ಅಯೋಧ್ಯೆ ರಾಮನಿಗೆ ಉಡುಪಿಯಿಂದ ಸ್ವರ್ಣಾಭರಣ: ಸ್ವರ್ಣ ಜ್ಯುವೆಲ್ಲರ್ಸ್‌ನಲ್ಲಿ ತಯಾರಿ

Upayuktha
0


ಉಡುಪಿ: ಅಯೋಧ್ಯೆ ರಾಮಮಂದಿರದ ಮೊದಲ ಮಹಡಿಯಲ್ಲಿ ನಿರ್ಮಿತವಾಗಿರುವ ಶ್ರೀರಾಮ ದರ್ಬಾರ್ ನಲ್ಲಿರುವ ಶ್ರೀರಾಮ‌ಪಟ್ಟಾಭಿಷೇಕ ದ ಶ್ರೀರಾಮ‌ಸೀತೆ ಲಕ್ಷ್ಮಣ ಆಂಜನೇಯ ವಿಗ್ರಹಗಳಿಗೆ ಉಡುಪಿಯಿಂದ ಸ್ವರ್ಣಾಭರಣಗಳನ್ನು ತಯಾರಿಸಿ ಅರ್ಪಿಸಲಾಗಿದೆ. ಮಂದಿರದ ಟ್ರಸ್ಟ್ ನವರ ಮನವಿಯಂತೆ ಉಡುಪಿಯ ಪ್ರಸಿದ್ಧ ಸ್ವರ್ಣ ಜ್ಯುವೆಲ್ಪರ್ಸ್ ನವರು ಕೇವಲ‌ ಹತ್ತು ದಿನಗಳಲ್ಲಿ ಈ ಆಭರಣಗಳನ್ನು ತಯಾರಿಸಿ ಕೊಟ್ಟಿದ್ದಾರೆ. ನಿನ್ನೆ ಸೋಮವಾರ ಸಂಸ್ಥೆಯ ಶ್ರೀ ಗುಜ್ಜಾಡಿ ದೀಪಕ್ ನಾಯಕ್ ಮತ್ತಿತರರು ಅಯೋಧ್ಯೆಗೆ ತೆರಳಿ ಈ ಆಭರಣಗಳನ್ನು ಶಿಲಾ ವಿಗ್ರಹಗಳಿಗೆ ತೊಡಿಸಿರುತ್ತಾರೆ.


ಈ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಸಂಸ್ಥೆಯ ಗುಜ್ಜಾಡಿ ರಾಮದಾಸ ನಾಯಕರು, ಇದೊಂದು ನಿಜವಾಗಿಯೂ ನಮಗೆ ಅಪೂರ್ವ ಅವಕಾಶ.‌ ಗುರುಹಿರಿಯರ ಪುಣ್ಯದಿಂದ ಲಭಿಸಿದೆ. ಅಯೋಧ್ಯೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡು ಪ್ರಧಾನಮಂತ್ರಿಯವರಿಂದ ಭಗವಾಧ್ವಜಾರೋಹಣದ ಹೊತ್ತಲ್ಲೇ ಈ ಆಭರಣ ತಯಾರಿಯ ಅವಕಾಶ ದೊರೆತದ್ದು ನಮ್ಮ "ಸ್ವರ್ಣ" ಕುಟುಂಬಕ್ಕೆ ಶಾಶ್ವತ ಸ್ಮರಣೀಯ ಕ್ಷಣವಾಗಿದೆ. ಈ ಹಿಂದೆ ಕಾಶಿ ಮಠಾಧೀಶರ ಆದೇಶದಂತೆ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಬೆಳ್ಳಿ ಪಲ್ಲಕ್ಕಿ ಸ್ವರ್ಣ ಅಟ್ಟೆ ಪ್ರಭಾವಳಿ ಕಂಠೀಹಾರ ಇತ್ಯಾದಿಗಳನ್ನು ನಿರ್ಮಿಸುವ ಅವಕಾಶವೂ ದೊರೆತಿತ್ತು ಎಂದೂ ಅವರು ಸ್ಮರಿಸಿದ್ದಾರೆ.


ಈಗ ಪಟ್ಟಾಭಿಷೇಕದ ಎಲ್ಲಾ ವಿಗ್ರಹಗಳಿಗೆ ಕಾಲಿನ ನೂಪುರ, ಕಂಠೀಹಾರ ಕಿರೀಟ ಕರ್ಣ ಕುಂಡಲ ಸಹಿತ ಕಾಲಿನಿಂದ ತಲೆಯ ವರೆಗೆ ಎಲ್ಲಾ ಆಭರಣಗಳನ್ನು ತಯಾರಿಸಿ ತೊಡಿಸಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top