ಹಲೋ, ಹೇಗಿದ್ದೀರಾ?
ದೂರದರ್ಶನ ಕೆಲವು ದಶಕಗಳ ಹಿಂದೆ ಒಂದು ಮಾಯಾವಿ ಪೆಟ್ಟಿಗೆಯಾಗಿದ್ದ ಕಾಲವದು. ನಾವು ಚಿಕ್ಕವರಿದ್ದಾಗ ಹಳ್ಳಿಗಳಲ್ಲಿ ಯಾರಾದರೂ ಟೀವಿ ಇದ್ದರೆ ಅವರನ್ನು ಶ್ರೀಮಂತ ಎಂದು ಹೇಳಲಾಗುತ್ತಿತ್ತು. ಅದು ಶ್ರೀಮಂತಿಕೆಯ ಸಂಕೇತವೆಂದು ಪರಿಗಣಿಸಿ ಇದ್ದ ಉದಾಹರಣೆಗಳು ಇದ್ದವು.
ಎಷ್ಟೋ ಜನ ಹೆಣ್ಣು ಕೊಡಬೇಕಾದರೆ ಟೀವಿ ಇದೆಯಾ ಎಂದು ನೋಡಲಾಗಿತ್ತು. ಆಗಿನ ಕಾಲದಲ್ಲಿ ದೂರದರ್ಶನ ವೀಕ್ಷಕರನ್ನು ಆಕರ್ಷಿಸುತ್ತಿದ್ದ ಮುಖ್ಯ ಕೇಂದ್ರವಾಗಿತ್ತು. ಅದನ್ನೇ ನೆನಪಿಸಲೆಂದು ಪ್ರತಿ ವರ್ಷ ನವೆಂಬರ್ 21ರಂದು "ವಿಶ್ವ ಟೆಲಿವಿಷನ್ ದಿನ"ವನ್ನಾಗಿ ಆಚರಿಸಲಾಗುತ್ತಿದೆ.
ದೆಹಲಿ ದೂರದರ್ಶನದ ರಾಮಾಯಣ, ಮಹಾಭಾರತ ಮುಂತಾದ ಧಾರಾವಾಹಿಗಳಿಗೆ ಜನ ಕಾಯಿ ಒಡೆದು ಕುಂಕುಮ ಹಚ್ಚಿ ಟೀವಿ ನೋಡುತ್ತಿದ್ದರು.
ಪ್ರತಿ ಶನಿವಾರ ಬರುತ್ತಿದ್ದ ಸಾಪ್ತಾಹಿಕ ನೋಡುತ್ತಾ ರವಿವಾರ ಯಾವುದು ಹಿಂದಿ ಪಿಚ್ಚರ್ ಎನ್ನುವುದರ ಬಗ್ಗೆ ನಮ್ಮ ಗಮನ ಇತ್ತು. "ಚಂದ್ರಕಾಂತ, ಅಲಿಬಾಬಾ ಔರ್ ಚಾಲಿಸ್ ಚೋರ್ ಧಾರಾವಾಹಿಗಳು ಚಿಣ್ಣರನ್ನು ಹಿಡಿದು ಇಡುತ್ತಿದ್ದವು. ವಿಶ್ವಾಮಿತ್ರ ಧಾರಾವಾಹಿ ನಮ್ಮನ್ನು ಆಕರ್ಷಿಸಿದರೆ, ರಂಗೋಲಿ, ಚಿತ್ರಹಾರ್, ಚಿತ್ರಮಂಜರಿ ಹಾಡುಗಳಿಗಾಗಿ ಕಾಯುತ್ತಿದ್ದೆವು.
ಚಾಣಕ್ಯ, ಸೂರ್ ಮೇರಾ ತುಮಾರಾ ನಮಗೆ ಬಾಯಿಪಾಠವಾಗಿತ್ತು. ನಂತರ ಚಂದನ ಶುರುವಾದಾಗ ಮಾಯಾಮೃಗ ಟ್ರಾಫಿಕ್ ಕಂಟ್ರೋಲ್ ಮಾಡುವಲ್ಲಿ ಯಶಸ್ವಿಯಾಗಿತ್ತು.
ಈಗ ಬೇಕಾದಷ್ಟು ಚಾನಲ್‌ಗಳು ಇದ್ದರೂ ನೋಡುವುದಕ್ಕೆ ಪುರುಸೊತ್ತು ಇಲ್ಲ, ಅಥವಾ ಇಂಟರೆಸ್ಟ್ ಇಲ್ಲವೋ ಗೊತ್ತಿಲ್ಲ. ಆದರೆ ಒಂದು ಮಾತಂತೂ ನಿಜ, ಅದು ನಮ್ಮೆಲ್ಲರನ್ನೂ ಹಿಡಿದು ಕೂಡಿಸಿದ್ದು ನಿಜ ಅಲ್ಲವೇ?
ಬನ್ನಿ, ಮತ್ತೊಮ್ಮೆ ಹಳೆಯ ನೆನಪುಗಳನ್ನು ಹಂಚಿಕೊಳ್ಳೋಣ. ಏನಂತೀರಾ?
- ಗಾಯತ್ರಿ ಸುಂಕದ, ಬದಾಮಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







