ಕನ್ನಡ ಗ್ರಾಮದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಲಾ ಪ್ರಸ್ತುತಿ

Upayuktha
0


ಕಾಸರಗೋಡು: ಕನ್ನಡ ಗ್ರಾಮದಲ್ಲಿ ನಡೆದ ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಶಿವರಾಮ ಕಾಸರಗೋಡು ಅವರ 60 ನೇ ಜನ್ಮವರ್ಷಾಚರಣೆ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ) ಕಾಸರಗೋಡು ವತಿಯಿಂದ 133 ನೇ ವೈವಿಧ್ಯಮಯ ನಿತ್ಯ ನೂತನ ಅತ್ಯಾಕರ್ಷಕ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. 


ಪ್ರಾರಂಭದಲ್ಲಿ ಸಂಸ್ಥೆಯ ಎಲ್ಲಾ ಕಲಾಮಾಣಿಕ್ಯಗಳು ಕರ್ನಾಟಕ ಮಾತೆಗೆ ಪುಷ್ಪಾರ್ಚನೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ತಾಯಿ ಭುವನೇಶ್ವರಿಗೆ ಕನ್ನಡ ಸಾಹಿತ್ಯಾರ್ಚನೆ ಡಾ. ವಾಣಿಶ್ರೀ ಕಾಸರಗೋಡು ಅವರಿಂದ ನಡೆಯಿತು. ಕಾರ್ಯಕ್ರಮದ ನಿರೂಪಣೆಯನ್ನು ಮುಂಬೈಯ ಖ್ಯಾತ ಸಾಹಿತಿ ಕಲಾವಿದ ಗೋಪಾಲ ತ್ರಾಸಿಯವರ ಧ್ವನಿಯಲ್ಲಿ ಸೊಗಸಾಗಿ ಮೂಡಿ ಬಂತು.


ಅಪಾರ ಜನರು ಸೇರಿದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಲಾವಿದರು ಸಾಹಿತಿ ರಾಧಾಕೃಷ್ಣ ಉಳಿಯತಡ್ಕ ಅವರ ನಿರ್ದೇಶನದಲ್ಲಿ ಕನ್ನಡದ ಗೀತೆಯನ್ನು ಮಾತ್ರ ಅಳವಡಿಸಿ ಕಲಾಪ್ರಸ್ತುತಿಯನ್ನು ನೀಡಿ ತಾಯಿ ಭುವನೇಶ್ವರಿ ದೇವಿಯ ಮೆಚ್ಚುಗೆಗೆ ಪಾತ್ರರಾದರು. ವಿಶೇಷ ಆಕರ್ಷಣೆಯಾಗಿ ಅಂಕೋಲದ ವಿನಂತಿ ಹರಿಕಾಂತ್ ಅವರ ಮೊಳೆ ಮೇಲೆ ನಿಂತು ರಿಂಗ್ ಡಾನ್ಸ್ ಜೊತೆಗೆ ದೀಪ, ದೀಕ್ಷಾ ಅವರ ಯೋಗ ನೃತ್ಯ, ಮುಕ್ತಿ ಮೋಕ್ಷ ಸಹೋದರಿಯರ ಜೋಡಿ ಯೋಗ ನೃತ್ಯ, ಮತ್ತು ಸಾಹಿತಿ ಗೋಪಾಲ ತ್ರಾಸಿಯವರ ಅವರ ನವರಸ ಭರಿತ ವಿನೋದ-ಹಾಸ್ಯ ಚಟಾಕಿ ಎಲ್ಲರ ಮನಸೂರೆಗೊಂಡಿತು. 


ಸಂಸ್ಥೆಯ ಕುಶಾಲನಗರ ವಿಭಾಗದ ಕಲಾಪ್ರತಿಭೆಗಳು ಭಾರತೀಯ ಸಂಗೀತ ನೃತ್ಯ ಕಲಾಶಾಲೆಯ ನಾಟ್ಯ ಗುರುಗಳಾದ ಕಿರಣ್ ಕೃಷ್ಣಮೂರ್ತಿ ಅವರ ಶಿಷ್ಯಂದಿರು ಹಲವು ವಿಧದ ನೃತ್ಯ ರೂಪಕ, ಕೊಡವ ನೃತ್ಯ, ಮಡಕೆ ಮೇಲೆ ನಿಂತು ಸಮೂಹ ದೀಪ ನೃತ್ಯ ಮಾಡಿ ಸಂಸ್ಥೆಯ ಕಾರ್ಯಕ್ರಮಕ್ಕೆ ರಂಗು ಕೊಟ್ಟರು. ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ. ವಾಣಿಶ್ರೀ ಅವರು ಕನ್ನಡ ಕವನ ವಾಚಿಸಿದರು. ಡಾ. ವಾಣಿಶ್ರೀ ಅವರಿಗೆ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಅನುಗ್ರಹ ಮಂತ್ರಾಕ್ಷತೆಯೊಂದಿಗೆ ಕೇರಳ - ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top