ಆರ್​ಎಸ್​ಎಸ್: ಅನನ್ಯ ರಾಷ್ಟ್ರಭಕ್ತಿಯ ಕೇಂದ್ರ

Upayuktha
0

ಆರೆಸ್ಸೆಸ್‌ ದಂಡ ಕಂಡರೇಕೆ ಪ್ರಿಯಾಂಕ್ ಖರ್ಗೆಗೆ ಭಯ....?




- ಟಿ. ದೇವಿದಾಸ್


ರ್​ಎಸ್​ಎಸ್​ ನಿಷೇಧ ಮಾಡಿ ಅಂತ ನಾನು ಎಲ್ಲಿ ಯಾವಾಗ ಹೇಳಿದ್ದೇನೆ. ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆ ಬೇಡ ಅಂದಿದ್ದೇನೆ ಅಷ್ಟೇ. ನಾನು ಒಬ್ಬ ಹಿಂದೂ. ಆದರೆ ಹಿಂದೂ ಧರ್ಮದ ವಿರೋಧಿ ಅಲ್ಲ. ನಾನು ಆರ್​ಎಸ್​ಎಸ್ ನ ವಿರೋಧಿ. ಕರಾವಳಿ, ಮಲೆನಾಡಿನಲ್ಲಿ ಯಾರು ಬಲಿಯಾಗಿದ್ದಾರೆ? ಅವರ ಮಾಹಿತಿಯನ್ನ ತೆಗೆಯಿರಿ. ಬೇರೆ ಸಂಘಟನೆಯವರು ದೊಣ್ಣೆ ಹಿಡಿದು ಓಡಾಡಿದ್ರೆ ಒಪ್ತಾರಾ? ದಲಿತ, ಹಿಂದುಳಿದ ಸಂಘಟನೆ ಹಿಡಿದ್ರೆ ಒಪ್ತಾರಾ? ಶಾಲೆಗಳಲ್ಲಿ ಆರ್​ಎಸ್​ಎಸ್ ಬ್ರೈನ್ ವಾಷಿಂಗ್ ನಿಲ್ಲಬೇಕು‌. ಮೋಸ್ಟ್ ಸೀಕ್ರೆಟ್ ಆರ್ಗನೈಸೇಷನ್ ಆರ್​ಎಸ್​ಎಸ್. ಬಿಜೆಪಿ ಆರ್​ಎಸ್​ಎಸ್ ನ ಕೈಗೊಂಬೆ. ಆರ್​ಎಸ್​ಎಸ್ ಇಲ್ಲದೆ ಬಿಜೆಪಿ ಶೂನ್ಯ. ಧರ್ಮ ಇಲ್ಲದೆ ಆರ್​ಎಸ್​ಎಸ್ ಝೀರೋ.


"ಸರ್ದಾರ್ ಪಟೇಲ್ ಆರ್​ಎಸ್​ಎಸ್ ಬ್ಯಾನ್ ಮಾಡಿದ್ದರು. ಇತಿಹಾಸದ ಪುಟವನ್ನು ತಿರುಗಿಸಿ ಆರ್​ಎಸ್​ಎಸ್ ಓದಲಿ. ಸಂಘದವರು ಬಂದು ಪಟೇಲರ ಕೈ ಕಾಲಿಗೆ ಬಿದ್ದಿದ್ರು. ನಾವು ಕೇಂದ್ರದ ನಿಯಮಗಳನ್ನು ಪಾಲಿಸುತ್ತೇವೆ. ನಮ್ಮ ನಿಯತ್ತು ರಾಷ್ಟ್ರ ಧ್ವಜಕ್ಕೆ ಇರುತ್ತದೆ. ಹೀಗಂತ ಆಗ ಕ್ಷಮೆ ಕೋರಿದ್ದರು. ಆಗ ಆರ್​ಎಸ್​ಎಸ್ ಬ್ಯಾನ್ ತೆರವು ಮಾಡಲಾಗಿತ್ತು. ಇದು ವಿಷಕಾರಿ ಎಂದು ನೆಹರು ಅವರಿಗೆ ಆಗ ಪಟೇಲರೇ ಪತ್ರ ಬರೆದಿದ್ದರು. ಬಿಜೆಪಿಯವರು ಈಗ ಪಟೇಲರ ಪ್ರತಿಮೆ ಕಟ್ಟಿದ್ದಾರೆ. ಅವರೇ ಹೇಳಿರೋದು ಇದು ವಿಷಕಾರಿ ಅಂತ. ಕೈಕಾಲಿಗೆ ಬಿದ್ದಾಗ ಪಟೇಲರು ಓಕೆ ಅಂದಿದ್ರು".


