ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಕಾತ್ಯಾಯಿನಿ ಮಂಟಪ, ಕಡಿಯಾಳಿಯಲ್ಲಿ ದಿನಾಂಕ ಶುಕ್ರವಾರ (ಅ.10) ನಗರದ ಅಭ್ಯಾಸ ವರ್ಗವು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ|ಪ್ರವೀಣ್ ಆಚಾರ್ಯ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಸಂಚಾಲಕರಾದ ಸುವಿತ್ ಶೆಟ್ಟಿ, ಪ್ರಾಂತ ವಿದ್ಯಾರ್ಥಿನಿ ಸಹ ಪ್ರಮುಖ್ ಸಂಹಿತಾ ಕೆ ಮತ್ತು ಉಡುಪಿ ಜಿಲ್ಲಾ ಸಂಚಾಲಕರಾದ ಶ್ರೇಯಸ್ ಅಂಚನ್ ಉಪಸ್ಥಿತರಿದ್ದರು.
ಮೊದಲ ಅವಧಿ ಸೈದ್ಧಾಂತಿಕ ಭೂಮಿಕೆ ಆಗಿದ್ದು, ಈ ಅವಧಿಯನ್ನು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಸಮಿತಿ ಸದಸ್ಯರಾದ ಶ್ರೀವತ್ಸ ಡಿ ಗಾಂವ್ಸಕರ್ ಅವರು ನಡೆಸಿಕೊಟ್ಟರು. ಎರಡನೆಯ ಅವಧಿಯು ಕ್ಯಾಂಪಸ್ ಕಾರ್ಯವಾಗಿದ್ದು, ಈ ಅವಧಿಯನ್ನು ಹಿರಿಯ ಕಾರ್ಯಕರ್ತರಾದ ಶೀತಲ್ ಕುಮಾರ್ ಕಾರ್ಕಳ ಇವರು ನೇರವೇರಿಸಿದರು. ಕಾರ್ಯಕ್ರಮದ ಕೊನೆಯ ಅವಧಿಯು ಪ್ರಶಿಕ್ಷಣವಾಗಿದ್ದು, ವಿಭಾಗ ಎಸ್.ಎಫ್.ಎಸ್ ಸಂಯೋಜಕರಾದ ಅನಂತಕೃಷ್ಣ ಇವರು ನಡೆಸಿದರು.
ಸಮಾರೋಪ ಸಮಾರಂಭ, 2025-26ನೇ ಸಾಲಿನ ನೂತನ ಕಾರ್ಯಕಾರಿಣಿ ಜವಾಬ್ದಾರಿಯನ್ನು ಜಿಲ್ಲಾ ಪ್ರಮುಖರಾದ ರಾಜಶಂಕರ್ ಇವರು ನಡೆಸಿಕೊಟ್ಟರು. ನಗರ ಅಧ್ಯಕ್ಷರಾಗಿ ಡಾ ಸದಾನಂದ್ ಭಟ್, ನಗರ ಉಪಾಧ್ಯಕ್ಷರಾಗಿ ಪ್ರವೀಣ್ ಆಚಾರ್ಯ ಮತ್ತು ನಗರ ಕಾರ್ಯದರ್ಶಿಯಾಗಿ ಮನೀಶ್ ಕುಂದರ್ ಸೇರಿದಂತೆ ನಗರದ ಕಾರ್ಯಕಾರಿಣಿಯ ಅನೇಕ ಜವಾಬ್ದಾರಿಗಳು ಈ ಸಂದರ್ಭದಲ್ಲಿ ಘೋಷಣೆಗೊಂಡವು. ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಶೇಖರ್ ಮರಾಠಿ ಮತ್ತು ತಾಲೂಕು ಸಂಚಾಲಕರಾದ ಮಾಣಿಕ್ಯ ಭಟ್ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಅನುಷಾ ಇವರು ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