ಯಾವುದೇ ಸಾಧನೆ ಮಾಡಲು ಮನಸ್ಸು ಮುಖ್ಯ: ತನ್ವೀರ್ ಅಹಮದ್ ಉಲ್ಲಾ

Upayuktha
0

ಭಾರತದಂತಹ ಅದ್ಭುತ ದೇಶ ಪ್ರಪಂಚದಲ್ಲೇ ಇಲ್ಲ



 


ಉಜಿರೆ: ಯುವಜನರಿಂದ ದೇಶ ಕಟ್ಟಲು ಸಾಧ್ಯ. ಸಾಧನೆ ವಿದ್ಯಾರ್ಥಿಗಳ ಕೈಯಲ್ಲಿದೆ. ಅಸಾಧ್ಯ ಎಂದು ಕೈಕಟ್ಟಿ ಕುಳಿತರೆ ಸಾಧನೆಯ ದಾರಿ ಮುಚ್ಚುತ್ತದೆ.. ಸಾಮಾಜಿಕ ಜಾಲತಾಣಗಳು ಸುಲಭದಲ್ಲಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತವೆ. ನಿರಂತರ ಓದಿನಿಂದ ಸಮಾಜವನ್ನು ಅರ್ಥೈಸಲು ಸಾಧ್ಯ. ಒಮ್ಮೆ ತಪ್ಪಿದ ಅವಕಾಶಗಳು ಮತ್ತೆ ಸಿಗುವುದಿಲ್ಲ. ಸಿಕ್ಕಿದ ಅವಕಾಶಗಳ ಸದ್ಬಳಕೆ ಅತೀ ಮುಖ್ಯ ಎಂದು ಪ್ರಗತಿಪರ ಚಿಂತಕ, ಅಂಕಣಕಾರ ತನ್ವೀರ್ ಅಹಮ್ಮದ್ ಉಲ್ಲಾ ಹೇಳಿದರು.


ಇವರು ನವೆಂಬರ್ 19 ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು, ಇಂದ್ರಪ್ರಸ್ಥ ಸಭಾಂಗಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.



ಹೆತ್ತವರು ವಿದ್ಯಾರ್ಥಿಗಳ ನಿಜವಾದ ನಾಯಕರು. ಜೀವನ ಕೊಟ್ಟಿರುವ ಹೆತ್ತವರ ಕನಸನ್ನು ನನಸಾಗುವ ಪ್ರಯತ್ನ ಮಾಡಬೇಕು. ಸಮಾಜದಲ್ಲಿ ನಿರಂತರ ಬದಲಾವಣೆ ತರುವ ಪ್ರಯತ್ನ ಮಾಡಿ. ದೇಶ ಕಟ್ಟುವ ಕೈಂಕರ್ಯಕ್ಕೆ ಕೈ ಜೋಡಿಸಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.



ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉತ್ತರ ಪ್ರದೇಶದ ಹಿರಿಯ ವಕೀಲ ವಸೀಮ್ ಅಹಮ್ಮದ್ ಸಾಮಾಜಿಕ ಜಾಲತಾಣಗಳಿಂದ ದೂರ ಸರಿದರೆ ಗುರಿ ತಲುಪಲು ಸಾಧ್ಯ. ಕಷ್ಟಗಳನ್ನು ಧೈರ್ಯ ಮತ್ತು ಸಾಹಸದಿಂದ ಗೆಲ್ಲಬೇಕು. ಎಲ್ಲರೂ ಬುದ್ಧಿವಂತರೇ, ಆದರೆ ವಿದ್ಯಾರ್ಥಿಗಳ ಗುರಿ ನಿರ್ದಿಷ್ಟವಾಗಿರಬೇಕು. ಹೆತ್ತವರ ಆಶೀರ್ವಾದ ಪಡೆದು ಜೀವನವನ್ನು ಸುಂದರವಾಗಿ ಜೀವಿಸಿ ಎಂದು ಹೇಳಿದರು. 



ಬೆಂಗಳೂರಿನ ಖ್ಯಾತ ವಿಜ್ಞಾನಿ ಡಾ. ಹಮ್ಜಾತ್ ಭಾಷಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸಮಾಜದಲ್ಲಿ ಪ್ರಶ್ನಿಸುವ ಹಾಗೂ ಎಲ್ಲರನ್ನೂ ಗೌರವಿಸುವ ಮನೋಭಾವ ಹೊಂದಬೇಕು. ಕ್ರಿಯಾಶೀಲತೆಯಿಂದ ವಿಜ್ಞಾನವನ್ನು ಕುತೂಹಲಕಾರಿಯಾಗಿ ನೋಡಿದರೆ ಸಾಧನೆ ಮಾಡುವ ಅವಕಾಶ ಸಿಗುತ್ತದೆ. ಜೀವನ ಸಾರ್ಥಕ ಆಗಬೇಕಾದರೆ ಶಿಕ್ಷಕರ ಪಾತ್ರ ಬಹಳ ಮುಖ್ಯ. ಶಿಕ್ಷೆ ಪಡೆದರೆ ಮಾತ್ರ ವಿದ್ಯೆ ಒಲಿಯುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.



ನಂತರ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ತನ್ವೀರ್ ಅಹಮ್ಮದ್ ಉಲ್ಲಾ ನಮ್ಮನ್ನು ನಾವು ಅರಿತಾಗ ಜೀವನ ಸಾರ್ಥಕ. ಜೀವನದಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯ. ನೋವಿನ ಅನುಭವ ಮನುಷ್ಯನನ್ನು ಗಟ್ಟಿ ಮಾಡುತ್ತದೆ. ಜೀವನದಲ್ಲಿ ಹಿಂಜರಿಕೆ ಬೇಡ. ಕಾನೂನಿನ ಅರಿವು ಜನರಲ್ಲಿ ಇರಬೇಕು. ಸಮಾಜ ತುಳಿಯಲು ಕಾಯುತ್ತಿರುತ್ತದೆ ಆದರೆ ಟೀಕೆಗಳಿಗೆ ಕಿವಿ ಕೊಡಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. 



ವೇದಿಕೆಯಲ್ಲಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಸತಿ ನಿಲಯಗಳ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರಣ್ ವರ್ಮ, ವಿಜ್ಞಾನಿ ಹಮ್ಜಾತ್ ಭಾಷಾ, ವಕೀಲ ವಸೀಮ್ ಅಹಮ್ಮದ್, ಬೆಂಗಳೂರಿನ ಉದ್ಯಮಿಗಳಾದ ತಿಮ್ಮಯ್ಯ ಕೊಂಡವಾಡಿ ಹಾಗೂ ರಾಕೇಶ್ ಜೈನ್ ಉಪಸ್ಥಿತರಿದ್ದರು. 



ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಶ್ವನಾಥ್ ಪಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಉಪಸ್ಥಿತರಿದ್ದರು.


ಕನ್ನಡ ಭಾಷಾ ಉಪನ್ಯಾಸಕ ಡಾ. ಮಹಾವೀರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Advt Slider:
To Top