ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು: ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಾಂಪಿಯನ್ಸ್

Chandrashekhara Kulamarva
0


ಮೂಡುಬಿದಿರೆ: ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ  ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ರಾಜ್ಯಮಟ್ಟದ ವೇಟ್‌ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಸ್ಪರ್ಧೆಯಲ್ಲಿ  ಆಳ್ವಾಸ್  ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎರಡು ವಿಭಾಗದಲ್ಲಿ ಸಮಗ್ರ ಚಾಂಪಿಯನ್ಸ್ ಪಟ್ಟಗಳಿಸಿದರು.


ವೇಟ್ ಲಿಫ್ಟಿಂಗ್ ವಿಭಾಗದಲ್ಲಿ  ಮಧುಲಿಂಗ ಎಂ (60 ಕೆ.ಜಿ. ವಿಭಾಗ)- ಚಿನ್ನ,  ವಸಂತ್ ಕುಮಾರ್ ಸಿ.ಜಿ. (79 ಕೆ.ಜಿ. ವಿಭಾಗ)- ಚಿನ್ನ,  ಸಾಯಿ ಹಿತೇಶ್ (94 ಕೆ.ಜಿ. ವಿಭಾಗ)- ಚಿನ್ನ,  ಹರ್ಷ ಸಿ.ಆರ್. (110+ ಕೆ.ಜಿ. ವಿಭಾಗ)-ಚಿನ್ನ  ಹಾಗೂ ಹರ್ಷಿತಾ (69 ಕೆ.ಜಿ. ವಿಭಾಗ) ಕಂಚಿನ ಪದಕದೊಂದಿಗೆ ಒಟ್ಟು 4 ಚಿನ್ನ ಹಾಗೂ 1 ಕಂಚಿನ ಪದಕ ಗಳಿಸಿದರು.  


ವಿಟಿಯು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಆಳ್ವಾಸ್‌ನ ನೈದಿಲ್ ಪೂಜಾರಿ (70 ಕೆ.ಜಿ. ವಿಭಾಗ)– ಚಿನ್ನದ ಪದಕದೊಂದಿಗೆ ಮಿಸ್ಟರ್ ವಿಟಿಯು ‘ಮೋಸ್ಟ್ ಮಸ್ಕುö್ಯಲರ್ ಮ್ಯಾನ್’ ಪಟ್ಟ ಪಡೆದರು. ಸೋಹಮ್ ಕುಡಚಿ (85 ಕೆ.ಜಿ. ವಿಭಾಗ) – ಚಿನ್ನದ ಪದಕ ಪಡೆದರೆ, ಜಗದೀಶ್ ಗೌಡ (85 ಕೆಜಿ ವಿಭಾಗ)- ಬೆಳ್ಳಿಯ ಪದಕ, ವಸಂತ್ ಕುಮಾರ್ ಸಿ.ಜೆ. (80 ಕೆ.ಜಿ. ವಿಭಾಗ) – ಬೆಳ್ಳಿಯ ಪದಕ ಹಾಗೂ  ಶಶಾಂಕ್ (60 ಕೆ.ಜಿ. ವಿಭಾಗ) – ಕಂಚಿನ ಪದಕ ಪಡೆದುಕೊಂಡರು.


ಆಳ್ವಾಸ್ ತಂಡವು ಎರಡು ವಿಭಾಗದಲ್ಲಿ ಒಟ್ಟು 6 ಚಿನ್ನ, 2 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 10 ಪದಕಗಳನ್ನು ಗಳಿಸಿ ಅತ್ಯುನ್ನತ ಸಾಧನೆ ಮೆರೆದಿದೆ. ಈ ಸ್ಪರ್ಧೆಯಲ್ಲಿ ವಿಟಿಯುಗೆ  ಒಳಪಟ್ಟ  ಒಟ್ಟು 94 ಕಾಲೇಜುಗಳು ಭಾಗವಹಿಸಿದ್ದವು.  


ಆಳ್ವಾಸ್ ಇಂಜಿಯರಿಂಗ್ ಕಾಲೇಜಿನ ಜಗದೀಶ್ ಗೌಡ ವಿಟಿಯು ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ 85 ಕೆಜಿ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದರೆ,  ಬೆಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ  ಚಿನ್ನದ ಪದಕ ಹಾಗೂ ಸಿಎಫ್‌ಎಸ್ ರಾಷ್ಟç ಮಟ್ಟದ ಸ್ಪರ್ಧೆಯಲ್ಲಿ  ಕಂಚಿನ ಪದಕ ಪಡೆದು ಸಾಧನೆ ಮೆರೆದಿದ್ದಾರೆ.


ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top