ಮಾನವೀಯತೆ ಸಮಾಜ ನಿರ್ಮಾಣ ಮಾಡುವುದೇ ರೆಡ್ ಕ್ರಾಸ್ ಧ್ಯೇಯ : ನಿತ್ಯಶ್ರೀ ಬಿ. ವಿ.

Upayuktha
0



ಮಂಗಳೂರು: ಮಾನವೀಯತೆಯ ಸಮಾಜ ನಿರ್ಮಾಣ ಮಾಡುವುದೇ ರೆಡ್ ಕ್ರಾಸ್ ನ ಪ್ರಮುಖ ಧ್ಯೇಯ. ರೆಡ್ ಕ್ರಾಸ್ ನ ತತ್ವಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಜನತೆ ಪಾತ್ರ ಮುಖ್ಯವಾದುದು ಎಂದು ಯೆನೆಪೋಯ (ಡೀಮ್ಡ್ ಟು ಬಿ) ವಿಶ್ವವಿದ್ಯಾಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ನಿತ್ಯಶ್ರೀ ಬಿ. ವಿ. ಅಭಿಪ್ರಾಯಪಟ್ಟರು.   


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ನಡೆದ ಯುವ ರೆಡ್ ಕ್ರಾಸ್  ಘಟಕದ ಅಭಿಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ರೆಡ್ ಕ್ರಾಸ್  ಸೇವೆ ಮಾಡಲು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶವನ್ನು ಒದಗಿಸಿಕೊಡುತ್ತದೆ. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ನಗರದ ಪದವಿ ಕಾಲೇಜುಗಳ ಯುವ ರೆಡ್ ಕ್ರಾಸ್  ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು. 


ಕಾರ್ಯಕ್ರಮ ಆಯೋಜನೆ ಮಾಡಿದ ಯುವ ರೆಡ್ ಕ್ರಾಸ್  ಸಂಯೋಜಕಿ ಡಾ. ಭಾರತಿ ಪಿಲಾರ್, ರೆಡ್ ಕ್ರಾಸ್  ಸ್ವಯಂ ಸೇವಕನಾದವನು ಜೀವನ ಪರ್ಯಂತ ಸಮಾಜಮುಖಿ ಮನಸ್ಥಿತಿ ಹೊಂದಿರುತ್ತಾನೆ. ವಿದ್ಯಾರ್ಥಿಗಳಲ್ಲಿ ತಾಳ್ಮೆ, ಪರೋಪಕಾರ, ಸಹಬಾಳ್ವೆ, ಕರುಣೆ, ಮುಂತಾದ ಮೌಲ್ಯಗಳನ್ನು ರೂಢಿಸಿಕೊಳ್ಳುವುದರ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಹಾಗೂ ಸಮಾಜ ಅರಿಯುವ ಅವಕಾಶ ಮಾಡಿಕೊಡುತ್ತದೆ ಎಂದರು. ವಿದ್ಯಾರ್ಥಿ ಕಾರ್ಯದರ್ಶಿ ಫರ್ನಾಜ್ ಬಾನು ವಂದಿಸಿ, ಮೇಘ ವಿ. ಶೇಟ್ ಕಾರ್ಯಕ್ರಮ ನಿರೂಪಿಸಿದರು.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top