ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಇಲ್ಲಿನ ಅಭ್ಯುದಯ ಸಮಾಜ ಕಾರ್ಯ ವೇದಿಕೆ ಆಯೋಜನೆಯಲ್ಲಿಅಭ್ಯುದಯ – 2025 (Addressing the hidden battle) ಎಂಬ ಥೀಮ್ ನೊಂದಿಗೆ ದಿನಾಂಕ 11.11.2025 ಮಂಗಳವಾರದಂದು ಅಂತರ್-ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮಂಗಳೂರು ವಿ.ವಿ ವಲಯದ ಕಾಲೇಜು ವಿದ್ಯಾರ್ಥಿಗಳಿಗಾಗಿ ಕ್ವಿಜ್, ಪೋಸ್ಟರ್ ಮೇಕಿಂಗ್, ಕೊಲಾಜ್ ಮೇಕಿಂಗ್, ಪಿಪಿಟಿ ಪ್ರೆಸೆಂಟೇಶನ್,ನೃತ್ಯ ಸ್ಪರ್ಧೆ, ಬೀದಿ ನಾಟಕ, ರೀಲ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಮಗ್ರ ಬಹುಮಾನ ಪ್ರಥಮ ರೂ. 15,015-00, ದ್ವಿತೀಯ ಬಹುಮಾನ ರೂ.10,010-00, ಹಾಗೂ ತೃತೀಯ ಬಹುಮಾನ ರೂ 5,005-00 ಮೊತ್ತ ನಿಗದಿಯಾಗಿದ್ದು, ಪ್ರತಿ ಸ್ಪರ್ಧೆಗಳಿಗೂ ವೈಯುಕ್ತಿಕ ಹಾಗೂ ಶಾಶ್ವತ ಫಲಕ ನೀಡಲಾಗುವುದು.
ಮೊದಲು ನೋಂದಾಯಿಸಿದ ಹತ್ತು ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಆಯೋಜಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸ್ಪರ್ಧಾ ಆಯೋಜಕರ ಮೊ. ಸಂ. 9686327664 ಸಂಪರ್ಕಿಸಲು ಕೋರಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


