ಮಂಗಳೂರು: "ರಾಜ್ಯದಲ್ಲಿ ಕಳೆದ ವರ್ಷ ಸೈಬರ್ ವಂಚನೆ 2,400 ಕೋಟಿ ರೂಪಾಯಿ ದಾಟಿದ್ದು, ಮಂಗಳೂರು ನಗರದಲ್ಲೇ ಜನಸಾಮಾನ್ಯರು ಸುಮಾರು 30 ಕೋಟಿ ರೂಪಾಯಿ ಮೊತ್ತವನ್ನು ಕಳೆದುಕೊಂಡಿದ್ದಾರೆ" ಎಂದು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗುರಪ್ಪ ಕಂಠಿ ಬಹಿರಂಗಪಡಿಸಿದರು.
ಬಜಾಜ್ ಫೈನಾನ್ಸ್ ಲಿಮಿಟೆಡ್ ಶುಕ್ರವಾರ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ 'ನಾಕೌಟ್ ಡಿಜಿಟಲ್ ಫ್ರಾಡ್' ಸೈಬರ್ ವಂಚನೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ವರದಿ ಮಾಡಲಾದ ಪ್ರಕರಣಗಳನ್ನಷ್ಟೇ ಪ್ರತಿನಿಧಿಸುತ್ತದೆ. ವರದಿಯಾಗದ ಪ್ರಕರಣಗಳೂ ಸೇರಿದರೆ ವಂಚನೆ ಪ್ರಮಾಣ ಮತ್ತಷ್ಟು ದೊಡ್ಡದಾಗುತ್ತದೆ ಎಂದು ಹೇಳಿದರು.
ಇತ್ತೀಚಿನ ಪ್ರಕರಣವನ್ನು ಉಲ್ಲೇಖಿಸಿದ ಕಂಠಿ, ವಂಚನೆಗಳ ಬಗ್ಗೆ ತ್ವರಿತವಾಗಿ ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯ ಎಂದು ಸೂಚಿಸಿದರು.
ಅಕ್ಟೋಬರ್‍ನಲ್ಲಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಂತೆ ನಟಿಸುವ ಎಐ- ಸೃಷ್ಟಿಯ ವೀಡಿಯೊವನ್ನು ವೀಕ್ಷಿಸಿದ ನಂತರ ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರು ಮೋಸ ಹೋದರು. ಅವರು ಸುಮಾರು 9 ಲಕ್ಷ ರೂಪಾಯಿ ಕಳೆದುಕೊಂಡರು. ಆದಾಗ್ಯೂ, ಘಟನೆಯನ್ನು 1930 ಸಹಾಯವಾಣಿಗೆ ತಕ್ಷಣ ವರದಿ ಮಾಡುವ ಮೂಲಕ, ನಾವು ವಂಚಕನನ್ನು ಪತ್ತೆಹಚ್ಚಲು ಮತ್ತು ವಂಚನೆಗೆ ಒಳಗಾದ ಹಣವನ್ನು ಮರುಪಡೆಯಲು ಸಾಧ್ಯವಾಯಿತು. ಅಂತಹ ಸಂದರ್ಭಗಳಲ್ಲಿ ಪ್ರತಿ ಸೆಕೆಂಡ್ ಪ್ರಮುಖವಾಗುತ್ತದೆ" ಎಂಣದು ಹೇಳಿದರು.
ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳು, ವಾಟ್ಸಪ್ ಗುಂಪುಗಳು ಮತ್ತು ಹಣಕಾಸು ಕಂಪನಿಗಳನ್ನು ಅನುಕರಿಸುವ ವೆಬ್‍ಸೈಟ್‍ಗಳು, ತಪ್ಪಾಗಿ ಸಂಬಂಧವನ್ನು ಹೇಳಿಕೊಳ್ಳುವುದು ಮತ್ತು ಅವರ ಉದ್ಯೋಗಿಗಳಂತೆ ನಟಿಸುವುದು ಸೇರಿದಂತೆ ಸ್ಕ್ಯಾಮರ್‍ಗಳು ಮಾಡುವ ಸಾಮಾನ್ಯ ಆರ್ಥಿಕ ವಂಚನೆಗಳ ಬಗ್ಗೆ ನಾಗರಿಕರ ಗಮನ ಸೆಳೆಯುವುದರ ಮೇಲೆ ಈ ಕಾರ್ಯಕ್ರಮ ಗಮನ ಹರಿಸಿತು.
ನಿವೃತ್ತ ಸಹಾಯಕ ಪೆÇಲೀಸ್ ಆಯುಕ್ತ ಕೆ.ತಿಲಕ್‍ಚಂದ್ರ ಮತ್ತಿತರರು, ನಕಲಿ ಓಟಿಪಿ ವಂಚನೆ, ಫಿಶಿಂಗ್ ವಂಚನೆ, ಡಿಜಿಟಲ್ ಬಂಧನ, ಹಣಕಾಸು ಸಾಲ ವಂಚನೆ, ಪಿಂಚಣಿ ವಂಚನೆ ಹೀಗೆ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ವಿವಿಧ ರೀತಿಯ ವಂಚನೆಗಳ ಬಗ್ಗೆ ಬೆಳಕು ಚೆಲ್ಲಿದರು. ವೈಯಕ್ತಿಕ ಮತ್ತು ಸೂಕ್ಷ್ಮ ಡೇಟಾವನ್ನು ರಕ್ಷಿಸಲು ತಮ್ಮ ಸಾಧನಗಳಲ್ಲಿ ಭದ್ರತಾ ಕ್ರಮಗಳನ್ನು ಸಕ್ರಿಯಗೊಳಿಸಲು ಸಲಹೆ ನೀಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ






