ಉತ್ತರ ಕರ್ನಾಟಕದ ಜೀವನದಿ- ಕೃಷ್ಣೆಯ ಒಡಲು

Upayuktha
0


ರ್ನಾಟಕದಲ್ಲಿ ಹರಿಯುವ ಅತಿ ಉದ್ದದ ನದಿ, ಉತ್ತರ ಕರ್ನಾಟಕದ ಜೀವನದಿ ಎಂಬ ಹೆಗ್ಗಳಿಕೆ ಪಡೆದಿರುವುದು ನಮ್ಮ ಕೃಷ್ಣಾ ನದಿ. ಮಹಾರಾಷ್ಟ್ರದ ಮಹಾಬಲೇಶ್ವರ ಸಮೀಪವಿರುವ ಮಹಾದೇವ ಬೆಟ್ಟಗಳಲ್ಲಿ ಹುಟ್ಟಿ ಆಂಧ್ರಪ್ರದೇಶದ ಮಚಲಿಪಟ್ಟಣಂನಲ್ಲಿ ಬಂಗಾಳ ಕೊಲ್ಲಿ ಸೇರುವ ನದಿ.


ಉತ್ತರ ಕರ್ನಾಟಕದಲ್ಲಿ ಪ್ರಮುಖ ಪಾತ್ರ ವಹಿಸುವ ಈ ನದಿ ವಿಜಯಪುರ ಜಿಲ್ಲೆಯ ಮೂಲಕ ಕರ್ನಾಟಕವನ್ನು ಪ್ರವೇಶಿಸಿ ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಯ ಮೂಲಕ ಹರಿಯುತ್ತದೆ. ಈ ನದಿಗೆ ಪ್ರಮುಖವಾಗಿ ಎರಡು ಅಣೆಕಟ್ಟುಗಳನ್ನು ನಿರ್ಮಿಸಿದ್ದು ಆಲಿಮಟ್ಟಿ ಜಲಾಶಯ (ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ), ನಾರಾಯಣಪುರ ಜಲಾಶಯ (ಬಸವಸಾಗರ ಅಣೆಕಟ್ಟು) ಮೂಲಕ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿದೆ. ಆಲಿಮಟ್ಟಿ ಜಲಾಶಯ ಯುಕೆಪಿ ಯೋಜನೆ ಅಡಿಯಲ್ಲಿ 123.08 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಜೊತೆಗೆ ಸರಾಸರಿ 280  ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಪೂರಕವಾಗಿದೆ, ನಾರಾಯಣಪುರ ಜಲಾಶಯವು ನೀರಿನ ರಭಸವನ್ನು ತಡೆಯಲು ಯಾವುದೇ ನೈಸರ್ಗಿಕ ಗುಡ್ಡಗಳ ಬೆಂಬಲವಿಲ್ಲದೆ ಮಾನವ ನಿರ್ಮಿತ ಜಲಾಶಯವಾಗಿದ್ದು, ಸುಮಾರು 10. 6 ಕಿಲೋಮೀಟರ್ ಉದ್ದ 29.7 ಮೀಟರ್ ಎತ್ತರದ ತಡೆಗೋಡೆಯನ್ನು ಹೊಂದಿದೆ, ಇದು ಹೆಚ್ಚಿನ ನೀರಿನ ಸಾಮರ್ಥ್ಯವನ್ನು ಹೊಂದಿದ್ದು ಯಾದಗಿರಿ ಕಲಬುರಗಿ ರಾಯಚೂರು ಜಿಲ್ಲೆಗೆ 5000 ಹೇಕ್ಟರ್ ನೀರಾವರಿ ವ್ಯವಸ್ಥೆ ಕಲ್ಪಿಸಿದೆ.


ಕೃಷ್ಣಾ ನದಿ ಕೇವಲ ಒಂದು ಭೌಗೋಳಿಕ ನದಿ ಅಲ್ಲ, ಅದು ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ, ನಂಬಿಕೆ ಮತ್ತು ಜೀವನದ ಅಡಿಪಾಯವಾಗಿದೆ. ಅದರ ಹರಿವು ನಮ್ಮ ಮನಸ್ಸಿನ ಸೃಜನಶೀಲತೆಯ ನದಿಯಂತೆ ಎಂದಿಗೂ ನಿಲ್ಲದಿರಲಿ ಎಂಬ ಆಶಯ. ಜನರ ಜೀವನ, ಪ್ರಾಣ ಹಾಗೂ ತಾಯಿ ರೂಪದಲ್ಲಿ ಪೂಜಿಸುವ ದೇವರಾಗಿ ಉಳಿದಿದೆ. ಈ ನದಿಯ ಜೊತೆಗೆ ವಿಜಯಪುರದಲ್ಲಿ ಇದರ ನಾಲ್ಕು ಉಪನದಿಗಳು ಹರಿವುದರಿಂದ ಈ ಜಿಲ್ಲೆಯನ್ನು ಪಂಚ ನದಿಗಳ ಜಿಲ್ಲೆ ಎಂದೆ ಪ್ರಸಿದ್ಧಿ ಪಡೆದಿದೆ.


ಭೀಮಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರ ನದಿಗಳು ಕರ್ನಾಟಕದಲ್ಲಿ ಹರಿಯುವ ಇದರ ಪ್ರಮುಖ ಉಪನದಿಗಳಾಗಿವೆ.


ನಿನ್ನ ತೀರದ ಹಳ್ಳಿಯಲಿ ಕಾವ್ಯ ಹಾಡು,

ನಿನ್ನ ನೀರಿನಲಿ ಜೀವನ ನಡುಗು.

ಗಂಗೆಯೆಷ್ಟು ಪವಿತ್ರವೋ,

ಕೃಷ್ಣೆಯೂ ಅಷ್ಟೇ ತಾಯಿ ಮಮತೆಯವಳು.


ಮಹಾರಾಷ್ಟ್ರದಿಂದ ಕರ್ನಾಟಕದಲಿ,

ಆಂಧ್ರದ ಹಾದಿಯಲಿ ಹರಿಯುತ ಹೋಗಿ,

ಜನರ ಪ್ರೀತಿ, ಭಕ್ತಿ, ಬೆಳೆಗಳನ್ನು,

ಒಂದೆಡೆ ಸೇರಿಸುವ ನದಿ ನೀನಾದೆ.



ಕುಡಿಯುವ ನೀರಿನ ಮೂಲ 

ಬಿಸಿಲು ನಾಡು ಎಂದೇ ಪ್ರಸಿದ್ಧವಾಗಿರುವ ರಾಯಚೂರು ಜಿಲ್ಲೆ ಸೇರಿದಂತೆ  ಯಾದಗಿರಿ ಜಿಲ್ಲೆಗೆ ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಉಂಟಾದಾಗ ಕೃಷ್ಣಾ ನದಿಯ ನೀರನ್ನು ಕೊಳವೆಗಳ ಮೂಲಕ ಮತ್ತು ವಾಹನಗಳ ಮೂಲಕ ನೀರಿನ ಮೂಲವಾಗಿ ಬಳಸಲಾಗುತ್ತಿದೆ.


ದೋ ಅಬ್ ಪ್ರದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ 

ರಾಯಚೂರ ಜಿಲ್ಲೆಯ ಉತ್ತರ ಮತ್ತು ದಕ್ಷಿಣ ಗಡಿಭಾಗಗಳಲ್ಲಿ ಕೃಷ್ಣಾ ನದಿ ಹಾಗೂ ತುಂಗಭದ್ರ ನದಿಯು ಹರಿಯುತ್ತಿರುವರಿಂದ ದೋ ಅಬ್ಪ್ರದೇಶದಲ್ಲಿ ನಿರ್ಮಾಣವಾಗಿದೆ, ಇದರಿಂದ ರಾಯಚೂರು ಜಿಲ್ಲೆಯನ್ನು ಅತ್ಯಂತ ಫಲವತ್ತಾದ ಭೂಮಿ ನಿರ್ಮಾಣ ಮಾಡುವಲ್ಲಿ ಕೃಷ್ಣ ನದಿ ಪ್ರಮುಖ ಪಾತ್ರ ವಹಿಸಿದೆ.




- ಚೇತನ್ ಸಜ್ಜನ 

ಬೆಳ್ಳಿಹಾಳ್ (ರಾಯಚೂರು ಜಿಲ್ಲೆ)



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top