ಆರ್​ಎಸ್​ಎಸ್ ನವರು ಹೇಡಿಗಳು. ಅವರ ಇತಿಹಾಸದ ಪುಟ ತೆಗೆದು ನೋಡಿ. ಸಾವರ್ಕರ್ ಬ್ರಿಟಿಷರಿಂದ ಪೆನ್ಶನ್ ತೆಗೆದುಕೊಳ್ತಿದ್ದರು. ಅವರು ದೇಶ ಭಕ್ತರಾ? ರಾಷ್ಟ್ರಧ್ವಜವನ್ನೇ ಅವರ ಕಚೇರಿ ಮೇಲೆ ಹಾಕಿರಲಿಲ್ಲ. ಇಂಥವರು ಹೇಗೆ ದೇಶ ಭಕ್ತರಾಗ್ತಾರೆ. ಯಾವ ಸಂಘಟನೆ ರಾಷ್ಟ್ರದ ನಿಯಮ ಪಾಲಿಸಲ್ಲ. ರಿಜಿಸ್ಟ್ರೇಷನ್ ಕೂಡ ಮಾಡಿಸದಿದ್ದರೆ ದೇಶಭಕ್ತರಾ? ಮೋಹನ್ ಭಾಗವತರಿಗೆ ಅಷ್ಟು ಸೆಕ್ಯೂರಿಟಿ ಯಾಕೆ? ಗೃಹಸಚಿವರಿಗೆ ಇರುವಷ್ಟು ಭದ್ರತೆ ಅವರಿಗೆ ಯಾಕೆ? ನಿಮ್ಮ ಮನೆಯಲ್ಲಿ ಆಚರಣೆ ಮಾಡಿ ಯಾರು ಬೇಡ ಅಂತಾರೆ? ಜೋಶಿಯವರ ಮಕ್ಕಳು ಗಣವೇಷ ಹಾಕಲಿ. ಗಣವೇಷ ಹಾಕಿ ಆಚರಣೆ ಮಾಡಲಿ ಬೇಡ ಅನ್ನಲ್ಲ. ಅವರ ಮಕ್ಕಳಿಗೆ ಒಂದು ನಿಯಮ. ಬಡವರ ಮಕ್ಕಳಿಗೆ ಒಂದು ನಿಯಮ ಯಾಕೆ?" 


