ಮಾದರಿ ಸಂಸತ್ತು ಅಧಿವೇಶನದ ಮೂಲಕ ಸಂವಿಧಾನ ದಿನಾಚರಣೆಯ ಸಂದೇಶ
ಉಡುಪಿ: ಭಾರತೀಯ ಸಂವಿಧಾನ ದೇಶದ ಪವಿತ್ರವಾದ ಸರ್ವರ ಸರ್ವ ಶ್ರೇಷ್ಠ ಗ್ರಂಥ. ಈ ಗ್ರಂಥದ ಮೌಲ್ಯ ಪಾವಿತ್ರ್ಯವನ್ನು ಹೆಚ್ಚಿಸುವ ಕಾಪಾಡುವ ಜವಾಬ್ದಾರಿ ಜನರಿಂದ ಆಯ್ಕೆಗೊಂಡ ಸಂಸತ್ತಿನ ಜನಪ್ರತಿನಿಧಿಗಳಿಗಿದೆ. ಈ ನಿಟ್ಟಿನಲ್ಲಿ ಯುವ ಜನತೆಗೆ ಸಂಸತ್ತಿನ ನಡಾವಳಿಕೆ ಕಾರ್ಯಕಲಾಪಗಳ ಜವಾಬ್ದಾರಿ ಕುರಿತಾಗಿ ಅರಿವು ಮೂಡಿಸುವ ಅಥ೯ ಪೂರ್ಣವಾದ ಮಾದರಿ ಅಣಕು ಸಂಸತ್ತು ಕಾರ್ಯಕ್ರಮ ಉಡುಪಿ ಎಂಜಿಎಂ ಕಾಲೇಜಿನ ಮಾನವಿಕ ಶಾಸ್ತ್ರ ವಿಭಾಗದ ವತಿಯಿಂದ ಸಂವಿಧಾನ ದಿನಾಚರಣೆಯ ಪ್ರಯುಕ್ತವಾಗಿ ಜರುಗಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಉಪ ಪ್ರಾಂಶುಪಾಲ ಡಾ.ಎಂ. ವಿಶ್ವನಾಥ ಪೈ, ನಿವೃತ್ತ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಐಕ್ಯೂಎಸಿ ಸಂಚಾಲಕಿ ಪ್ರೊ. ಶೈಲಜಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಜ್ಯೋತಿ ಅಲ್ಪೇೂಫನಾ ಉಪಸ್ಥಿತರಿದ್ದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವಿದ್ಯಾನಾಥ ಸ್ವಾಗತಿಸಿ, ಉಪನ್ಯಾಸಕಿ ಅದಿತಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಪದ್ಮಜಾ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ






