ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳಲ್ಲೊಂದಾದ ರಾಷ್ಟ್ರೋತ್ಥಾನ ಸಾಹಿತ್ಯ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1 ರಿಂದ ಡಿಸೆಂಬರ್ 7ರವರೆಗೆ ನಡೆಯಲಿರುವ `ಕನ್ನಡ ಪುಸ್ತಕ ಹಬ್ಬ'ದ ನಿಮಿತ್ತ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗಳ ಪೋಸ್ಟರ್‌ಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಪ್ರಚಾರ ಪ್ರಮುಖರಾದ ರಾಜೇಶ್ ಪದ್ಮಾರ್ ಹಾಗೂ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಬಿಡುಗಡೆ ಮಾಡಿದರು.
ಸ್ಪರ್ಧೆಗಳು ಸಂಪೂರ್ಣ ಕನ್ನಡದಲ್ಲಿ ಇರುತ್ತವೆ. ಒಟ್ಟು 3 ವಿಭಾಗಗಳಲ್ಲಿ 10 ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಗಳ ವಿವರ ಈ ಕೆಳಗಿನಂತಿವೆ:
ವಿಭಾಗ – 1 (5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ): ದೇಶಭಕ್ತಿ/ನಾಡು-ನುಡಿಗೆ ಸಂಬಂಧಿಸಿದ ಗೀತಗಾಯನ (ವೈಯಕ್ತಿಕ ಮತ್ತು ಪ್ರತ್ಯೇಕ – 2 ಪ್ರತ್ಯೇಕ ಸ್ಪರ್ಧೆಗಳು) ಮತ್ತು ಚಿತ್ರ ಬರೆಯುವ ಸ್ಪರ್ಧೆ
ವಿಭಾಗ – 2 (9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ): ದೇಶಭಕ್ತಿ/ನಾಡು-ನುಡಿಗೆ ಸಂಬAಧಿಸಿದ ಗೀತಗಾಯನ (ವೈಯಕ್ತಿಕ ಮತ್ತು ಪ್ರತ್ಯೇಕ – 2 ಪ್ರತ್ಯೇಕ ಸ್ಪರ್ಧೆಗಳು), ಚರ್ಚಾ ಸ್ಪರ್ಧೆ, ವಿಡಿಯೋ-ಭಾಷಣ ಸ್ಪರ್ಧೆ (ಭಾಷಣವನ್ನು ವಿಡಿಯೋ ಮಾಡಿ 95911 55622 ನಂಬರ್‌ಗೆ ವಾಟ್ಸಾಪ್ ಮಾಡಬೇಕು. ವಿಷಯ: ನನ್ನ ಮೆಚ್ಚಿನ ಕನ್ನಡ ಸಾಹಿತಿ) ಮತ್ತು ಲೇಖನ ಸ್ಪರ್ಧೆ (ವಿಷಯ: ಭಾರತದ ನಿಜ-ಇತಿಹಾಸ: ಶೌರ್ಯದ್ದೇ? ಸೋಲಿನದ್ದೇ?).
ವಿಭಾಗ – 3 (ಪದವಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ): ಪುಸ್ತಕ ಪರಿಚಯ (ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ಆಯ್ದ 10 ಪುಸ್ತಕಗಳಲ್ಲಿ ಒಂದು ಪುಸ್ತಕವನ್ನು) ಮತ್ತು ಭಾಷಣ ಸ್ಪರ್ಧೆ (ವಿಷಯ: ಪರಿಸರ ಸಂರಕ್ಷಣೆ: ಭಾರತೀಯ ಚಿಂತನೆ ಮತ್ತು ವರ್ತಮಾನದ ಅನಿವಾರ್ಯತೆ).
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 95911 55622
(ಫೇಸ್‌ಬುಕ್ ಪೇಜ್ www.facebook.com/rashtrotthanasahitya ಗೆ ಭೇಟಿ ಮಾಡಿ)
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