ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ
ಮಂಗಳೂರು: ಸ್ಥಳೀಯ ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಸಂಸ್ಥೆಗಳ ವತಿಯಿಂದ ನ. 11 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ವಿದ್ಯಾರ್ಥಿನಿ ಹಲೀಮಾ ಶಹರೀನ್ ಅವರಿಂದ ರಾಜ್ಯೋತ್ಸವದ ಮಹತ್ವದ ಪಠಣ ನಂತರ ಮಂಗಳೂರಿನ ಮಂಗಳಾ ಅಸತ್ರೆಯ ಶಸ್ತ್ರ ಚಿಕಿತ್ಸಕ ಮೂಲವ್ಯಾಧಿ ಕ್ಷಾರ ತಜ್ಞ ಹಾಗೂ ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ ಮತ್ತು ಹಲವಾರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಬಜಾಲ್ ಪಕ್ಕಲಡ್ಕ ಸುಹಾಸ ಕ್ಲಿನಿಕ್ಕಿನ ಡಾ ಸುರೇಶ ನೆಗಳಗುಳಿ ಮುಖ್ಯ ಅತಿಥಿಗಳಾಗಿದ್ದರು.
ಅವರು ಮಾತನಾಡುತ್ತಾ ಆಂಗ್ಲ ಮಾಧ್ಯಮ ಶಾಲೆಯಾದರೂ ಕನ್ನಡವನ್ನು ಪ್ರೀತಿಸುವ ಸಂಸ್ಥೆಯ ನಿಲುವಿಗೆ ಸಂತಸ ವ್ಯಕ್ತಪಡಿಸುತ್ತ ಕನ್ನಡವು ಅತಿಥೇಯ ಹಾಗೂ ಇಂಗ್ಲಿಷ್ ಅತಿಥಿ ಎಂಬ ರೀತಿ ಕಾಣಬೇಕು ಹಾಗೂ ಸ್ವಭಾಷೆ ಸದಾ ಅದರಣೀಯ ಎಂದರು. ನಂತರ ಎರಡೂ ಭಾಷೆಯಲ್ಲಿ ತಾವೇ ಬರೆದ ಕನ್ನಡದ ಹಿರಿಮೆ ಬಣ್ಣಿಸುವ ಹಾಡು ಮತ್ತು ಮುಕ್ತಕವನ್ನು ವಾಚಿಸಿದರು.
ಪ್ರಾಚಾರ್ಯರಾದ ಶ್ರೀಮತಿ ಫಿರೋಜ ಅವರು ಅಧ್ಯಕ್ಷತೆ ವಹಿಸಿದ್ದು. ಕನ್ನಡ ಭಾಷೆಯ ಅಂದ ಹಾಗೂ ಸರಳತೆಯನ್ನು ಕೊಂಡಾಡಿದರು. ಆಂಗ್ಲ ಮಾಧ್ಯಮ ಸಂಸ್ಥೆಯಲ್ಲಿ ಕೂಡಾ ದ್ವಿತೀಯ ಭಾಷೆಯಾಗಿರುವ ಕನ್ನಡವನ್ನು ತೊರೆಯಬಾರದು ಎಂಬುದನ್ನು ಮರೆಯಬಾರದು ಎಂದರು.
ಕಾರ್ಯ ನಿರ್ವಾಹಕ ಆಡಳಿತಧಿಕಾರಿ ಸುಶೀಲ್ ಬಾಲರಾಜ್, ವಿಭಾಗ ಮುಖ್ಯಸ್ಥರಾದ ಶ್ರೀಮತಿ ಅನಿತಾ ಕುಮಾರಿ, ಅಧ್ಯಾಪಿಕೆಯರಾದ ಬಬಿತಾ, ಶರ್ಮಿಳಾ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ವಿದ್ಯಾರ್ಥಿನಿಯರ ಕನ್ನಡ ನಾಡಗೀತೆ, ಮತ್ತಿತರ ಗಾಯನ ಮತ್ತು ನೃತ್ಯ ಗಳು ಮನ ಸೆಳೆದವು. ಶಿಕ್ಷಕಿ ಬಬಿತ ಎಸ್ ಕರ್ಕೇರ ಅವರ ಮಾರ್ಗದರ್ಶನದಲ್ಲಿ ಕುಮಾರಿ ಆಯಿಷಾ ತಹಾನಿ ನಿರೂಪಣೆ ಮಾಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

