ಧರ್ಮಸ್ಥಳ ಯಕ್ಷಗಾನ ಮಂಡಳಿ: ಸೇವಾ ಬಯಲಾಟ ಪ್ರದರ್ಶನ ಪ್ರಾರಂಭ

Upayuktha
0


ಯಕ್ಷಗಾನ ಮಂಡಳಿಯ ಶ್ರೀ ಮಹಾಗಣಪತಿ ದೇವರನ್ನು ಮಹಾಪೂಜೆ ಬಳಿಕ ಭವ್ಯ ಮೆರವಣಿಗೆಯಲ್ಲಿ ಭಾನುವಾರ ಪುಂಜಾಲಕಟ್ಟೆಗೆ ಕೊಂಡು ಹೋಗಲಾಯಿತು.


ಉಜಿರೆ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸೇವಾ ಬಯಲಾಟ ಪ್ರದರ್ಶನಗಳು ಭಾನುವಾರ ರಾತ್ರಿ ಪುಂಜಾಲಕಟ್ಟೆಯಿಂದ ಆರಂಭವಾಗಿದ್ದು ಮೇಳದ ಶ್ರೀ ಮಾಹಾಗಣಪತಿ ದೇವರ ಮೂರ್ತಿಯನ್ನು ಛತ್ರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಬಳಿಕ ಭಾನುವಾರ ಬೆಳಿಗ್ಯೆ ಗಂಟೆ 8-15ರ  ಶುಭ ಮುಹೂರ್ತದಲ್ಲಿ “ಮಂಜುಕೃಪಾ”ದಲ್ಲಿ ವಿರಾಜಮಾನಗೊಳಿಸಲಾಯಿತು.


ಅಲ್ಲಿ ಮಧ್ಯಾಹ್ನ ಗಣಹೋಮ, ಮಹಾಪೂಜೆ ಹಾಗೂ ಸಂಜೆಯ ಪೂಜೆ ನೆರವೇರಿಸಿ ಪೂಂಜಾಲಕಟ್ಟೆಯಲ್ಲಿ ಸೇವಾ ಬಯಲಾಟ ಪ್ರದರ್ಶನದ ಸ್ಥಳಕ್ಕೆ ಭವ್ಯ ಮೆರವಣಿಗೆಯಲ್ಲಿ ಕೊಂಡು ಹೋಗಲಾಯಿತು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಮೇಳದ ಸಿಬ್ಬಂದಿ ಹಾಗೂ ಕಲಾವಿದರು ಉಪಸ್ಥಿತರಿದ್ದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top