ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು, ಉಡುಪಿ, ಇಲ್ಲಿ ಮಹಿಳಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಭಾಗದ ಸಹಭಾಗಿತ್ವದಲ್ಲಿ ರಾಣಿ ಅಬ್ಬಕ್ಕ @500 ಪ್ರೇರಣಾದಾಯಿ ಉಪನ್ಯಾಸಗಳ ಸರಣಿ ಎಸಳು-22 ಎಂಬ ಕಾರ್ಯಕ್ರಮ ಶುಕ್ರವಾರ ದಿನಾಂಕ 22-08-2025ರಂದು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಕಾಪು ವಿಧಾನಸಭಾ ಕ್ಷೇತ್ರ ದ ಮಾಜಿ ಶಾಸಕರಾದ ಲಾಲಾಜಿ ಆರ್ , ಮೆಂಡನ್ ರವರು ವಹಿಸಿದರು, ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ “ ರಾಣಿ ಅಬ್ಬಕ್ಕ ರವರ ಸಾಧನೆಯ ಬಗ್ಗೆ ಮತ್ತು ಅವರಲ್ಲಿರುವ ಧ್ಯೆರ್ಯವನ್ನು ಈಗಿನ ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಹೇಗೆ ಆಳವಡಿಸಿಕೊಳ್ಳ ಬೇಕು” ಎಂದು ಹೇಳಿದರು.
ಮುಖ್ಯ ಸಂಪನ್ಮೂಲ ವ್ಯ ಕ್ತಿಯಾಗಿ ಗೋವಿಂದ ದಾಸ್ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಅಕ್ಷ ತಾ ಶೆಟ್ಟಿ ರವರು “ ರಾಣಿ ಅಬ್ಬಕ್ಕ ರವರು ಪೋರ್ಚುಗೀಸರ ಧಾಳಿಯನ್ನು ದ್ಯೆರ್ಯದಲ್ಲಿ ಎದುರಿಸಿ ಹೇಗೆ ಹಿಮ್ಮೆಟ್ಟಿಸಿದರು ಹಾಗೂ ೧೦ ವರ್ಷಗಳ ಕಾಲ ಪೋರ್ಚುಗೀಸರು ಉಳ್ಳಾಲದ ಕಡೆ ತಲೆಹಾಕಲಿಲ್ಲಒಬ್ಬ ಮಹಿಳೆಯಾಗಿ ವೀರವನಿತೆಯಾಗಿ, ಹೇಗೆ ಯುಧ್ದ ಮಾಡಿ ವಿದೇಶಿಯರನ್ನು ಹೊಡದೋಡಿಸಿದರು ಎಂದು ಅವರ ಜೀವನ ಚರಿತ್ರೆಯನ್ನು ಸರಳವಾಗಿ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಗೋಪಾಲಕ್ರಷ್ಣ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಮಹಿಳಾ ವೇದಿಕೆಯ ಸಂಘಟಕರಾದ ಶ್ರೀಮತಿ ಯಶೋದಾ ಸ್ವಾಗತಿಸಿದರು. ಕೆಆರ್ ಎಂ ಎಸ್ ನ ಉಡುಪಿ ವಿಭಾಗದ ಮುಖ್ಯಸ್ಥರಾದ ಯಶವಂತ್ ಕುದ್ರೋಳಿಯವರು KRMSS ಮಂಗಳೂರು ವಿಭಾಗದ ಬಗ್ಗೆ, ಅವರ ಅನೇಕ ವಿನೂತನ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ವಿದ್ಯಾರ್ಥಿನಿಯಾದ ಜಾಹ್ನವಿ ಪ್ರಾರ್ಥಿಸಿದರು, ತೃತೀಯ ಬಿ.ಎ.ವಿದ್ಯಾರ್ಥೀನಿಯಾದ ಮನೀಷಾ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವೇದಿಕೆಯ ಮುಖ್ಯ ಕಾರ್ಯದರ್ಶಿಯಾದ ತೃತೀಯ ಬಿ.ಕಾಂ ವಿದ್ಯಾರ್ಥಿನಿಯಾದ ಅನುಷಾ ವಂದಿಸಿದರು. ಕಾಲೇಜಿನ ಎಲ್ಲಾ ಪ್ರಾದ್ಯಾಪಕರು,ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿಗಳು, ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರ ಮದಲ್ಲಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







