ಓಬೀರಾಯನ ಕಾಲದ ಸಿಸ್ಟಮ್‌ನೊಂದಿಗೇ ಇರುವ ಕೃಷಿ/ತೋಟಗಾರಿಕೆ ಇಲಾಖೆಗಳು ಬದಲಾಗಲಿ

Upayuktha
0


ಹಣಿಗೆ ಆಧಾರ್ ಲಿಂಕ್ ಆಗಿದೆ. ವ್ಯಕ್ತಿಯ ಆಧಾರ್- ಭೂಮಿಯ ಪಹಣಿಗಳ ಜಾತಕ ಒಟ್ಟುಮಾಡಿ ಫ್ರೂಟ್ ಐಡಿ ಮಾಡಲಾಗಿದೆ. ಫ್ರೂಟ್ ಐಡಿಯಲ್ಲಿ ರೈತರ ಹಿಡುವಳಿ ಎಷ್ಟು ಅಂತ ಅಕ್ಯುರೇಟ್ ಆಗಿ ಗೊತ್ತಾಗುತ್ತೆ.


ಬೆಳೆ ಸರ್ವೆ ಮಾಡುವಾಗ ಆಧಾರ್ ನಂಬರ್ ಕೊಟ್ಟರೆ ಸಾಕು ದೇಶದ ಯಾವ ಯಾವ ಮೂಲೆಯಲ್ಲಿ ರೈತನ ಹೆಸರಲ್ಲಿ ಎಷ್ಟು ಗುಂಟೆ ಭೂಮಿ ಇದೆ ಅಂತ ಡೀಟೈಲ್ ಸಿಗುತ್ತೆ.


ಆಧಾರ್‌ಗೆ ಬ್ಯಾಂಕ್ ಅಕೌಂಟ್ ಜೋಡಿಸಿಯಾಗಿದೆ. ಆಧಾರ್, ಬ್ಯಾಂಕ್ ಅಕೌಂಟ್‌ಗೆ NPCI ಅಪ್ ಡೇಟ್ ಮಾಡಲಾಗಿದೆ. ಎಲೆಕ್ಷನ್ ಕಾರ್ಡಿಗೆ ಆಧಾರ್ ಲಿಂಕ್ ಆಗಿದೆ.


ಕ್ರಾಪ್ ಇನ್ಷ್ಯೂರೆನ್ಸ್ ಕಟ್ಟುವಾಗ ಆಧಾರ್ ನಂಬರ್ ನಂಬರ್ ಫ್ರೂಟ್ ಐಡಿ ಇದ್ದರೆ ಸಾಕು, ಪರಿಹಾರಕ್ಕೆ ಇನ್ಷ್ಯೂರೆನ್ಸ್ ಕಂಪನಿಯವರು ಬ್ಯಾಂಕ್ ಡೀಟೈಲ್ಸ್ ಕೇಳಲ್ಲ.


ಮೊಬೈಲ್‌ ನಂಬರ್‌ಗೆ ಆಧಾರ್ ಲಿಂಕ್ ಆಗಿದೆ. ರಸ್ತೆ ಬದಿ ತಳ್ಳು ಗಾಡಿಯಲ್ಲಿ ಹರುವೆ ಸೊಪ್ಪು ಮಾರುವ SSLCಯನ್ನು ಓದಿರದವರು ಡಿಜಿಟಲ್ ಅಪ್‌ಡೇಟ್ ಆಗಿದಾರೆ. ₹.6.50 ಕ್ಕೂ ಗ್ರಾಹಕ ಹರಿವೆ ಸೊಪ್ಪಿನವರ ಬ್ಯಾಂಕ್ ಅಕೌಂಟ್ ಕೇಳಲ್ಲ. ₹.20,000 ಫ್ರಿಜ್ ಮಾರುವವರ ಬಳಿಯೂ ಗ್ರಾಹಕ ಬ್ಯಾಂಕ್ ಅಕೌಂಟ್ ಕೇಳಲ್ಲ!!


ಲಕ್ಷ ಲಕ್ಷ ವಹಿವಾಟು ಷೇರ್ ಬಿಸಿನೆಸ್‌ಗೂ ಒಂದು ಬಸ್ ಟಿಕೇಟ್ ಗಾತ್ರದ ಪೇಪರ್ ಬೇಡ, ಜೆರಾಕ್ಸ್ ಬೇಡ!!


ಗ್ಯಾಸ್ ಖಾಲಿ ಆದಾಗ, ಜೆಸ್ಟ್ ಒಂದು ಮೊಬೈಲ್ ಕರೆ ಮಾಡಿ, ಒಂದನ್ನೋ, ಎರಡನ್ನೋ ಒತ್ತಿದರೆ ಆಯ್ತು, ಗ್ಯಾಸ್‌ನ್ನು ಅಡಿಗೆ ಮನೆಯವರೆಗೆ ತಂದು ಕೊಟ್ಟು ಹೋಗ್ತಾರೆ.  ಬಲಗೈ ಹೆಬ್ಬೆರಳಲ್ಲಿ ಮೊಬೈಲ್ ಸ್ಕ್ರೀನ್ ಒತ್ತಿದರೆ ಗೂಗಲ್‌ನವರು ನಮ್ಮ ಬ್ಯಾಂಕ್‌ಗೆ ಹೋಗಿ, ಗ್ಯಾಸ್‌ನ ಹಣವನ್ನು ಇಂಡಾನೆ ಗ್ಯಾಸ್‌ನ ಕಛೇರಿಗೆ ಕೊಟ್ಟು ಬಂದು ಗ್ರಾಹಕನಿಗೆ ಬಹುಮಾನದ ಸ್ಕ್ರಾಚ್ ಕಾರ್ಡ್ ಕೊಡ್ತಾರೆ!!


