ನಮ್ಮ ಕನ್ನಡನಾಡಿನಲ್ಲಿ ಅತಿ ಹೆಚ್ಚು ಬಳಕೆ ಮಾಡುವಂತಹ ಭಾಷೆ ಎಂದರೆ ಅದು ಕನ್ನಡ. ಕನ್ನಡ ಅಂದ್ರೆ ಅದು ಬರಿ ಹೆಸರಲ್ಲ, ಅದೊಂದು "ಮಂತ್ರ" ಎಂದು ರಾಷ್ಟ್ರಕವಿ ಕುವೆಂಪುರವರು ಹೇಳಿದ್ದಾರೆ. ಕನ್ನಡಕ್ಕೆ ೨೦೦೦ - ೨೫೦೦ ವರ್ಷಗಳನ್ನು ಮೀರಿದ ಭವ್ಯ ಇತಿಹಾಸ ಇದೆ ಎಂದು ಅಂದಾಜು ಮಾಡಲಾಗಿದೆ.
ಕನ್ನಡವನ್ನು ಜಗತ್ತಿನ ಅತ್ಯಂತ ಹಳೆಯ ಭಾಷೆಗಳ ಸಾಲಿನಲ್ಲಿ ಸೇರಿಸಲಾಗುತ್ತದೆ. ನಮ್ಮ ಭಾರತ ಖಂಡದಲ್ಲಿ ಅತ್ಯಂತ ಹಳೆಯ ಭಾಷೆಗಳನ್ನು ಲೆಕ್ಕ ಹಾಕುವಾಗ ಕನ್ನಡಕ್ಕೆ ಮೂರನೇ ಸ್ಥಾನವನ್ನು ಕೊಡಲಾಗಿದೆ. ಎಲ್ಲಾ ಆಧುನಿಕ ಭಾಷೆಗಳ ಮೂಲ ಲಿಪಿ ಎಂದು ಕರೆಯಲಾಗುವ ಬ್ರಾಹ್ಮೀ ಲಿಪಿಯಿಂದ ಕನ್ನಡ ಭಾಷೆಯ ಲಿಪಿಯನ್ನು ಪಡೆಯಲಾಗಿದೆ. ಕನ್ನಡ ಲಿಪಿ ನಿರಂತರವಾಗಿ ಬದಲಾವಣೆ ಆಗುತ್ತಿದೆ ಎಂದು ನಮಗೆ ತಿಳಿದಿದೆ.
ಕನ್ನಡ ಲಿಪಿಗೆ ಇರುವಂತಹ ಸೌಂದರ್ಯ ಹಾಗೂ ಸರಳತೆಯನ್ನು ಮೆಚ್ಚಿ ಆಚಾರ್ಯ ವಿನೋಭಾ ಭಾವೆ ಯವರು ಕನ್ನಡ ಲಿಪಿ ಜಗತ್ತಿನ ಲಿಪಿಗಳ ರಾಣಿ ಎಂದು ಹೇಳಿದ್ದಾರೆ. ಭಾರತ ಸಂವಿಧಾನ ಗುರುತಿಸುವ 22 ಭಾಷೆಗಳಲ್ಲಿ ಕನ್ನಡವೂ ಒಂದು. ಭಾರತದಲ್ಲಿ ಸಂಸ್ಕೃತ ಮತ್ತು ತಮಿಳಿನ ನಂತರ ಕನ್ನಡ ಭಾಷೆಯು ಶಾಸ್ತ್ರೀಯ ಸ್ಥಾನಮಾನವನ್ನು ಪಡೆದಿದೆ.
ಭಾರತದ ೨೦೧೧ರ ಜನಗಣತಿಯ ಪ್ರಕಾರ ಕನ್ನಡ ಭಾಷೆಯು ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ ೮ನೇ ಸ್ಥಾನದಲ್ಲಿದೆ. ಭಾರತದಲ್ಲಿ ೪.೩೭ ಕೋಟಿಗೂ ಹೆಚ್ಚು ಜನರು ಕನ್ನಡವನ್ನು ಮಾತನಾಡುವವರಿದ್ದಾರೆ. ೨೦೩೩ರ ಹೊತ್ತಿಗೆ ೫೬ ಮಿಲಿಯನ್ ದಾಟಲಿದೆ ಎಂದು ಅಂದಾಜು ಮಾಡಲಾಗಿದೆ. ಕನ್ನಡ ವೈಜ್ಞಾನಿಕವಾಗಿ ಸ್ಪಷ್ಟತೆ ಇರುವಂತಹ ಒಂದು ಭಾಷೆ ಎಂದು ಹೇಳಬಹುದು.
ಕನ್ನಡವೆಂಬುದು ಕೇವಲ ಈ ನಾಡಿನ ಭಾಷೆಯಲ್ಲ, ಅದು ನಮ್ಮ ಗುರುತು. ಕಾಲ ಬದಲಾದರೂ ತನ್ನ ಅದ್ಭುತತೆ ಕಳೆದುಕೊಳ್ಳದೆ ಇಂದಿಗೂ ಹೆಮ್ಮೆಯಿಂದ ನಿಂತಿದೆ, ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
-ಅನನ್ಯ ಭಟ್ ಕೆ
ಎಸ್ ಡಿ ಎಂ ಕಾಲೇಜ್, ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpeg)

