ತಿಮ್ಮಕ್ಕ ಇನ್ನಿಲ್ಲ ನಂಬಲೇ ಬೇಕೀಗ
ನಮ್ಮಮ್ಮನಂತೆಯೇ ವೃಕ್ಷ ಮಾತೆ..
ನಮ್ಮನ್ನು ತೊರೆಯುತ್ತ ತೆರಳಿದಳು ಶ್ರೀ ಮಾತೆ
ಉಮ್ಮಳಿಸಿ ಖೇದವಿದೆ ಭಾಗ್ಯದಾತೆ..
ಬೇಲೂರಿನೂರಿನಲಿ ಹುಟ್ಟುತ್ತ ಇತಿಹಾಸ
ಸಾಲು ಸಸಿಗಳ ನೆಟ್ಟು ತಂಪ ನೀಡೆ..
ಆಲದಾ ಮರದಲ್ಲಿ ಹಕ್ಕಿಗಳ ಗೂಡಲ್ಲಿ
ಮಾಲೆಯಾ ತೆರದಲ್ಲಿ ಹಕ್ಕಿ ಹಾಡೆ..
ಮಕ್ಕಳನು ಹೊಂದದೇ ಇದ್ದರೂ ಗಿಡವೂರಿ
ಒಕ್ಕಲನು ಹಸಿರಾಗಿ ಕಂಡೆ ನೀನು..
ಬಿಕ್ಕಳಿಸಿ ಅಳಲಾರೆ ನೆರಳಲ್ಲಿ ನೀನಿರುವೆ
ಅಕ್ಕರೆಯ ವನ ಮಾತೆ ನೆನಪು ಜೇನು..
ನೀನೆಟ್ಟ ತರುವಲ್ಲಿ ಕಾಯ್ಗಳೂ ಹಣ್ಣುಗಳು
ಬಾನಲ್ಲಿ ಶೋಭೆಗಳು ಕಣ್ಗೆ ತಂಪು..
ನೀನಿರುವೆ ಕನ್ನಡದ ಮನದಲ್ಲಿ ದನಿಯಲ್ಲಿ
ಜಾನಪದ ನುಡಿಯಲ್ಲಿ ಗಾನದಿಂಪು..
- ಗುಣಾಜೆ ರಾಮಚಂದ್ರ ಭಟ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







