ಹಾಸನ: ಜಿ.ಜಿ.ಜೆ.ಸಿ ಪ್ರಧಾನ ಶಾಲೆಯಲ್ಲಿ ಸಂವಿಧಾನ ದಿನಾಚರಣೆ

Upayuktha
0


ಹಾಸನ: ಭಾರತದ ಸಂವಿಧಾನವು 1949ರ ನವೆಂಬರ್ 26 ರಂದು ಅಂಗೀಕೃತವಾದ ನೆನಪಿನಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸತ್ತಿದ್ದೇವೆ. ನಮ್ಮ ಸಂವಿಧಾನವು ವಿಶ್ವದಲ್ಲೇ ಬೃಹತ್ ಸಂವಿಧಾನವಾಗಿದ್ದು, ಸಮೋನ್ನತ ಕಾನೂನು ಆಗಿದೆ. ಇದನ್ನು ಗೌರವಿಸಿ ಅರಿತು ನಡೆಯುವುದು ನಮ್ಮೆಲ್ಲರ ಎಲ್ಲರೂ ಕರ್ತವ್ಯವಾಗಿದೆ ಎಂದು ಹಿರಿಯ ಸಹ ಶಿಕ್ಷಕರಾದ ಹೆಚ್.ಪಿ. ಮಂಜುಳ ಹೇಳಿದರು. 


ನಗರದ ಆರ್.ಸಿ. ರಸ್ತೆಯ ಗಂಧದಕೋಠಿ ಆವರಣದಲ್ಲಿರುವ ಜಿ.ಜಿ.ಜೆ.ಸಿ. ಪ್ರಧಾನ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 76ನೇ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸಂವಿಧಾನದ ರಕ್ಷಣೆ ನಮ್ಮ ಹೊಣೆ ಎಂದು ಹೇಳಿದರು. 


ಸಮಾಜವಿಜ್ಞಾನ ವಿಷಯ ಶಿಕ್ಷಕ ಕೆ.ಎನ್. ಚಿದಾನಂದ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಸಂವಿಧಾನವು ದೇಶದ ಮೂಲಭೂತ ಕಾನೂನಾಗಿದೆ. ಸಂವಿಧಾನದ ಇತಿಹಾಸವನ್ನು ಮತ್ತು ಅದರ ನಿರಂತರ ಬೆಳವಣಿಗೆಯನ್ನು ಇಂದಿನ ಮಕ್ಕಳು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸಂವಿಧಾನದಲ್ಲಿರುವ ಕಾನೂನುಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಇದಕ್ಕೆ ಸಂವಿಧಾನ ಓದು ಕಾರ್ಯಕ್ರಮವು ಬಹಳಷ್ಟು ಅನುಕೂಲವಾಗಿದೆ. ನಮ್ಮ ಸಂವಿಧಾನವು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬಂದಿದ್ದು ಅಂದು 395 ವಿಧಿಗಳು, 22 ಭಾಗಗಳು ಮತ್ತು 8 ಅನುಸೂಚಿಗಳನ್ನು ಹೊಂದಿತು. ಇಂದಿನ ಕಾಲಮಾನಕ್ಕೆ ಅನುಗುಣವಾಗಿ ವಿಧಿಗಳು, ಭಾಗಗಳು ಮತ್ತು ಅನುಸೂಚಿಗಳು ಹೆಚ್ಚಿವೆ. ಹಾಗೆಯೇ ಸಂವಿಧಾನದ ಪ್ರತಿಯೊಂದೂ ಭಾಗವು ನಿರ್ದಿಷ್ಟ ವಿಷಯದ ಕುರಿತಾಗಿ ಹೇಳುತ್ತದೆ. ಪ್ರತಿಯೊಂದು ವಿಧಿಯೂ ನಿರ್ದಿಷ್ಟ ಮತ್ತು ಸ್ಪಷ್ಟ ಕಾನೂನುಗಳನ್ನು ಹೇಳುತ್ತದೆ ಎಂದರು.


