ಬದಿಯಡ್ಕ: ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿಟ್ಲದ ಜೇಸೀ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಸನ್ನಿಧಿ ಪಿ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರಕ್ಕೆ ಪಾತ್ರಳಾಗಿದ್ದಾಳೆ.
ಈಕೆ ಕಾಸರಗೋಡು ಕರಂದಕ್ಕಾಡಿನ ಯೋಗ ಫಾರ್ ಕಿಡ್ಸ್ ನ ಯೋಗ ಗುರು ತೇಜ ಕುಮಾರಿ ಇವರಿಂದ ಯೋಗಾಭ್ಯಾಸ ಮಾಡುತ್ತಿದ್ದಾಳೆ. ಇವಳು ಕೇಶವ ಶರ್ಮ ಪಳ್ಳತ್ತಡ್ಕ ಮತ್ತು ದಿವ್ಯಾ ಪಿ. ದಂಪತಿಗಳ ಪುತ್ರಿ. ಈಕೆಯ ತಾಯಿ ದಿವ್ಯಾ ಅವರೂ ಯೋಗ ಪಟು ಹಾಗೂ ಯೋಗ ಶಿಕ್ಷಕಿಯಾಗಿದ್ದಾರೆ.
ಜಿಲ್ಲಾ ಹಾಗೂ ರಾಜ್ಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಹಲವು ಸಲ ಭಾಗವಹಿಸಿದ್ದು, ಮೂರು ಬಾರಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಳು. ಹಲವಾರು ವೇದಿಕೆಗಳಲ್ಲಿ ಯೋಗಪ್ರದರ್ಶನ ನೀಡಿರುತ್ತಾಳೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


