ಹಲೋ, ಹೇಗಿದ್ದೀರಾ?
ಮಕ್ಕಳು ನಮ್ಮ ಭಾರತದ ಒಂದು ಮುಖ್ಯ ಸಂಪನ್ಮೂಲ ಕೂಡ ಹೌದು. ಮಕ್ಕಳು ನಮ್ಮ ಭಾರತದ ಮುಂದಿನ ತಲೆಮಾರಿನ ಪ್ರತಿನಿಧಿಗಳು ಕೂಡ ಹೌದು.
ಆದರೆ ನಾವು ಹೊಂದಿದ ಬಾಲ್ಯ ಮತ್ತು ನಮ್ಮ ಮಕ್ಕಳ ಬಾಲ್ಯಕ್ಕೂ ತುಂಬ ವ್ಯತ್ಯಾಸವಿದೆ. ನಾವು ಕೋಲು ಚಿನ್ನಿದಾಂಡು, ಬುಗರಿ ನಮ್ಮ ಜೊತೆಗಿದ್ದರೆ, ವಿಡಿಯೊ ಗೇಮ್, ಕಾರ್ಟೂನ್‌ಗಳಲ್ಲಿ ಕಳೆದು ಹೋಗುತ್ತದೆ.
ಪ್ರತಿ ವರ್ಷ ಮಕ್ಕಳ ದಿನಾಚರಣೆ ಮಾಡಿ. ಕೈ ತೊಳೆದುಕೊಳ್ಳುವ ನಾವು ಎಷ್ಟರ ಮಟ್ಟಿಗೆ ಮಕ್ಕಳಿಗೆ ಟೈಂ ಕೊಟ್ಟಿದ್ದೇವೆ ಎಂದು ನಮ್ಮನ್ನು ನಾವೇ ಕೇಳಿ ಕೊಳ್ಳಬೇಕಾಗುತ್ತದೆ.
ನಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಕಳೆದು ಹೋಗುವ ನಾವು. ಮಕ್ಕಳಿಗೆ ಟಿಫಿನ್ ಬಾಕ್ಸ್ ಕೊಟ್ಟು ಸ್ಕೂಲ್ ವ್ಯಾನ್ ಹತ್ತಿಸಿ ಟಾಟಾ ಮಾಡಿದರೆ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸುತ್ತೇವೆ.
ಆದರೆ ನಮ್ಮ ಮಕ್ಕಳಿಗೆ ನಾವೆಷ್ಟು ಹತ್ತಿರ ಇದ್ದೇವೆ ಎಂದು ನಮ್ಮನ್ನು ನಾವೇ ಕೇಳಿ ಕೊಳ್ಳಬೇಕು. ನಾವು ಹೇಗೆ ನಮ್ಮದೇ ಆದ ಕೌಟುಂಬಿಕ. ವೃತ್ತಿ ಜೀವನದಲ್ಲಿ ಸಮಸ್ಯೆಗಳು ಇರುತ್ತವೆಯೋ ಹಾಗೆ ಮಕ್ಕಳಿಗೂ ಕೂಡ ಅವರದೇ ಆದ ಸಮಸ್ಯೆ ಇರುತ್ತವೆ ಎಂಬುದನ್ನು ನಾವು ಮರೆಯಬಾರದು.
ನಾವು ಸರಿಯಾಗಿ ಸ್ಪಂದಿಸದೆ ಇದ್ದಾಗ ಅವು ತಮ್ಮ ಸಮಸ್ಯೆಗಳಿಗೆ ಕಿವಿಯಾಗುವವರನ್ನು ಹುಡುಕಲು ಶುರು ಮಾಡುತ್ತವೆ. ಆಗಲೇ ಅಪರಿಚಿತ ಮುಖಗಳು ಫ್ರೆಂಡ್ಶಿಪ್ ಹೆಸರಿನಲ್ಲಿ ಅವರ ಜೀವನದಲ್ಲಿ ಪ್ರವೇಶ ಮಾಡುತ್ತವೆ.
ನಾವು ಚಿಕ್ಕವರಿದ್ದಾಗ ತಾಯಿಯ ಮಡಿಲಲ್ಲಿ ಕುಳಿತು ರಾಮಾಯಣ ಮತ್ತು ಮಹಾಭಾರತ ಕಥೆ ಕೇಳುತ್ತಿದ್ದೆವು. ಆದರೆ ಈಗ ಹೇಳಲು ನಮಗೆ ಪುರುಸೊತ್ತಿಲ್ಲ. ಮತ್ತು ಕೇಳಲಿಕ್ಕೆ ಅವರಿಗೆ ಪುರುಸೊತ್ತಿಲ್ಲ. ನಮ್ಮ ಪಾಲಿಗೆ ಅವು ಕೇವಲ ಮಾರ್ಕ್ಸ್ ತೆಗೆಯುವ ಯಂತ್ರಗಳಷ್ಟೇ. ನಮ್ಮ ನೆರೆಹೊರೆಯವರ, ಸಂಬಂಧಿಕರ ಮುಂದೆ ನಮ್ಮ ಪ್ರೆಸ್ಟೀಜ್ ಹೆಚ್ಚಿಸಿಕೊಳ್ಳಲು ನಾವು ಅವರನ್ನು ಬಲಿಪಶು ಮಾಡುತ್ತೇವೆ ಅಷ್ಟೇ.
ನಮ್ಮ ಮಕ್ಕಳು ಸರಿಯಾಗಿ ಸಂಬಂಧಗಳನ್ನು ನಿಭಾಯಿಸುತ್ತಿಲ್ಲ ಎಂದು ತಕರಾರು ಮಾಡುವ ನಾವು ಅಜ್ಜ, ಅಜ್ಜಿ, ಚಿಕ್ಕಪ್ಪ, ದೊಡ್ಡಪ್ಪ ದೊಡ್ಡಮ್ಮ, ಅತ್ತೆ, ಮಾವ ಮುಂತಾದ ಸಂಬಂಧದ ಬಗ್ಗೆ ತಿಳಿಸಿ ಕೊಡುವುದೇ ಇಲ್ಲ.
ಚಿಕ್ಕಂದಿನಿಂದ ಇಂಡಿಪೆಂಡೆಂಟ್ ಕಲ್ಪನೆ ತಲೆಯಲ್ಲಿ ತುಂಬಿ ಆಮೇಲೆ ನಮ್ಮ ಮಕ್ಕಳು ನಮ್ಮನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಅವರ ಕಡೆಗೆ ಬೊಟ್ಟು ಮಾಡಿ ತೋರಿಸುತ್ತೇವೆ. ನಮ್ಮ ಮಕ್ಕಳಿಗೆ ಕೌಟುಂಬಿಕ ಸಂಸ್ಕಾರ, ಧರ್ಮ, ಹಬ್ಬಗಳು, ದೇಶಭಕ್ತಿ, ಪರಂಪರೆಗಳ ಬಗ್ಗೆ ಒಳ್ಳೆಯ ಅಡಿಪಾಯ ಹಾಕಿದರೆ ಒಂದು ಒಳ್ಳೆಯ ಸಮಾಜದ ನಿರ್ಮಾಣ ಸಾಧ್ಯ. ಏನಂತೀರಾ?
- ಗಾಯತ್ರಿ ಸುಂಕದ, ಬದಾಮಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