ಜೋಶಿ, ಅಶೋಕ್​, ಠಾಕೂರ್ ಅವರ ಮಕ್ಕಳಿಗೆ ಹಾಕಿಸಲಿ. ದೆಹಲಿಯ ಕ್ಯಾಬಿನೆಟ್ ಸಚಿವರ ಮಕ್ಕಳು ಏನ್ಮಾಡ್ತಿದ್ದಾರೆ.‌ ಇವರ ಮಕ್ಕಳೆಲ್ಲ ಯಾಕೆ ಗಣವೇಷ ಹಾಕಲ್ಲ. ಇವರ ಮಕ್ಕಳೆಲ್ಲ ಯಾಕೆ ಗೋಮೂತ್ರ ಕುಡಿಯಲ್ಲ. ಇವರ ಮಕ್ಕಳು ಯಾಕೆ ಗಂಗೆಯಲ್ಲಿ ಮುಳಗಲ್ಲ. ಇವರ ಮಕ್ಕಳು ಗೋರಕ್ಷಣೆಗೆ ಯಾಕೆ ಹೋಗಲ್ಲ. ಇದರ ಬಗ್ಗೆ ಅವರು ಮೊದಲು ಹೇಳಲಿ. ಆರ್​ಎಸ್​ಎಸ್ ರಿಜಿಸ್ಟರ್ ಆಗಿದ್ರೆ ಒಂದಾದ್ರೂ ಕಾಪಿ ಕೊಡಿ. ಎಲೆಕ್ಷನ್ ಬಂದಾಗ ಗಣವೇಷ ಹಾಕ್ತಾರೆ. ನಿನ್ನೆ ಮುನಿರತ್ನ ಅವರು ಗಣವೇಷ ಹಾಕಿದ್ರು. ಗಾಂಧೀಜಿಯವರ ಫೋಟೋ ಹಿಡಿದಿದ್ರು. ಅವರಿಗೆ ಇತಿಹಾಸವೇ ಗೊತ್ತಿಲ್ಲ. ಗಾಂಧಿ ಕೊಂದವರು ಅವರ ಫೋಟೋ ಹಿಡಿದಿದ್ದಾರೆ. ನಮ್ಮಲ್ಲಿ ಒಡಕು ಸೃಷ್ಟಿ ಮಾಡೋದಷ್ಟೇ. ಸುಳ್ಳು ಸೃಷ್ಟಿ ಮಾಡುವುದರಲ್ಲಿ PHD ತೆಗೆದುಕೊಂಡಿದ್ದಾರೆ.


ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವರಾಗಿದ್ದಾಗ ಆರ್​ಎಸ್​ಎಸ್ ಕಚೇರಿಗೆ ಹೋಗಿದ್ದಾರೆ ಅಂತ ಫೋಟೋ ತೋರಿಸ್ತಾರೆ. ಗೃಹ ಸಚಿವರಾಗಿ ಅವರು ಅಲ್ಲಿ ಹೋಗಿ ತಾಕೀತು ಮಾಡಿದ್ದರು. ಶಿವಾಜಿನಗರ ಸೆನ್ಸಿಟಿವ್ ಏರಿಯಾ. ಇಲ್ಲಿ ಬಾಲ ಬಿಚ್ಚಿದರೆ ಹುಷಾರ್ ಅಂತ ಎಚ್ಚರಿಕೆ ನೀಡಿದ್ದರು. ಅದನ್ನು ಹೇಳಲ್ಲ ಇವರು. ಅಂದಿನ ಪೊಲೀಸ್ ಅಧಿಕಾರಿಗಳ ಜೊತೆಗೆ ಹೋಗಿದ್ದರು, ಶಾಖೆಗೆ ತಾಕೀತು ಮಾಡೋಕೆ ಹೋಗಿದ್ದರು ಎಂದು ತಿರುಗೇಟು ನೀಡಿದರು.


ಆರ್​ಎಸ್​ಎಸ್ ಗೆ ಅದರದ್ದೇ ಇತಿಹಾಸ ಇದೆ. ಅದು ಸುಳ್ಳಿನ ಇತಿಹಾಸ ಇದೆ. ಅದನ್ನು ಆರ್​ಎಸ್​ಎಸ್ ನವರು ಅದನ್ನು ಪಾಸಿಟಿವ್ ತಗೊಂಡಿದಾರೆ ಅಷ್ಟೇ. ಆರ್​ಎಸ್​ಎಸ್ ನವರಿಗೆ ಅವರದೇ ಆದ ಇತಿಹಾಸ ಇದೆ. ಸುಳ್ಳಿನ ಇತಿಹಾಸ. ಗಾಂಧಿ ಕೊಂದ ಇತಿಹಾಸ ಇದೆ. ದೇಶದಲ್ಲಿ ಕೋಮು ವಿಷ ಬೀಜ ಬಿತ್ತಿದ ಇತಿಹಾಸ ಇದೆ.‌ ಆರ್​ಎಸ್​ಎಸ್ ನವರಿಗೆ ಅವರ ಇತಿಹಾಸ ಗೊತ್ತಿಲ್ಲದಿದ್ದರೆ ಅವರಿಗೆ ಇತಿಹಾಸದ ಪಾಠ ನಾನು ಮಾಡುತ್ತೇನೆ"

