ಶಿರಹಟ್ಟಿ, ಹಾವೇರಿ ಶ್ರೀಗಳಿಗೆ "ಭಾವೈಕ್ಯ ಶ್ರೀ', ಐವರು ಗಣ್ಯರಿಗೆ "ಚಿಂತನಶ್ರೀ" ಗೌರವ

Chandrashekhara Kulamarva
0


ಹುಬ್ಬಳ್ಳಿ: ನಾಲ್ಕು ದಶಕದ ಕಾಲ ಸಾಹಿತ್ಯ- ಸಾಂಸ್ಕೃತಿಕ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ "ಚಿಂತನ ವೇದಿಕೆ" ತನ್ನ ನಲ್ವತ್ತರ ಸಂಭ್ರಮದ ಅಂಗವಾಗಿ ಶಿರಹಟ್ಟಿ ಫಕೀರೇಶ್ವರ ಮಠದ ಫಕ್ಕೀರಸಿದ್ದರಾಮ ಮಹಾಸ್ವಾಮಿಗಳು ಹಾಗೂ ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳನ್ನು "ಭಾವೈಕ್ಯ ಶ್ರೀ" ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದೆ.


ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿದ ದಕ್ಷಿಣ ಕನ್ನಡದ ಹಿರಿಯ ಧರ್ಮದರ್ಶಿ, ಮಾಜಿ ಕಸಾಪ ರಾಜ್ಯ ಅಧ್ಯಕ್ಷ, ಹೋಟೆಲ್‌ ಉದ್ಯಮಿ ಡಾ. ಹರಿಕೃಷ್ಣ ಪುನರೂರು, ಮೈಸೂರಿನ ಆಕಾಶವಾಣಿ ನಿವೃತ್ತ ಅಧಿಕಾರಿ ಎನ್. ವಿ.ರಮೇಶ, ಹುಬ್ಬಳ್ಳಿಯ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ರಮೇಶ ಮಹಾದೇವಪ್ಪ, ರಂಗಭೂಮಿ ಹಿರಿಯ ಕಲಾವಿದೆ ಡಾ. ರತ್ನಸೋಗಿ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ, ಹಿರಿಯ ಸಾಹಿತಿ ಕೃಷ್ಣಮೂರ್ತಿ ಕುಲಕರ್ಣಿ ಅವರಿಗೆ "ಚಿಂತನಶ್ರೀ" ಗೌರವ ಪ್ರಶಸ್ತಿಗೆ ಶುಕ್ರವಾರ ಜರುಗಿದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ನಿರ್ದೇಶಕ ಮಂಡಳಿಯ ಪ್ರೊ.ಡಿ.ಡಿ. ಮುತಾಲಿಕ ದೇಸಾಯಿ ಮತ್ತು ಚನ್ನಬಸಪ್ಪ ಧಾರವಾಡಶೆಟ್ರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ನವೆಂಬರ್ ಕೊನೆಯಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top