ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೆಲ್ ಎನ್ ಎಕ್ಸ್ ಪ್ಲೋರರ್ಸ್ ಜೂನಿಯರ್ ಫೌಂಡೇಶನ್ ತರಬೇತಿ ಕಾರ್ಯಾಗಾರ ಲರ್ನಿಂಗ್ ಲಿಂಕ್ ಫೌಂಡೇಶನ್ ನೀತಿ ಆಯೋಗದ ಸಹಯೋಗದೊಂದಿಗೆ ಮಂಗಳವಾರ (ನ.25) ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ರೊಟೇರಿಯನ್ ಪ್ರವೀಣ್ ಚಂದ್ರ ಜೈನ್ ಕಾರ್ಯಾಗಾರ ಉದ್ಘಾಟಿಸಿ ಎಳೆಯ ಮಕ್ಕಳಲ್ಲಿ ಸಮಸ್ಯೆಗಳ ವಿಶ್ಲೇಷಣೆ ಹಾಗೂ ಸೃಜನಾತ್ಮಕ ಕೌಶಲ್ಯಗಳನ್ನು ಬೆಳೆಸಲು ಕಾರ್ಯಾಗಾರ ನೆರವಾಗಲಿದೆ ಎಂದು ಹೇಳಿದರು.
ಲರ್ನಿಂಗ್ ಲಿಂಕ್ ಫೌಂಡೇಶನ್ ಮ್ಯಾನೇಜರ್ ಮಹಮ್ಮದ್ ಸಕೀರ್ ರವರು ಎಲ್ಎಲ್ಎಫ್ ವತಿಯಿಂದ ಆಯೋಜಿಸಲ್ಪಡುವ ನಾನಾ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ರೋಟರಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯನಿ ತಿಲಕಾ ಅನಂತವೀರ ಜೈನ್ ರವರು ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಿ ಸ್ಟೆಮ್ ಯೋಚನಾ ಶೈಲಿಯನ್ನು ಬೆಳೆಸಿಕೊಂಡು ಮುಂದಿನ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿರಬೇಕೆಂದರು.
ಶಿಕ್ಷಕಿ ಸರಿತಾ ಜೆ ವಂದನಾರ್ಪಣೆ ಮಾಡಿದರು. ಎಲ್ಎಲ್ಎಫ್ ಮ್ಯಾನೇಜರ್ ಮೊಹಮ್ಮದ್ ಸಕೀರ್ ರವರ ಮೇಲ್ವಿಚಾರಣೆಯಲ್ಲಿ, ಎಟಿಎಲ್ ಮೇಲ್ವಿಚಾರಣಾ ಶಿಕ್ಷಕಿ ಭಾರತಿ ಜಿ ಮತ್ತು ಸಹ ಶಿಕ್ಷಕಿ ರೇಖಾ ವೆಂಕಟೇಶ್ ಕಾರ್ಯಾಗಾರವನ್ನು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿಕೊಟ್ಟರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




