ಗೋವಿಂದ ದಾಸ ಕಾಲೇಜಿನಲ್ಲಿ ಪ್ರಾವೀಣ್ಯ–2025 ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ

Upayuktha
0


ಸುರತ್ಕಲ್‍: ವಿದ್ಯಾರ್ಥಿಗಳಲ್ಲಿ ಅಡಗಿರುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನುಒಂದೇ ವೇದಿಕೆಯಲ್ಲಿ ಅನಾರವಣಗೊಳಿಸಲು   ಸಂಯೋಜಿಸುವ ಪ್ರಾವೀಣ್ಯ – 2025ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ತಮ್ಮ ಕಲಾರಾಧನೆಯನ್ನು ಅಭಿವ್ಯಕ್ತಗೊಳಿಸಲು ವಿನೂತನ ಅವಕಾಶವಾಗಿದೆ ಎಂದು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‍ನ ಕಾರ್ಯದರ್ಶಿ ಶ್ರೀರಂಗ ಹೆಚ್. ನುಡಿದರು.


ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‍ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು ಸುರತ್ಕಲ್ ಆಯೋಜಿಸಿದ್ದ ಪದವಿಪೂರ್ವ ಮಟ್ಟದ ಅಂತರ್ ಕಾಲೇಜು ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸ್ಪರ್ಧೆ ಪ್ರಾವೀಣ್ಯ – 2025ನ್ನು ಉದ್ಘಾಟಿಸಿ ಮಾತನಾಡಿದರು.


ಮುಖ್ಯ ಅತಿಥಿ, 170 ಗಂಟೆಗಳ ನಿರಂತರ ಭರಟನಾಟ್ಯದ ಮೂಲಕ ವಿಶ್ವ ದಾಖಲೆಯನ್ನು ಸಾಧಿಸಿ ಗೋಲ್ಡನ್ ಬುಕ್ ಆಫ್ ವಲ್ರ್ಡ್, ಲಂಡನ್ (2025)ರ ಮಾನ್ಯತೆ ಪಡೆದ ಖ್ಯಾತ ಕಲಾವಿದೆ ರೆಮೋನಾ ಇವೆಟ್ಟಾ ಪಿರೇರಾ ಅವರು ಶಿಸ್ತು, ಸಮರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮದ ಮೂಲಕ ಜೀವನದ ಕನಸುಗಳನ್ನು ನನಸಾಗಿಸಿಕೊಂಡು ಅತ್ಯುನ್ನತ ಸಾಧನೆಗೈಯಬಹುದು. ಕಲಾರಾಧನೆ, ಪತ್ರಿಭೆ ಮತ್ತು ತಂಡ ಮನೋಭಾವದ ಉತ್ಸವವನ್ನು ಮುಂದುವರೆಸಿ ಸಂಭ್ರಮಿಸುವ ಜೊತೆಗೆ ಎಂದೆದಿಗೂ ಕನಸು ಕಾಣಿರಿ, ಶ್ರಮಿಸಿ ನಿರಂತರ ಬೆಳಗುತ್ತಿರಿ ಎಂದು ವಿದ್ಯಾರ್ಥಿಗಳಲ್ಲಿ ಚೈತನ್ಯ ತುಂಬಿದರು.


ಗೌರವ ಅತಿಥಿ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ. ಮಾತನಾಡಿ ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಪ್ರತಿಭೆಗಳನ್ನು ಮುಕ್ತವಾಗಿ ಪ್ರದರ್ಶಿಸಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಮಾತನಾಡಿ ಗೋವಿಂದ ದಾಸ ಕಾಲೇಜು ಪದವಿ ಪೂರ್ವ ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧೆಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದು ಪ್ರಾವೀಣ್ಯ ಸ್ಪರ್ಧೆಯು  ಕಲಿಕೆ, ಆರೋಗ್ಯಕರ ಸ್ಪರ್ಧಾತ್ಮಕತೆ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಯನ್ನು ಉತ್ತೇಜಿಸುವುದರ ಜೊತೆಗೆ ಅವರ ಸಾಮಥ್ರ್ಯವನ್ನು ಪೂರ್ಣವಾಗಿ ಅನ್ವೇಷಿಸಲು ಮತ್ತು ಅಭಿವ್ಯಕ್ತಗೊಳಿಸಲು ಉತ್ತಮ ಅವಕಾಶವಾಗಿದೆ ಎಂದರು.


ಉಪಪ್ರಾಂಶುಪಾಲ ಪ್ರೊ. ನೀಲಪ್ಪ ವಿ., ಐಶೆ ಸಂಯೋಜಕ ಪ್ರೊ. ವಾಮನ ಕಾಮತ್, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಧನ್ಯಕುಮಾರ್ ವೆಂಕಣ್ಣವರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ.,ಸ್ಟಾಫ್ ಸೆಕ್ರಟರಿ ಗೀತಾ ಕೆ., ಪ್ರಾವೀಣ್ಯ 2025ರ ಸಂಯೋಜಕಿ ಡಾ. ಆಶಾಲತಾ ಪಿ. ಮತ್ತಿತರರು ಉಪಸ್ಥಿತರಿದ್ದರು.


ದೇವಿಕಾ ಸ್ವಾಗತಿಸಿ ಪೂರ್ವಿಕಾ ವಂದಿಸಿದರು. ಶ್ರೇಯ ಕಾರ್ಯಕ್ರಮ ನಿರೂಪಿಸಿದರು.


ಇದೇ ವೇದಿಕೆಯಲ್ಲಿ ರೆಮೋನಾ ಇವೆಟ್ಟಾ ಪಿರೇರಾ ಅವರನ್ನು ಸನ್ಮಾನಿಸಲಾಯಿತು.


ಸಮಾರೋಪ ಸಮಾರಂಭದಲ್ಲಿ ಹಿಂದು ವಿದ್ಯಾದಾಯಿನೀ ಸಂಘ (ರಿ) ಸುರತ್ಕಲ್‍ನ ಅಧ್ಯಕ್ಷ ಜಯಚಂದ್ರ ಎಸ್. ಹತ್ವಾರ್, ಉದ್ಯಮಿ ರೂಪೇಶ್ ರೈ ಮುಖ್ಯ ಅತಿಥಿಗಳಾಗಿ ಪ್ರಾವೀಣ್ಯ ವಿಜೇತರಿಗೆ ಬಹುಮಾನಗಳನ್ನು ನೀಡಿ ಗೌರವಿಸಿದರು.


ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಪ್ರಥಮ ಸಮಗ್ರ ಪ್ರಶಸ್ತಿ ಮತ್ತು ಗೋವಿಂದ ದಾಸ ಪದವಿಪೂರ್ವ ಕಾಲೇಜು, ಸುರತ್ಕಲ್ ದ್ವಿತಿಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. 



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top