ನಾಲ್ಕು ತಿಂಗಳಿಗೊಮ್ಮ ಕೊಡುವ ಕೃಷಿ ಸಮ್ಮಾನ್‌ಗೆ ಗೌರವಕ್ಕೆ ವರ್ಷಕ್ಕೆ ಮೂರು ಬಾರಿ ಪೇಪರ್ ಆ್ಯಕ್ಟಿವಿಟಿ ಇಲ್ಲ.


ಆರು ನೂರು ರುಪಾಯಿ ಮೈಲುತುತ್ತ ಸಹಾಯ ಧನಕ್ಕೆ ಎಂಟು ಪೇಪರ್ ಬೇಕು. ಮೂರು ತೆಂಗಿನ ಸಸಿ ಹಂಚಲು 12 ಡಾಕ್ಯುಮೆಂಟ್‌ಗಳು!!.


ಕೃಷಿ ಕ್ಷೇತ್ರವೇ AI ತಂತ್ರಜ್ಞಾನ ಅಳವಡಿಕೆ ತೆರೆದುಕೊಳ್ಳುತ್ತಿದೆ.


ಸರಕಾರದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳು ಮಾತ್ರ ಯಾಕೆ ಹೀಗೆ ಅನ್ನುವುದು ಪ್ರಶ್ನೆ.


ಕೃಷಿ ತೋಟಗಾರಿಕೆಯಲ್ಲಿ ಆದ ಒಂದೆರೆಡು ಆ್ಯಪ್‌ಗಳೂ ಗೊಂದಲದ ಗೂಡಾಗಿವೆ. ಬೆಳೆ ಸರ್ವೆ ಆ್ಯಪ್‌ನಲ್ಲಿ ಇರುವ ಹತ್ತಾರು ದೋಷಗಳು ಐದು ವರ್ಷಗಳಿಂದ ಕ್ಲಿಯರ್ ಆಗಿಲ್ಲ, ದಿಶಾಂಕ್ ಆ್ಯಪ್‌ನಲ್ಲಿ ಕೃಷಿ ಭೂಮಿಯ ಸರ್ವೆ ನಂಬರ್‌ಗಳು ಕಿಲೋ ಮೀಟರ್‌ಗಟ್ಟಲೆ ಜಾರಿ ಹೋಗಿವೆ!!


ತೋಟಗಾರಿಕಾ ಅಧಿಕಾರಿಗಳೇ ಈ ಎಲ್ಲಾ ವಿಚಾರಗಳನ್ನು ಬಗ್ಗೆ ಗಂಭೀರವಾಗಿ ಚಿಂತಿಸಿ, ಗಂಭೀರ ಪ್ರಯತ್ನ ಮಾಡಬಹುದಾ ಎನ್ನುವುದು ರೈತರ ಕಡೆಯಿಂದ ಒಂದು ಪ್ರಶ್ನೆ.


ತೀರ ಫಾಸ್ಟ್‌ಟ್ರಾಕ್ ಸಿಸ್ಟಮ್ ಅಲ್ಲದೇ ಇದ್ದರೂ, ಕೃಷಿ ತೋಟಗಾರಿಕೆ ಇಲಾಖೆಗಳು ಸಾಮಾನ್ಯ ಮಟ್ಟದ ಅಪ್‌ಗ್ರೇಡ್ ಆದರೂ ಆಗಲಿ ಎನ್ನುವುದು ರೈತರ ನಿರೀಕ್ಷೆ.


AI ತಂತ್ರಜ್ಞಾನಕ್ಕೆ ಕೃಷಿ ಕ್ಷೇತ್ರ ಸಿದ್ದವಾಗಿದೆ, ಕೃಷಿಕರೂ ರೆಡಿ ಆಗ್ತಾ ಇದ್ದಾರೆ. ಸಮಸ್ಯೆ ಇರುವುದು ಓಬೀರಾಯನ ಕಾಲದ ಸಿಸ್ಟಮ್‌ನೊಂದಿಗೇ ಇರುವ ಕೃಷಿ/ತೋಟಗಾರಿಕೆ ಇಲಾಖೆಗಳದ್ದು.


ಅಪ್‌ಗ್ರೇಡ್ ಆದರೆ ಅನುಕೂಲ ಆಗುವುದು, ಸುಲಭವಾಗುವುದು, ಒತ್ತಡಗಳಿಂದ ಹಗುರವಾಗುವುದು ಇಲಾಖೆಗಳಲ್ಲಿ ಕೆಲಸ ಮಾಡುವವರೂ ಮತ್ತು ಫಲಾನುಭವಿ ರೈತರು.


ಆದಷ್ಟು ಬೇಗ ಇದು ಆಗಲಿ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top