ನ.15: ಮಂಗಳೂರು ರಥಬೀದಿ ಸ.ಪ್ರ.ದ. ಕಾಲೇಜಿನಲ್ಲಿ ಅಬ್ಬಕ್ಕ @500 ಸಮಾವೇಶ, 94ನೇ ಉಪನ್ಯಾಸ

Upayuktha
0




ಮಂಗಳೂರು: ನವೆಂಬರ್ 15ರ ಶನಿವಾರದಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಭಾಗ ಮತ್ತು ನಗರದ ಡಾ ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು ಇದರ ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಕನ್ನಡ ವಿಭಾಗಗಳ ಸಹಯೋಗದಲ್ಲಿ ಅಬ್ಬಕ್ಕ@500 ಪ್ರೇರಣಾದಾಯಿ ಉಪನ್ಯಾಸ ಸರಣಿಯ ಎಸಳು-94ನ್ನು ಯೋಜಿಸಲಾಗಿದೆ.


ದೇಶಾದ್ಯಂತ ಸಮರ್ಥ ರಾಜರುಗಳು ತಲೆ ತಗ್ಗಿಸಿ ಪೋರ್ಚುಗೀಸರಿಗೆ ಕಪ್ಪ ಸಲ್ಲಿಸುತ್ತಿರುವಾಗ ನಮ್ಮ ನಾಡಿನ ಮಣ್ಣಿನಲ್ಲಿ ಬೆಳೆದ ವಸ್ತುಗಳನ್ನು ನಮ್ಮ ಸಮದ್ರಗಳ ಮೂಲಕ ವ್ಯಾಪಾರಕ್ಕಾಗಿ ಯಾವುದೋ ವಿದೇಶದ ಪರಕೀಯರಿಗೆ ಕಪ್ಪ ಕೊಡುವುದಿಲ್ಲವೆಂದು ವಿರೋಧಿಸಿ ತುಳು ನಾಡನ್ನು ನಿರಂತರ 40 ವರ್ಷಗಳ ಕಾಲ ಪೋರ್ಚುಗೀಸರ ಉಪಟಳದ ವಿರುದ್ಧ ರಕ್ಷಿಸಿ ಸ್ವಾಭಿಮಾನವನ್ನು ಮೆರೆದ ವೀರ ರಾಣಿ ಅಬ್ಬಕ್ಕನ ಸ್ಮರಣೀಯ ಹುಟ್ಟು ಮತ್ತು ಪ್ರೇರಣಾದಾಯಿ ಬದುಕು 500 ವರ್ಷಗಳನ್ನು(1525-2025) ಪೂರೈಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ, ಮಂಗಳೂರು ವಿಭಾಗವು ಶೈಕ್ಷಣಿಕ ವರ್ಷ 2025 ನ್ನು “ಅಬ್ಬಕ್ಕ @ 500” ಎಂಬ ಪ್ರೇರಣಾದಾಯಿ 100 ಉಪನ್ಯಾಸ ಸರಣಿಯನ್ನು ಯೋಜಿಸಿದೆ.


ಈಗಾಗಲೇ ಮಂಗಳೂರು ವಿಶ್ವ ವಿದ್ಯಾನಿಲಯದ ಅಧೀನದಲ್ಲಿರುವ 93 ಕಾಲೇಜುಗಳಲ್ಲಿ ವೀರ ರಾಣಿ ಅಬ್ಬಕ್ಕನ ಬಗೆಗಿನ ಉಪನ್ಯಾಸ ಸರಣಿಗಳು ಪೂರ್ಣಗೊಂಡಿದ್ದು ಸದ್ರಿ ಕಾಲೇಜಿನಲ್ಲಿ ಆಯೋಜನೆಗೊಳ್ಳುತ್ತಿರುವ 94ನೇ ಎಸಳು ತುಳು ನಾಡಿನ ಮಣ್ಣಿನ ವೀರ ವನಿತೆಯರ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ ಮತ್ತು ಅರಿವು ನೀಡಲಿದೆ.


ಈ ಸಮಾರಂಭವನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಕಾಲೇಜಿನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಇವರು ಉದ್ಘಾಟಿಸಲಿದ್ದಾರೆ. ಮೂಡಬಿದಿರೆಯ ಇತಿಹಾಸ ತಜ್ಞರು ಮತ್ತು ಖ್ಯಾತ ಸಾಹಿತಿಯಾಗಿರುವ ಡಾ ಪುಂಡಿಕಾಯ್ ಗಣಪಯ್ಯ ಭಟ್ “ಅಬ್ಬಕ್ಕ @ 500” ಪ್ರೇರಣಾದಾಯಿ ಸಂಪನ್ಮೂಲ ಬಾಷಣವನ್ನು ನೀಡಲಿದ್ದು ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಜಯಕರ ಭಂಡಾರಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.


ಈ ಕಾರ್ಯಕ್ರಮವು ರಥಬೀದಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಪೂರ್ವಾಹ್ನ 10.30 ಘಂಟೆಗೆ ಸರಿಯಾಗಿ ನೆರವೇರಲಿದ್ದು ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗ, ಸ್ಥಳೀಯರು ಮತ್ತು ಆಸಕ್ತರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಕಾರ್ಯಕ್ರಮ ಸಂಯೋಜಕರು ಹಾಗೂ ಕಾಲೇಜು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top