ತೀರ್ಥ ಸ್ವರೂಪಿಣಿ- ಕಾವೇರಿ

Upayuktha
0


ಶ್ಚಿಮ ಘಟ್ಟ ಎಂದ ಕೂಡಲೇ ನೆನಪಾಗುವುದು ಅಲ್ಲಿನ ನಿಸರ್ಗ ಸೌಂದರ್ಯ ಹಚ್ಚ ಹಸಿರಿನಿಂದ ಕೂಡಿದ ಕಾಡುಗಳು, ವೈವಿಧ್ಯಮಯ ಜೀವ ಸಂಕುಲಗಳು, ದಟ್ಟವಾದ ಕಾನನಗಳು, ಆಕರ್ಷಣೀಯ ಗಿರಿಧಾಮಗಳು, ಮೈದುಂಬಿ ಹರಿಯುವ ನದಿಗಳು, ಅಷ್ಟೇ ಅಲ್ಲದೆ ಪ್ರಾಚೀನತೆ ಹೊಂದಿರುವ ದೇವಾಲಯಗಳು. ಈ ಒಂದು ಪ್ರಕೃತಿ ಸಿರಿಯು ಒಂದೆಡೆ ಸೇರಿದ ಪವಿತ್ರ ಭೂಮಿ ಇದಾಗಿದೆ.


ನಮ್ಮ ಕರ್ನಾಟಕ ಜನತೆಯ ಹೆಮ್ಮೆದಾಯಕ ಸ್ಥಳವೆಂದೆ ಹೆಸರುವಾಸಿಯಾಗಿರುವ ಬ್ರಹ್ಮಗಿರಿ ಬೆಟ್ಟವು ಕೊಡಗು ಜಿಲ್ಲೆಯಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಇದು ನೈಸರ್ಗಿಕ, ಧಾರ್ಮಿಕ, ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿರುವ ಪ್ರಕೃತಿ ಭೂಮಿಯಾಗಿದ್ದು ನೋಡುಗರ ಕಣ್ಣಿಗೆ ಆಕರ್ಷಣೀಯ ಸ್ಥಳವಾಗಿದೆ. 


'ದಕ್ಷಿಣ ಭಾರತದ ಜೀವನದಿ' ಎಂದೆ ಜನಪ್ರಿಯವಾಗಿರುವ ಕಾವೇರಿ ನದಿಯ ಉಗಮ ಸ್ಥಾನವಿದ್ದಾಗಿದೆ. ವರ್ಷಪೂರ್ತಿ ತುಂಬಿ ಹರಿಯುವ ಈ ನದಿಯು ಹಲವಾರು ಜನರ ಬದುಕಿನ ಆಧಾರ ಸ್ತಂಭ ಎಂದು ಹೇಳಿದರೆ ತಪ್ಪಾಗದು. ಪ್ರತಿವರ್ಷದ ತುಲಾ ಸಂಕ್ರಮಣದಂದು ಈ ಪವಿತ್ರ ಕ್ಷೇತ್ರದಲ್ಲಿ 

"ತೀರ್ಥೋದ್ಭವ" ಎಂಬ ವಿಶೇಷ ಘಟನೆ ನಡೆಯುತ್ತದೆ. ಇದರ ವೈಶಿಷ್ಟ್ಯವೇನೆಂದರೆ ಆ ದಿನ ಬ್ರಹ್ಮಗಿರಿ ಬೆಟ್ಟದ ತಲಕಾವೇರಿ ಕುಂಡದಲ್ಲಿ ಪವಿತ್ರ ನೀರು ಮೇಲೆದ್ದು ಬರುವುದರಿಂದ ಸಾವಿರಾರು ಭಕ್ತರು ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ತಲಕಾವೇರಿಗೆ ಭೇಟಿ ನೀಡುತ್ತಾರೆ. ಅದಷ್ಟೇ ಅಲ್ಲದೆ ಈ ಪವಿತ್ರ ಜಲವನ್ನು ಸೇವಿಸುವುದರಿಂದ ಪಾಪಗಳು ಮುಕ್ತಿಯಾಗುತ್ತದೆ ಮತ್ತು ಭಕ್ತರು ಈ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. 


ಅದೇನೆ ಇರಲಿ ತಲಕಾವೇರಿ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು ಇದು ಜಾನಪದ, ಧರ್ಮ ಮತ್ತು ಪ್ರಕೃತಿಯ ಸಮ್ಮಿಲನವಾಗಿದೆ. ನಾವು ಈ ನದಿಯ ಶುದ್ಧತೆ ಮತ್ತು ಅದರ ಪರಿಸರವನ್ನು ಸುರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ತಲಕಾವೇರಿ ಕೇವಲ ನದಿಯ ಮೂಲವಲ್ಲ. ಅದು ನಮ್ಮ ಜೀವನದ ಮೂಲವೂ ಆಗಿದೆ. 


- ಕೌಶಲ್ಯ ಅಂಬೆಕಲ್ಲು

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top