*********     *********

-ಇವಿಷ್ಟು ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದ ಮಾತುಗಳು. ಇವುಗಳನ್ನು ಬಿಟ್ಟು ಸಮರ್ಥನೆಯನ್ನು ಕೊಡುವಾಗ ಬೇರೆ ಹೇಳಿಕೆಗಳೂ ಅವರದ್ದೇ ಇವೆ. ಈ ಹೇಳಿಕೆಯ ಅನಂತರದಲ್ಲಿ ನಡೆದು ಹೋದ ವಿದ್ಯಮಾನಗಳು ರಾಷ್ಟ್ರಮಟ್ಟದಲ್ಲಿ ಸಂಚಲನವನ್ನು ಹುಟ್ಟಿಹಾಕಿದೆ. ಇದು ಆರ್​ಎಸ್​ಎಸ್ ಅನ್ನು ಇನ್ನಷ್ಟು ಬಲಗೊಳಿಸಿದೆ.


ಇವರ ಮಾತಿನಲ್ಲಿ ಅರ್ಧಸತ್ಯವಿದೆ. ಇವರು ಹೇಳಿದ ಮಾತುಗಳಿಗೆ ಸಹನೆ ಕಳೆದುಕೊಂಡು ಗಂಟಲು ಹರಿದು ಹೋಗುವಷ್ಟು ಎತ್ತರದ ದನಿಯಲ್ಲಿ ಬಿಜೆಪಿಯವರು ವಿರೋಧಿಸುವಂಥ ವಾಸ್ತವ ಸತ್ಯವೂ ಇದೆ. ಆದರೆ ಅದು ವೈಚಾರಿಕ ನೆಲೆಯಲ್ಲಿ ಇಲ್ಲ ಎಂಬುದು ಸ್ಪಷ್ಟವಾಗೇ ಇದೆ. ಅಹುದು, ಬಿಜೆಪಿ ಆರೆಸ್ಸೆಸ್ಸಿನ ಒಂದು ಅಂಗಸಂಸ್ಥೆ ಎಂಬುದು ಪಬ್ಲಿಕ್ ಸೀಕ್ರೆಟ್. ಸಂಘದ ಸೈದ್ಧಾಂತಿಕ ನಿಲುವಿಗೆ ವಿರುದ್ಧವಾಗಿ ಬಿಜೆಪಿ ವರ್ತಿಸುವುದಿಲ್ಲ ಎಂಬುದು ವಾಸ್ತವ ಸತ್ಯವೇ ಆಗಿದೆ. ಸಂಘಕ್ಕೆ ಅದರದ್ದೇ ಆದ ಬಣ್ಣದ ಧ್ವಜವಿದೆ. ಅದೇ ಕೇಸರಿ ಬಣ್ಣದ ಭಗವಾಧ್ವಜ. ಹಾಗಂತ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ಆರ್​ಎಸ್​ಎಸ್ ತ್ರಿವರ್ಣ ಧ್ವಜವನ್ನು ಹಾರಿಸುತ್ತದೆ ಎಂಬುದೂ ಸತ್ಯ. ಹಾಗಂತ ತಾಲಿಬಾನಿಗಳಂಥ ದೇಶದ್ರೋಹದ ಸಂಘವಂತೂ ಆರ್​ಎಸ್​ಎಸ್ ಅಲ್ಲವೇ ಅಲ್ಲ ಎಂಬುದು ವಾಸ್ತವ ಸತ್ಯ. ಭಾರತ ಸರ್ಕಾರವು, 1947ರಲ್ಲಿ ನಾಲ್ಕು ದಿನಗಳವರೆಗೆ, ಸ್ವಾತಂತ್ರ್ಯಾನಂತರ 1948ರಲ್ಲಿ ಗಾಂಧಿಯನ್ನು ಗೋಡ್ಸೆ ಹತ್ಯೆ ಮಾಡಿದಾಗ, 1975-77ರ ತುರ್ತು ಪರಿಸ್ಥಿತಿಯ ಅವಧಿಯಲ್ಲಿ, 1992ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಆರ್​ಎಸ್​ಎಸ್ ಅನ್ನು ನಿಷೇಧ ಮಾಡಿದ್ದೂ ವಾಸ್ತವ ಸತ್ಯ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಯಾವುದು ನಿಷೇಧಕ್ಕೆ ಒಳಪಡಲಿಲ್ಲ ಎಂಬುದು ಪ್ರಾಯಃ ಇಂದಿರಾಗಾಂಧಿಯವರಿಗೂ ಅಂದಾಜಿರಲಿಕ್ಕಿಲ್ಲ! ದೇಶಕ್ಕೆ ದೇಶವೇ ಕರಾಳ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಆರ್​ಎಸ್​ಎಸ್ ಏನು ಮಹಾ? ಸಹಜವಾಗೇ ನಿಷೇಧಿಸಲ್ಪಟ್ಟಿತ್ತು.

