"ಕನ್ನಡಾ..... ರೋಮಾಂಚನವೀ ಕನ್ನಡಾ...."
ಎಷ್ಟು ಚಂದ ಅಲ್ವಾ ಈ ಹಾಡು! ಈ ಹಾಡನ್ನು ಕೇಳ್ತಾ ಇದ್ದರೆ ಮೈ ಜುಮ್ ಎನಿಸುತ್ತದೆ. ಕನ್ನಡ ಅಂದರೆ ಸಾಕು ಏನೋ ಒಂಥರಾ ರೋಮಾಂಚನ.
ಎಷ್ಟು ಚಂದ ಅಲ್ವಾ ನಮ್ಮ ಕನ್ನಡ! ಪ್ರತಿಯೊಂದು ಅಕ್ಷರಗಳು, ಶಬ್ದಗಳು, ವಾಕ್ಯಗಳನ್ನು ಆಸ್ವಾದಿಸಿದಾಗ ಏನೋ ಖುಷಿ. ಕನ್ನಡದ ಕಥೆಗಳು, ಕಾದಂಬರಿಗಳು, ಹಾಡುಗಳು, ಕವನಗಳು ಇವೆಲ್ಲವುಗಳನ್ನು ಓದಲು ತುಂಬಾ ಇಷ್ಟ ಪಡುತ್ತೇನೆ ಅಂದ್ರೆ ಅದು ಕನ್ನಡದಿಂದ. ನನಗೆ ಕನ್ನಡದಲ್ಲಿನ ಪ್ರೀತಿ, ಅಭಿಮಾನ ಹೆಚ್ಚಾಗುತ್ತಿದೆಯೇ ಹೊರತು ಅದು ಕಡಿಮೆಯಾಗ್ತಾ ಇಲ್ಲ.
ನವೆಂಬರ್ ೦೧ ಬಂದರೆ ಸಾಕು, ಪ್ರತಿ ವರುಷ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಕರ್ನಾಟಕದಲ್ಲಿ ಎಲ್ಲೆಲ್ಲೂ ಕನ್ನಡದ ಪ್ರತೀಕ ಕೆಂಪು, ಹಳದಿ ಬಾವುಟಗಳು ಕಾಣಿಸುತ್ತಿರುತ್ತವೆ. ಎಲ್ಲೇ ಹೋದರೂ, ಎಲ್ಲೇ ಇದ್ದರೂ ಕನ್ನಡದ ಅಭಿಮಾನ ಕಳೆದುಕೊಳ್ಳಬಾರದು.
ಕನ್ನಡ ಭಾಷೆಗೆ ೨೦೦೦ ವರುಷಗಳ ಇತಿಹಾಸವಿದೆ. ವೈವಿಧ್ಯತೆಗಳ ತವರೂರು, ಹಲವು ಕವಿಗಳ ನೆಲೆಬೀಡು, ಈ ನಮ್ಮ ಕನ್ನಡ ನಾಡು.
ಮೈಸೂರೆಗೊಳ್ಳುತ್ತಿದೆ ಮೈಸೂರ ಮಲ್ಲಿಗೆ, ಕೈಬೀಸಿ ಕರೆಯುತಿದೆ ನನ್ನನು ಹಳೇಬೀಡ ಶಿಲ್ಪಕಲೆಗೆ, ಗತಕಾಲ ಮತ್ತೆ ನೆನಪಿಸುವಂತಿದೆ ಹಂಪಿಯ ವಾಸ್ತುಶಿಲ್ಪ ಕಲೆಯ ಗದ್ದುಗೆ. ಈ ಎಲ್ಲವೂ ಕಾಣಸಿಗುವುದು ನಮ್ಮ ಕನ್ನಡ ನಾಡಿನಲ್ಲೇ ಹೊರತು ಮತ್ತೆಲ್ಲಿಯೂ ಅಲ್ಲ.
ನವೆಂಬರ್ ೦೧ಕ್ಕೆ ಮಾತ್ರ ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದಲ್ಲ, ದಿನನಿತ್ಯ ಆಚರಿಸುವಂತಾಗಬೇಕು. ಕನ್ನಡದ ಗರಿಮೆ ತಗ್ಗದಂತೆ ಕಾಪಾಡುವುದು ಕನ್ನಡಿಗರಾಗಿ ನಮ್ಮ ಕರ್ತವ್ಯ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಕನ್ನಡ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳು ಇನ್ನೂ ಮನಸ್ಸಿನ ಆಳದಲ್ಲಿ ಹುದುಗಿಕೊಂಡಿದೆ.
ಕನ್ನಡವನ್ನು ಪ್ರೀತಿಸು ಕನ್ನಡದ ಕಂದಾ.....
-ಶ್ರಾವ್ಯಾ ಭಟ್ ಸ್ವರ್ಗ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



