ನಮ್ಮ ಕನ್ನಡ ಭಾಷೆಯನ್ನು ಬಿಟ್ಟು ಕೊಡದೆ ಇತರೆ ಭಾಷೆಗಳನ್ನು ಗೌರವಿಸೋಣ: ಡಾ. ಧನಂಜಯ ಕುಂಬ್ಳೆ

Upayuktha
0


ಮಂಗಳೂರು: ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ 'ಸಂಪದ' ವತಿಯಿಂದ ಕನ್ನಡ ರಾಜ್ಯೋತ್ಸವದ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನ.20ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಅವರು ಮಾತನಾಡಿ, ಕನ್ನಡ ಭಾಷೆಯ ಹುಟ್ಟು, ಸಂಸ್ಕೃತಿ, ಇತಿಹಾಸ, ಭಾಷೆಯ ಮಹತ್ವವನ್ನು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಕನ್ನಡದ ಮೇಲೆ ಹೆಚ್ಚುತ್ತಿರುವ ಇತರ ಭಾಷೆಗಳ ಪ್ರಭಾವ ಮತ್ತು ಕನ್ನಡ ಭಾಷೆಯ ಉಳಿವಿಗೆ ಹೋರಾಡುವುದು ಅಗತ್ಯ, ಇತರೆ ಭಾಷೆಗಳನ್ನು ಗೌರವಿಸುತ್ತಲೇ ನಮ್ಮ ಕನ್ನಡ ಭಾಷೆಯನ್ನು ಬಿಟ್ಟು ಕೊಡಬಾರದು ಎಂಬ ಸಂದೇಶ ನೀಡಿದರು.


ಕನ್ನಡ ನಾಡು ಹಾಗೂ ಕನ್ನಡ ಭಾಷೆಯನ್ನು ಮಾತನಾಡುವವರ ಸಂಖ್ಯೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು.ಕವಿರಾಜಮಾರ್ಗದಂತಹ ಕೃತಿಗಳಲ್ಲಿ ಕನ್ನಡ ಜನರು ಹೇಗಿದ್ದರು, ಕನ್ನಡ ನಾಡು ಹೇಗಿತ್ತು ಎಂಬುದರ ಕುರಿತು ಮಾತನಾಡಿದರು. ಇಂಗ್ಲೀಷ್ ಅಥವಾ ಇತರೆ ಭಾಷೆಯನ್ನು ಜ್ಞಾನದ ದೃಷ್ಟಿಯಿಂದ ಮಾತನಾಡಿದರೂ ಕೂಡ ಕನ್ನಡದ ಮೇಲಿನ ಅಭಿಮಾನವನ್ನು ಬಿಟ್ಟುಕೊಡದೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಂತಹ ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ಮಾತನಾಡಿ, ಕನ್ನಡ ರಾಜ್ಯೋತ್ಸವ ದಿನದಂದು ಮಾತ್ರ ಕನ್ನಡಿಗರಾಗದೆ ಎಲ್ಲಾ ದಿನವೂ ಕನ್ನಡಿಗರಾಗಿರಬೇಕು, ಎಲ್ಲಾ ಭಾಷೆಗೂ ಅಸ್ಮಿತೆ ಇರುತ್ತದೆ ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವೆಂದು ಮಾತನಾಡಿದರು.


ಕಾರ್ಯಕ್ರಮದ ಸಂಯೋಜಕಿ ಸರಸ್ವತಿ ಚಿನ್ನಾಕಟ್ಟಿ ಪ್ರಾಸ್ತಾವಿಕ ನುಡಿಗಳ ಮೂಲಕ ಕನ್ನಡ ನಾಡು-ನುಡಿಯ ಗತವೈಭವ, ಭಾಷೆಯ ಮಹತ್ವವನ್ನು ತಿಳಿಸಿದರು.


ಕಾರ್ಯಕ್ರಮದಲ್ಲಿ ಅಂತರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಆನ್ಲೈನ್ ವೇದಿಕೆಯ ಮೂಲಕ ಸ್ಪರ್ಧೆಗಳಲ್ಲಿ ಮತ್ತು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು ಫುಡ್ ಅಂಡ್ ನ್ಯೂಟ್ರಿಷನ್ ವಿಭಾಗದ ಉಪನ್ಯಾಸಕಿ ಕೇತನ ತಿಳಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಸುಚಿತ್ರ ಪಿ. ಶೆಟ್ಟಿ ಸ್ವಾಗತಿಸಿದರು.ಕನ್ನಡ ಸಂಘದ ಕಾರ್ಯದರ್ಶಿ  ತೃತೀಯ ಬಿ ಎಸ್ಸಿ ವಿದ್ಯಾರ್ಥಿ ನಿಖಿಲ್ ಕೆ.ಜೆ ವಂದಿಸಿದರು.ವಿವಿಧ ಕಾಲೇಜುಗಳಿಂದ ಆಗಮಿಸಿದಂತಹ ಉಪನ್ಯಾಸಕರು, ಕಾಲೇಜಿನ ಅಧ್ಯಾಪಕ ವೃಂದ, ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತೃತೀಯ ಬಿ ಕಾಂ ರಿತೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top