 

ಗಾಂಧಿ ಹತ್ಯೆ ಮತ್ತು ಬಾಬರಿ ಮಸೀದಿ ಧ್ವಂಸ ಆದಾಗಿನ ಸಂದರ್ಭದಲ್ಲಿ ಆರ್​ಎಸ್​ಎಸ್ ನಿಷೇಧದ ಹಿಂದೆ ರಾಜಕೀಯ ಇತ್ತು ಎಂಬುದು ವಾಸ್ತವ ಸತ್ಯ. ಈ ನಿಷೇಧದ ಹಿಂದಿನ ರಾಜಕೀಯದ ಬಗ್ಗೆ ಪರ ಮತ್ತು ವಿರೋಧದ ಸೈದ್ಧಾಂತಿಕ ಆಗ್ರಹಗಳಿವೆ. ಚರ್ಚೆಗಳಿವೆ. ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದರಲ್ಲೂ ಆಗ್ರಹಗಳಿವೆ. ಇಂಥದ್ದಕ್ಕೆ ಕೊನೆಯೆಂಬುದು ಇರುವುದಿಲ್ಲ. ಆದರೆ, ಗಾಂಧಿ ಹತ್ಯೆಯ ಹಿಂದೆ ಗೋಡ್ಸೆ ಇದ್ದಾನೆಂಬುದು ಸುಳ್ಳು ಎಂಬುದನ್ನು ಹಿರಿಯ ವಿದ್ವಾಂಸ ಪ್ರೊ.ಕೆ.ಎಸ್. ನಾರಾಯಣಾಚಾರ್ಯ ಅವರು ಗಾಂಧಿಯನ್ನು ಕೊಂದವರು ಯಾರು? ಎಂಬ ಪುಸ್ತಕದಲ್ಲಿ ಸವಿವರವಾಗಿ ಬರೆದಿದ್ದಾರೆ. ಇದು ಇಂಗ್ಲಿಷಲ್ಲೂ ಇದೆ. ಆದ್ದರಿಂದ ಗಾಂಧಿಹತ್ಯೆಯ ವಿಚಾರ ಎಂಬುದು ತೀರಲಾಗದ ಚರ್ಚೆ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಗೌರವಿಸಲೇಬೇಕು.


