ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಆಯೋಜನೆ
ಬೆಂಗಳೂರು: ನಗರದ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಗುರು ಶ್ವೇತಾ ವೆಂಕಟೇಶ್ ಶಿಷ್ಯೆ ಅದಿತಿ ವಿ. ರಾವ್ ಅ. 10ರ ಸಂಜೆ ಕಥಕ್ ರಂಗಮಂಚ ಪ್ರವೇಶ ಮಾಡಲಿದ್ದಾರೆ. ಅಂದು ಸಂಜೆ 6ಕ್ಕೆ ಜಯನಗರ 8ನೇ ಬಡಾವಣೆಯ ಜೆಎಸ್‌ಎಸ್ ಸಭಾಂಗಣದಲ್ಲಿ ನೃತ್ಯ ಪ್ರಸ್ತುತಿ ನೆರವೇರಲಿದೆ.
ಈಗಾಗಲೇ ಭರತನಾಟ್ಯ ಎಂಎ ಪೂರ್ಣಗೊಳಿಸಿಕೊಂಡು, ರಂಗ ಪ್ರವೇಶ ಮಾಡಿ, ದೂರದರ್ಶನ ಬಿ ಗ್ರೇಡ್ ಕಲಾವಿದೆಯಾಗಿ, ರಾಜ್ಯ, ಹೊರ ರಾಜ್ಯ ಮತ್ತು ಸಾಗರದ ಆಚೆಗೂ ಭರತನಾಟ್ಯ ಮತ್ತು ಕಥಕ್ ಗಳನ್ನು ಸಮನ್ವಯ ಮಾಡಿಕೊಂಡು ಕಲಾ ಪ್ರದರ್ಶನ ಮಾಡಿರುವ ಅದಿತಿ ಇದೀಗ ಕಥಕ್ ಕಲಾವಿದೆಯೂ ಆಗಿದ್ದಾರೆ. ಅವರ ನೂರಾರು ಕನಸುಗಳನ್ನು ನನಸು ಮಾಡಲು ಕಥಕ್ ರಂಗಮಂಜ್ ಪ್ರವೇಶ ಒಂದು ಮಹಾದ್ವಾರವಾಗಲಿದೆ.
ಇವೆಲ್ಲವಕ್ಕೂ ಗುರು ಸುಪರ್ಣಾ ಮತ್ತು ಶ್ವೇತಾ ವೆಂಕಟೇಶ್ ಅವರ ಸಹಕಾರ ಪ್ರಮುಖವಾಗಿದೆ ಎಂದು ಕಲಾವಿದೆ ಅದಿತಿ ಅವರು ಸ್ಮರಿಸುತ್ತಾರೆ.
ಅದಿತಿ ರಂಗಮಂಚ್ ಪ್ರವೇಶಕ್ಕೆ ಮುಖ್ಯ ಅತಿಥಿಗಳಾಗಿ ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಪ್ರದೀಪ್ ಕುಮಾರ್, ದ ಡಾನ್ಸ್ ಇಂಡಿಯಾ ಮ್ಯಾಗಜಿನ್ ಪ್ರಧಾನ ಸಂಪಾದಕ ವಿಕ್ರಂ ಕುಮಾರ್, ನೃತ್ಯ ವಿದುಷಿ ಸುಮಾ ಕೃಷ್ಣಮೂರ್ತಿ, ಕಥಕ್ ಕಲಾವಿದೆ ಮತ್ತು ನಟಿ ಮಾನಸ ಜೋಶಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಲೆಕ್ಕಪರಿಶೋಧಕರಾದ ವಿಶ್ವಾಸ ರಾವ್, ಅಪರ್ಣಾ, ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್ ಇತರರು ಉಪಸ್ಥಿತರಿರಲಿದ್ದಾರೆ.
ಗಾಯನದಲ್ಲಿ ವಿದ್ವಾನ್ ಶಂಕರ ಶಾನಭಾಗ್, ಪದಾಂತದಲ್ಲಿ ಗುರು ಶ್ವೇತಾ, ತಬಲಾದಲ್ಲಿ ಕಾರ್ತಿಕ್ ಭಟ್, ಕೊಳಲು ವಾದನದಲ್ಲಿ ವಿದ್ವಾನ್ ಸಮೀರ ರಾವ್, ಸಿತಾರ್‌ದಲ್ಲಿ ವಿದುಷಿ ಶ್ರುತಿ ಕಾಮತ್ ಹಿಮ್ಮೇಳ ಸಹಕಾರ ನೀಡಲಿದ್ದಾರೆ.