ನವೆಂಬರ್ ಮೊತ್ತಮೊದಲ ದಿನ,
ಹೆಮ್ಮೆಯ ನಾದ ಮೊಳಗುವ ಕ್ಷಣ,
ಕನ್ನಡ ನಾಡಿನ ಮಣ್ಣು ಘಮಿಸುತ್ತದೆ...
ಕನ್ನಡಿಗನ ಹೃದಯ ತಲೆ ಎತ್ತುತ್ತದೆ...
ಎಲ್ಲೆಲ್ಲೂ ಕನ್ನಡ ಬಾವುಟ ಹಾರಾಡುತ್ತದೆ...
ಮೈಸೂರು ರಾಜ್ಯದಿಂದ ಆರಂಭವಾದ,
ಕರ್ನಾಟಕವೆಂಬ ಹೆಸರು ಪಡೆದ,
ಒಗ್ಗಟ್ಟಿನ ನಾಡೆಂದು ಹೆಸರಿಸಿದ...
ಸಾಹಿತ್ಯ ಬೆಳಕನ್ನು ಚೆಲ್ಲಿದ...
ಕೆಂಪು- ಹಳದಿ ಬಾವುಟ ಹಾರಾಡುತಿದೆ,
ಹೆಮ್ಮೆಯ ಹೃದಯದ ನಾದ ಕೇಳುತಿದೆ,
ಕುವೆಂಪು, ಬೇಂದ್ರೆಯ ಪದಗಳಲ್ಲಿ...
ಉಸಿರಾಡುತ್ತಿದೆ ಕನ್ನಡ ಪ್ರತಿ ನುಡಿಗಳಲ್ಲಿ...
ನಾಡಿನ ಸೌಂದರ್ಯ, ನದಿಯ ನಾದ,
ಬೆಟ್ಟದ ಗಾಳಿ, ಜಾನಪದ ಹಾಡು...
ಎಲ್ಲವೂ ಹೇಳುತ್ತದೆ... ಒಟ್ಟಾಗಿ,
ನಮ್ಮ ನಾಡು ಕರ್ನಾಟಕ, ನಮ್ಮ ಭಾಷೆ ಕನ್ನಡ..!
ಹುಟ್ಟು ಬೇರೆ ನಾಡದರು ಸರಿ...
ಕನ್ನಡವೇ ನಮ್ಮಮ್ಮ ಎನ್ನುವೇ ಸಾರಿ...ಸಾರಿ...
ಕರ್ನಾಟಕ ನಾದ.. ಮೊಳಗಲಿ...
ಪ್ರತಿ ಮನದಲ್ಲೂ ಕನ್ನಡ ಬೆಳಗಲಿ...!!
-ಸುಜನ ಎಂ. ಈ
ಪತ್ರಿಕೋದ್ಯಮ ವಿದ್ಯಾರ್ಥಿನಿ
SDM ಕಾಲೇಜು, ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



