ಲೇಖಿಕಾ ಸಾಹಿತ್ಯ ವೇದಿಕೆ ರಜತ ಸಂಭ್ರಮ ಕವಿಗೋಷ್ಠಿ, ಸನ್ಮಾನ ಸಾಂಸ್ಕೃತಿಕ ಕಾರ್ಯಕ್ರಮ

Upayuktha
0


ಹಾಸನ: ಲೇಖಕಿಯರು ಕಥೆ ಕವನ ಕಾದಂಬರಿಗಳ ಜೊತೆಯಲ್ಲಿ ವಿಮರ್ಶಾ ಕ್ಷೇತ್ರದಲ್ಲಿ ಕೂಡಾ ತೊಡಗಿಸಿಕೊಳ್ಳಬೇಕು. ಎಲ್ಲಾ ಬರಹಗಳು ವಿಮರ್ಶೆಯ ಮಾನದಂಡಕ್ಕೆ ಒಳಪಡಬೇಕು ಎಂದು ಹಿರಿಯ ಕವಯಿತ್ರಿ ಡಾ. ಹೇಮಾ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು. ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯ ರಜತ ಸಂಭ್ರಮ ಅಂಗವಾಗಿ ಹಾಸನದ ಎ.ವಿ.ಕೆ.ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. 


ಲೇಖಿಕ ಸಾಹಿತ್ಯ ವೇದಿಕೆ ವೇದಿಕೆಯ ಸಂಸ್ಥಾಪಕರು ಲೇಖಕಿ ಶೈಲಜಾ ಸುರೇಶ್ ಮಾತನಾಡಿ ಲೇಖಿಕ ಸಾಹಿತ್ಯ ವೇದಿಕೆಗೆ  25 ವರ್ಷ ತುಂಬಿ ಈ ಪ್ರಯುಕ್ತ ರಜತ ಮಹೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಇದರ ಸಂಚಾಲಕಿಯಾಗಿ ನನಗೆ ನನ್ನ ಹುಟ್ಟಿದೂರಿನಲ್ಲಿ ನಡೆಯುತ್ತಿರುವುದು ಅತ್ಯಂತ ಸಾರ್ಥಕ್ಯ ಭಾವ ತಂದಿದೆ ಎಂದು ಭಾವುಕರಾಗಿ ನುಡಿದರು. 


ಕವಿಗೋಷ್ಠಿಯಲ್ಲಿ ಬೆಂಗಳೂರಿನ ಸ್ವರ್ಣಗೌರಿ, ಹೇಮಾ ದೇಸಾಯಿ, ಶಾಂತಿ ವಾಸು, ಅಕ್ಷಯ ಮರಾಟೆ, ಅರುಣಾರಾವ್, ವಿಭಾ ಪುರೋಹಿತ್, ರತ್ನ ನಾಗರಾಜ್, ಸವಿತಾ ನಾಗೇಶ್, ರಾಣಿ ವಿ ಗೋವಿಂದರಾಜು, ದೀಪ ಜಿ.ಸುಬ್ರಹ್ಮಣ್ಯ, ಗಾಯತ್ರಿ ಬಿ.ಜಿ.ಶಾಂತ ಜಯಾನಂದ, ಮೈಸೂರಿನ ಸುಜಾಜ ರವೀಶ್, ಕೆ.ಟಿ.ವಾಣಿಸುಬ್ಬಯ್ಯ, ಮಡಿಕೇರಿಯ ಸಹನಾ ಕಾಂತಬೈಲು, ಕಾರ್ಕಳದ ಜ್ಯೋತಿ ಗುರುಪ್ರಸಾದ್, ಗೋಕಾಕದ ಪುಷ್ಟಾ ಮುರುಗೋಡ್, ಹಾಸನದ ಡಾ. ಶಾಂತಾ ಅತ್ನಿ, ಪರಮೇಶ್ ಮಡಬಲು, ವನಜಾ ಸುರೇಶ್, ಸುಳ್ಯದ ಡಾ. ವೀಣಾ ಭಾಗವಹಿಸಿದ್ದರು. ಭಾಗವಹಿಸಿದ್ದ ಎಲ್ಲಾ ಕವಿಗಳಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ, ಶಾಲು, ಹಾರ ಮತ್ತು ಪುಸ್ತಕ ಗೌರವ ನೀಡಲಾಯಿತು. ಬೆಳಗಿನ ಉದ್ಘಾಟನಾ ಕಾರ್ಯಕ್ರಮದಲ್ಲಿ   25 ಸಾಹಿತ್ಯ ಕ್ಷೇತ್ರದ ಸಾಧಕರಿಗೆ   ಲೇಖಿಕಾ ಶ್ರಿ 2025 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 


ಹಾಸನದ ಸಾಹಿತಿ ಗೊರೂರು ಅನಂತರಾಜು, ಎನ್.ಎಲ್. ಚನ್ನೇಗೌಡ, ಉದಯರವಿ, ಲೀಲಾವತಿ, ಸುಕನ್ಯ ಮುಕುಂದ, ಸುಮಾ ವೀಣಾ, ಪ್ರಭಾ ದಿನಮಣಿ, ಧಾರವಾಡದ  ದಮಯಂತಿ ನರೇಗಲ್, ವಿದ್ಯಾ ಶಿರಹಟ್ಟಿ, ರೂಪಾ ಜೋಶಿ, ಮೈಸೂರಿನ ಡಾ. ಕರುಣಾ ಲಕ್ಷ್ಮಿ,  ಕೆ.ಎಂ.ಲೋಲಾಕ್ಷಿ, ಪದ್ಮಾ ಆನಂದ್, ಉಷಾ ನರಸಿಂಹನ್, ಬೆಂಗಳೂರಿನ ನಾಗವೇಣಿ ರಂಗನ್, ಮುಕುಂದ ಗಂಗೂರ್, ಯಶೋದಾ ಡಿ. ರಾಧಾ ಟೇಕಲ್, ಬೆಳಗಾವಿಯ ಮಧುರಾ ಕರ್ಣಂ, ದೀಪಿಕಾ ಚಾಟೆ, ಚಿಕ್ಕಮಗಳೂರಿನ ನಾಗಲಕ್ಷ್ಮಿ ಎಂ.ಜೆ., ಉತ್ತರ ಕನ್ನಡದ ಭಾಗೀರಥಿ  ಹೆಗಡೆ, ಡಾ. ವೀಣಾ ಸುಳ್ಯ, ಕೃಷ್ಣ ಪದಕಿ ಸನ್ಮಾನ ಸ್ವೀಕರಿಸಿದರು.  ಸಂಸ್ಥೆಯು ನಡೆಸಿದ ತ್ರಿವೇಣಿ ಮನೋವೈಜ್ಞಾನಿಕ ಕಥಾ ಸ್ಫರ್ಧೆ ವಿಜೇತರಾದ ವಿದ್ಯಾಶಿರಹಟ್ಟಿ ಪ್ರಥಮ, ಎಸ್.ರಘುನಂದನ್ ದ್ವಿತೀಯ, ಡಾ. ಇಂದಿರಾ ದೊಡ್ಡಬಳ್ಳಾಪುರ ತೃತೀಯ ಮತ್ತು ಜ್ಯೋತಿ ಗುರುಪ್ರಸಾದ್ ಕಾರ್ಕಳ ಮೆಚ್ಚುಗೆ ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಡಾ. ಸೀ.ಚ. ಯತೀಶ್ವರ, ಸಂಚಾಲಕಿ ಶೈಲಜಾ ಸುರೇಶ್, ಪತ್ರಕರ್ತರು ವೆಂಕಟೇಶ್, ಡಾ.ವಿಜಯ, ಡಾ.ಸಾವಿತ್ರಿ, ಉಮಾಶಂಕರ್, ಇದ್ದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದ ಡಾ. ಇಂದಿರಾ ಮತ್ತು ನಾಗವೇಣಿ ರಮನಗನ್ ತಂಡದವರಿಂದ ಕಿರುನಾಟಕ ಮತ್ತು ವಿದ್ಯಾ ಶಿರಹಟ್ಟಿ ತಂಡದವರಿಂದ ಕವ್ವಾಲಿ ಕಾರ್ಯಕ್ರಮ ನಡೆಯಿತು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Advt Slider:
To Top