ಆದರೆ, ಸಚಿವ ಖರ್ಗೆಯವರ ಆರ್​ಎಸ್​ಎಸ್ ಮೋಸ್ಟ್ ಸೀಕ್ರೆಟ್ ಆರ್ಗನೈಸೇಷನ್ ಎಂಬ ಮಾತಿಗೆ ಸಮರ್ಥನೆಯಿಲ್ಲ. ಯಾಕೆಂದರೆ, SHASHANK TRIPATHI (FORMER SELECTION ADVISER) ಅವರ ಪ್ರಕಾರ, RSS IS REGISTERED BUT NOT IN NAGPUR. IT IS REGISTERED IN CHANDRAPUR ACCORDNG TO PUBLIC TRUST REGISTRATION OFFICE. RSS IS A REGISTERED ORGANIZATION WITH REGISTRATION NUMBER 08-D 0018394. THE DIGIT CODE OF REGISTRATION IS 94910. THE REGISTRATION HAS BEEN ISSUED UNDER SECTION 1860 OF INDIAN GOVERNMENT AND SOCIETY REGISTRATION LAW 1950. ಆರೆಸ್ಸೆಸ್ಸಿನ ಎಲ್ಲ ವ್ಯವಹಾರಗಳು ಲಾಗಾಯ್ತಿನಿಂದಲೂ ಬೆಳಕಿನಂತಿದೆ. ಅದು ಮಾವೋ, ಮಾರ್ಕ್ಸ್, ನಕ್ಸಲ್ ನಂಥ ಜಾಗತಿಕ ಮಟ್ಟದ ಸಂಘ ಸಂಸ್ಥೆಯಲ್ಲ ಎಂಬುದಂತೂ ಪಬ್ಲಿಕ್ ಸೀಕ್ರೆಟ್ಟು. ನೂರು ವರ್ಷಗಳ ಸುದೀರ್ಘವಾದ ಪಯಣದಲ್ಲಿ ಆರ್​ಎಸ್​ಎಸ್ ದೇಶಪ್ರೇಮ, ದೇಶಕ್ಷೇಮ, ದೇಶಭಕ್ತಿ ಅನನ್ಯವೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. 



60,000 SHAKHAS, 6,000,000 VOLUNTEERS, 30,000 SCHOOLS, 300,000 TEACHERS, 5,000,000 STUDENTS, 9,000,000 TRADE UNION ACTIVISTS, 5,000,000 ABVP STUDENT ACTIVISTS, 100,000,000 BJP MEMBERS, 175,000,000BJP VOTERS, 500 PUBLICATIONS, 4000 PRACHARAKAS (FULL TIMERS), 100,000 FORMER ARMY MEN COUNCIL, 70,00000 VHP ACTIVISTS ALL OVER THE WORLD, 300,000 BAJARANGDAL ACTIVISTS, 18 STATE GOVERNMENTS, 18 CHIEF MINISTERS, 283 MP (LS), 58 MP (RS) 1460 MLA- with this much strength sangh pariwar becomes a formidable force as architects of nation and indispensable entity to shape Indian politics. ಈ ಅಂಕಿಸಂಖ್ಯೆಗಳ ವಿವರಗಳಲ್ಲಿ ಹೆಚ್ಚು ಕಡಿಮೆಯಿರಬಹುದು. 


ಆರ್‌ಎಸ್‌ಎಸ್ ಒಂದು ಹಿಂದೂ (ಈ ದೇಶದಲ್ಲಿ ಇರುವವರೆಲ್ಲರೂ ಹಿಂದೂಗಳೇ) ರಾಷ್ಟ್ರೀಯತಾವಾದಿ ಸಂಘಟನೆ. ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು ಮತ್ತು ಮುಸ್ಲಿಂ ಪಕ್ಷಗಳು ಅದನ್ನು ದ್ವೇಷಿಸುತ್ತವೆ. ಆರ್‌ಎಸ್‌ಎಸ್ ಮೇಲೆ ಹಿಂಸಾತ್ಮಕ ನಡವಳಿಕೆಯ ಆರೋಪವಿದೆ. ಆದರೆ ಅವರು ಆತ್ಮರಕ್ಷಣೆಗಾಗಿ ಒಣ ಬಿದಿರಿನ ಕೋಲುಗಳೊಂದಿಗೆ ಹೋರಾಡಲು ಕಲಿಯುತ್ತಾರೆ. ಬಿದಿರಿನ ಕೋಲುಗಳಿಗೆ ಸಂಬಂಧಿಸಿದಂತೆ, ಪ್ರಾಚೀನ ಕಾಲದಿಂದಲೂ ಎಲ್ಲ ಭಾರತೀಯ ಗ್ರಾಮಸ್ಥರು ಬಿದಿರಿನ ಕೋಲುಗಳನ್ನು ಆತ್ಮರಕ್ಷಣೆಗಾಗಿ ಇಟ್ಟುಕೊಳ್ಳುತ್ತಿದ್ದರು ಹಳ್ಳಿಗಳಲ್ಲಿ ಗ್ರಾಮಸ್ಥರು ಅವುಗಳನ್ನು ಮನೆಯ ವಸ್ತುವಾಗಿ ಈಗಲೂ ಇಟ್ಟುಕೊಳ್ಳುತ್ತಾರೆ. ಆರ್‌ಎಸ್‌ಎಸ್ ರಚನೆಗೆ ಬಹಳ ಹಿಂದೆಯೇ ಪ್ರಯಾಣ ಮಾಡುವಾಗ ಅವುಗಳನ್ನು ಇಟ್ಟುಕೊಳ್ಳುತ್ತಾರೆ. ಅಷ್ಟಕ್ಕೂ ಬಿದಿರು ಯಾರಿಗಲ್ಲದವಳು? 


ನೆಹರೂ ಆರ್‌ಎಸ್‌ಎಸ್ ಸಿದ್ಧಾಂತವನ್ನು ಟೀಕಿಸುತ್ತಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ನ್ಯಾಯಾಲಯವು ಆರ್‌ಎಸ್‌ಎಸ್ ಮೇಲಾಗಲಿ, ಆರ್‌ಎಸ್‌ಎಸ್ ಸ್ವಯಂಸೇವಕರ ಮೇಲಾಗಲಿ ಯಾರನ್ನೂ ಕೊಂದ ಅಥವಾ ಕೊಲೆ ಮಾಡಿದ ಆರೋಪವನ್ನು ಹೊರಿಸಿಲ್ಲ, ಆದರೆ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಆರ್‌ಎಸ್‌ಎಸ್ ವ್ಯಕ್ತಿಗಳ ಹತ್ಯೆಯು ಯಾವುದೇ ಸ್ಯೂಡೋ ಸೆಕ್ಯುಲರ್ ಅಥವಾ ಸ್ಯೂಡೋ ಲಿಬರಲ್ ಎಂದು ಕರೆಯಲ್ಪಡುವವರನ್ನು ಕೆಣಕಿಲ್ಲ. ಭಾರತದಾದ್ಯಂತ ವಿವಿಧ ವಿಪತ್ತುಗಳು ಸಂಭವಿಸಿದಾಗ, ಸಂತ್ರಸ್ತರ ಧರ್ಮ ಅಥವಾ ಜಾತಿಯನ್ನು ಕಡೆಗಣಿಸಿ, ಆರ್‌ಎಸ್‌ಎಸ್ ಸಾಕಷ್ಟು ಮಾನವ ಕೆಲಸ ಮಾಡಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ಮೌನ ಕಾರ್ಯಕರ್ತರು ಮತ್ತು ಅವರು ಇಲ್ಲಿಯವರೆಗೆ ಒಂದೇ ಒಂದು ಮಾನವ ಆತ್ಮವನ್ನು ಕೊಂದಿಲ್ಲ. 


(…ಮುಂದುವರೆಯುವುದು)


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Advt Slider:
To Top