾಗತಿಸಿದರು. ಶ್ರೀಮತಿ ಅನಸೂಯರವರು ವಂದಿಸಿದರು. ವೆಂಕಟೇಶ್ ರವರು ಸಂಸ್ಥೆಯ ವತಿಯಿಂದ ಗೌರವಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top