ಮಂಗಳೂರು: ಕೆನರಾ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ವತಿಯಿಂದ 'ಕಾರ್ತಿಕ ಸಂಜೆ' ಆಚರಿಸಲಾಯಿತು. ಕಾಲೇಜು ಸಂಚಾಲಕರಾದ ಸಿಎ ಎಂ ಜಗನ್ನಾಥ ಕಾಮತ್ ಮುಖ್ಯ ಅತಿಥಿಯಾಗಿ ಕಾರ್ತಿಕ ಮಾಸದ ಮಹತ್ವವನ್ನು ತಿಳಿಸಿದರು.
ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ, ವ್ಯವಸ್ಥಾಪಕರಾದ ಕೆ ಶಿವಾನಂದ ಶೆಣೈ, ಆಡಳಿತಾಧಿಕಾರಿ ಡಾ ದೀಪ್ತಿ ನಾಯಕ್, ಡಾ. ಗಣೇಶ್ ಶೆಟ್ಟಿ, ಕೀರ್ತಿ ಆಳ್ವ, ಸವಿತಾ ಡಿ.ಕೆ, ಗುರುರಾಜ್ ಶೇಟ್, ಅನಸೂಯಾ ಭಾಗವತ್, ವಿದ್ಯಾರ್ಥಿ ಸಂಘದ ಸೂದ್ ಮೊಹಮ್ಮದ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ 'ಮಂಗಳ'ವನ್ನು ಬಿಡುಗಡೆಗೊಳಿಸಲಾಯಿತು. ಸಂಚಿಕೆ ಸಂಪಾದಕಿ ಶೈಲಜಾ ಪುದುಕೋಳಿ, ಸದಸ್ಯರಾದ ಸುಜಾತ ಜಿ ನಾಯಕ್, ಪುಷ್ಪಾಂಜಲಿ, ಮೇಘ ರಾವ್, ಮನೀಷ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



