ಉಜಿರೆ: 'ಧೀಮ್' ಕುಟುಂಬದಲ್ಲಿ ಪರಿಚಯದ ಸಂಭ್ರಮ

Upayuktha
0


ಉಜಿರೆ: ಬೇರೆಯವರ ಬಗೆಗೆ ಚಿಂತನೆ ನಡೆಸುವುದರ ಬದಲು, ನಮ್ಮದೇ ಜೀವನದ ಬಗೆಗೆ ಆತ್ಮಲೋಕನವನ್ನು ಮಾಡಿಕೊಳ್ಳುವುದು, ಬದುಕಿಗೆ ಬಹು ಮುಖ್ಯ ಎಂದು ಎಸ್‌ಡಿಎಂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರನ್ ವರ್ಮಾ ಅಭಿಪ್ರಾಯ ಪಟ್ಟರು.


ಉಜಿರೆಯ ಎಸ್‌ಡಿಎಂ ಕಾಲೇಜಿನ, ವಿದ್ಯಾರ್ಥಿ ನಿಲಯಗಳಾದ "ಧೀಮಂತ್ ಹಾಗೂ ಧೀಮಹಿ"ಯ ಸಹಭಾಗಿತ್ವದಲ್ಲಿ, ಅಕ್ಟೋಬರ್ 11 ರಂದು "ಪರಿಚಯ 2025" ಕಾರ್ಯಕ್ರಮವನ್ನು ಪ್ರಕೃತಿ ಚಿಕಿತ್ಸಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದಲ್ಲಿ ಮಾತನಾಡಿ, ಸ್ನೇಹಿತರು ಮಾಡುವ ಸಣ್ಣ ಸಣ್ಣ ತಪ್ಪುಗಳನ್ನು ಬದುಗಿಟ್ಟು, ಕಾಲೇಜಿನ ಜೀವನದಲ್ಲಿ ನಡೆಯುವ ಚಟುವಟಿಕೆಗಳಲ್ಲಿ  ಭಾಗಿಯಾಗುವುದರ ಜೊತೆ ಜೊತೆಗೆ ಹಾಸ್ಟೆಲ್ ನಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು, ಪ್ರತಿಯೊಂದು ವ್ಯಕ್ತಿಯ ಬದುಕಿನಲ್ಲೂ ಸಹ ನಾಯಕತ್ವದ ಗುಣಗಳು ಬೆಳೆಯುತ್ತವೆ ಮತ್ತು ವಿದ್ಯಾರ್ಥಿಗಳು ತಾವು ಶಿಕ್ಷಣ ಪಡೆಯುವ ಸಂಸ್ಥೆಯ ಬಗೆಗೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳ ಬಗೆಗೆ ಸಹ ತಿಳಿದುಕೊಳ್ಳುವುದು ಅಗತ್ಯ ಎಂದು ಕಿವಿಮಾತು ಹೇಳಿದರು.


ಕಾರ್ಯಕ್ರಮದಲ್ಲಿ ಎಸ್ ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ ಮಾತನಾಡಿ, ಜೀವನದಲ್ಲಿ ನಾವು ಸದಾ ಧನಾತ್ಮಕವಾಗಿ ಯೋಚನೆ ಮಾಡಬೇಕೇ ಹೊರೆತು, ಅದನ್ನು ಋಣಾತ್ಮಕವಾಗಿ ಬದಲಾಯಿಸಬಾರದೆಂದು ತಿಳಿಸಿದರು. ವಿದ್ಯಾರ್ಥಿಗಳು ಜೀವನದಲ್ಲಿ ಸದಾ ಸಣ್ಣ ಸಣ್ಣ ಗುರಿಗಳನ್ನು ಹೊಂದಬೇಕು ಮತ್ತು ಅದನ್ನು ನನನಾಗಿಸುವ ಬಗೆಗೆ ಹೆಚ್ಚು ಗಮನಿಸವಹಿಸಿದರೆ, ಜೀವನ ಸಂತೋಷದ ಹಾದಿಯನ್ನು ಕಂಡುಕೊಳ್ಳುತ್ತದೆ ಎಂದರು.


ಕಾರ್ಯಕ್ರಮದಲ್ಲಿ, ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಮುಖ್ಯ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಯುವರಾಜ್ ಪೂವಣಿ, ಹಾಗೂ ಮತ್ತಿರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಲ್ಲವಿ ಪಟಾಲ್ ನಿರೂಪಿಸಿದರು, ತೇಜಸ್ವಿನಿ ದೇವಾಡಿಗ ಸ್ವಾಗತಿಸಿದರು ಮತ್ತು ಲತಿಕಾ ವಂದಿಸಿದರು.


ವರದಿ: ಪೂರ್ಣಿಮಾ ಎಚ್ ಎಮ್

3rd sem MCJ

SDM PG Center, Ujire 



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top