ಅಂತೆಯೇ ಮುಂದುವರಿದು ಮಾತನಾಡುತ್ತಾ, ಪ್ರತಿ ವರ್ಷ ನವೆಂಬರ್ 26 ಅನ್ನು ಭಾರತ ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ. 1949ರ ಇದೇ ದಿನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನ ರಚನಾ ಸಮಿತಿಯು ಭಾರತದ ಸಂವಿಧಾನಕ್ಕೆ ಅಂತಿಮ ರೂಪ ನೀಡಿತು. ನಂತರ 1950ರ ಜನವರಿ 26ರಂದು ಸಂವಿಧಾನ ಜಾರಿಯಾಗಿ ಭಾರತವು ಸಂಪೂರ್ಣ ಗಣರಾಜ್ಯ ರಾಷ್ಟ್ರವಾಯಿತು. ಸಂವಿಧಾನ ದಿನದ ಆಚರಣೆಯ ಮುಖ್ಯ ಉದ್ದೇಶ ನಾಗರಿಕರಲ್ಲಿ ಸಂವಿಧಾನೀಯ ಮೌಲ್ಯಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ಪ್ರಜಾಪ್ರಭುತ್ವದ ಮಹತ್ವ ಮತ್ತು ರಾಷ್ಟ್ರದ ಏಕತೆ–ಅಖಂಡತೆ ಬಗ್ಗೆ ಅರಿವು ಮೂಡಿಸುವುದು. ಡಾ. ಅಂಬೇಡ್ಕರ್ ಮತ್ತು ಸಂವಿಧಾನ ರಚನೆಗೆ ಶ್ರಮಿಸಿದ ಎಲ್ಲಾ ನಾಯಕರನ್ನು ಸ್ಮರಿಸುವ ದಿನವೂ ಹೌದು. ವಿಶ್ವದ ಅತ್ಯಂತ ದೊಡ್ಡ ಲಿಖಿತ ಸಂವಿಧಾನವಾಗಿರುವ ಭಾರತೀಯ ಸಂವಿಧಾನ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಧರ್ಮನಿರಪೇಕ್ಷತೆ ಎಂಬ ಮೌಲ್ಯಗಳ ಮೇಲೆ ನಿರ್ಮಿತವಾಗಿದೆ. ಈ ದಿನ ಶಾಲೆ–ಕಾಲೇಜುಗಳಲ್ಲಿ ಪೀಠಿಕೆ ಪಠಣ, ಭಾಷಣ, ಪ್ರಬಂಧ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.


ಸಂವಿಧಾನ ದಿನ ನಮಗೆ ದೇಶದ ಅಭಿವೃದ್ಧಿಗೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗುವ ಪ್ರೇರಣೆಯನ್ನು ನೀಡುತ್ತದೆ. ನಮ್ಮ ಸಂವಿಧಾನದ 3ನೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ತಿಳಿಸಲಾಗಿದೆ. ಭಾರತದ ಎಲ್ಲಾ  ನಾಗರೀಕರು ಈ ಹಕ್ಕುಗಳನ್ನು ಅನುಭವಿಸಲು ಅರ್ಹತೆ ಹೊಂದಿದ್ದು ಮೂಲಭೂ ಕರ್ತವ್ಯಗಳನ್ನು ಪಾಲಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಸಂವಿಧಾನ ಉಳಿಸಿ ರಕ್ಷಿಸುವ ಹೊಣೆಯೂ ನಮ್ಮದಾಗಿದೆ ಎಂದು ತಿಳಿಸಿದರು. 


ಈ ನಡುವೆ ಸಂವಿಧಾನದ ಪೂರ್ವ ಪೀಠಿಕೆಯನ್ನು ಎಲ್ಲರೂ ಓದಿದರು. ಮೂಲಭೂತ ಹಕ್ಕುಗಳ ಪ್ಲಕಾರ್ಡ್ ಗಳನ್ನು ಪ್ರದರ್ಶಿಸಲಾಯಿತು.


ವಿಜ್ಞಾನ ವಿಷಯ ಶಿಕ್ಷಕ ಪಿ. ಮಧು ರವರು ಮಾತನಾಡಿ, ಸಂವಿಧಾನದಲ್ಲಿನ ಕಾನೂನುಗಳನ್ನು ಓದಿಕೊಂಡು ಅವುಗಳನ್ನು ನಮ್ಮ ಜೀವ ಮತ್ತು ಜೀವನದ ಸುರಕ್ಷತೆಗೆ ಅಗತ್ಯವಾಗಿ ಬಳಸುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು. ಕಾನೂನುಗಳು ಎಲ್ಲಾ ನಾಗರಿಕರ ರಕ್ಷಣೆಗಾಗಿಯೇ ಇದೆ. ಎಲ್ಲರೂ ಅರಿತು ಮುನ್ನಡೆಯಬೇಕು ಎಂದು ಹೇಳುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top