ನ.28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಡನೆ ಗೀತಾ ಪಠಣ
ಉಡುಪಿ: ಪರಮ ಪೂಜ್ಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರ ಚತುರ್ಥ ಪರ್ಯಾಯದ ಪ್ರತಿಷ್ಟಿತ ಕಾರ್ಯಕ್ರಮವಾದ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ.
ಇದೇ ನವೆಂಬರ್ 28, ಶುಕ್ರವಾರದಂದು ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳೊಡನೆ ಭಗವದ್ಗೀತೆಯನ್ನು ಪಠಿಸಲು ಸಮಾಜದ ಪ್ರಮುಖರ ಸಭೆಯನ್ನು ಇಂದು ಕರೆಯಲಾಯಿತು. ಕನಕ ಮಂಟಪದಲ್ಲಿ ನಡೆದ ಈ ಚಿಂತನಾ ಸಭೆಯಲ್ಲಿ ದಿವಾನರಾದ ಶ್ರೀ ನಾಗರಾಜ ಆಚಾರ್ಯರು ಮತ್ತು ಬೃಹತ್ ಗೀತೋತ್ಸವದ ಸಂಚಾಲಕರಾದ ಸುಪ್ರಸಾದ ಶೆಟ್ಟಿಯವರು ಮಾತನಾಡಿ ವಿಸ್ತೃತವಾದ ಮಾಹಿತಿಗಳನ್ನು ನೀಡಿ ಸರ್ವರ ಸಹಕಾರವನ್ನು ಕೋರಿದರು.
ಸಭೆಯಲ್ಲಿ ವಿಶ್ವಕರ್ಮ ಸಮಾಜ, ಪದ್ಮಶಾಲಿ ಸಮಾಜ, ಶ್ರೀ ಶಾರದೋತ್ಸವ ಸಮಿತಿ, ಸೋಮ ಕ್ಷತ್ರಿಯ ಸಮಾಜ, ರಾಮಕ್ಷತ್ರಿಯ ಸಮಾಜ, ದೇವಾಡಿಗ ಸಮಾಜ, ಕೇರಳ ಸಮಾಜ, ಸಣ್ಣ ಕೈಗಾರಿಗೆಗಳ ಸಂಘ, I.M.A., ಬ್ರಾಹ್ಮಣ ಸಮಾಜ, R.S.B. ಸಮಾಜ, ದೈವಜ್ಞ ಬ್ರಾಹ್ಮಣ ಸಮಾಜ, ಯುವ ಬ್ರಾಹ್ಮಣ ಪರಿಷತ್, ವಿವಿಧ ಭಜನಾ ಮಂಡಳಿಗಳು, ಜೋಗಿ ಸಮಾಜ, ಪತಂಜಲಿ ಯೋಗ ಸಮಿತಿ, ಸೌಂದರ್ಯ ವರ್ತಕರ ಸಂಘ, ಟೈಲರ್ಸ್ ಅಸೋಸಿಯೇಶನ್, ಮೊಗವೀರ ಸಮಾಜ, ಮಠದಬೆಟ್ಟು ಯುವಕ ಮಂಡಲ, ಅಶ್ವಥಕಟ್ಟೆ ಭಕ್ತವೃಂದ, ಸರಕಾರಿ ನಿವೃತ್ತ ಅಧಿಕಾರಿಗಳ ಸಂಘ, ತುಳು ಶಿವಳ್ಳಿ ಬ್ರಾಹ್ಮಣ ಸಂಘ, ಆಯುಶ್, G.S.B. ಸಮಾಜ, ಪಣಿಯಾಡಿ ದೇವಸ್ಥಾನ, ಯಕ್ಷಗಾನ ಕಲಾರಂಗ, ಚಕ್ರತೀರ್ಥ ಯುವಕ ಸಂಘ, ತಾಲೂಕು ವಿಪ್ರ ಮಹಿಳಾ ತಂಡ, ಮೊದಲಾದ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.
ಸಭೆಯಲ್ಲಿ ಶ್ರೀ ಪ್ರಮೋದ್ ಸಾಗರ್ ಸ್ವಾಗತಿಸಿದರು, ಶ್ರೀ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನ ಆಚಾರ್ಯ, ಡಾ. ಸುರೇಶ್ ಶೆಣೈ, ಜಯರಾಮ ಆಚಾರ್ಯ, ವಿಶ್ವನಾಥ ನಾಯಕ್, ರಮಣ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಜಿ.ವಿ. ಆಚಾರ್ಯ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

