ಕೊಪ್ಪದಿಂದ ಚಿಕ್ಕಮಗಳೂರಿಗೆ ಒಂದು ಸಲ ಕಾರಲ್ಲಿ ಹೋಗಿ ಬಂದರೆ, ಕಾರಿನ ಟೈರಿಗೆ ಸಿಕ್ಕುವ ಗುಂಡಿ ಲೆಕ್ಕ ಮೊಬೈಲ್‌ನ ಕೊನೇ ಐದು ಡಿಜಿಟ್‌ಗೆ ಸಮಾ ಆಗುತ್ತೆ!!
ಒಂದ್ಸಲ ಹೋಗಿ ಬಂದರೆ, ನಾಲ್ಕು ದಿನ ಬೆಡ್ ರೆಸ್ಟ್ ಬೇಕು.
ವಾರದಲ್ಲಿ ಎರಡು ಸಲ ಚಿಕ್ಕಮಗಳೂರಿಗೆ ಹೋಗಿ ಬಂದರೆ ಗಾಡಿಯನ್ನು ಸರ್ವಿಸ್‌ಗೆ ಬಿಡಬೇಕು.
ಪ್ರಯಾಣ ಮಾಡಿದವರ ಜೀವಂತ ಬಾಡಿಯನ್ನು ಕೊಪ್ಪ ಪ್ರಶಮನಿ ಆಸ್ಪತ್ರೆಯಲ್ಲಿ ಸರ್ವಿಸ್ ಮಾಡಿಸ್ಬೇಕು.
*****
ಹಂಸಲೇಖರವರ ಹಾಡೊಂದನ್ನು ಅಣಕು ಗೀತೆಯಾಗಿ ರಚಿಸುವುದಾದರೆ:
ರೋಡಿನ್ ಕತೆ ಇಷ್ಟೇ ಕಣ್ಣಮ್ಮೋ
ಇಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..
ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್
(ಗಾಡಿ ಗುಂಡಿಗೆ ಇಳಿದು, ಮೇಲೆ ಹತ್ತುವಾಗಿನ ಕೋರಸ್!! ಇದು ಒರಿಜಿನಲ್ ಕೋರಸ್. ಕಾರು ಓಡಿಸಲು ಅನುಕೂಲವಾಗಲು ಕೋರಸ್‌ನ್ನು ಹೀಗೆ ಬದಲಿಸಿಕೊಳ್ಳಬಹುದು:
ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡಕ್)
ಮಾರೂ ಮೀಟ್ರೀಗೀಗ್ಲು ಎರ್ಡೆರ್ಡೆಂತೆ ಗುಂಡಿ, ಮುಂದೆ ಹೋಗಿ ಹಿಂದೆ ಬರೋ
ರೋಡಿನ್ ಕತೆ ಇಷ್ಟೇ ಕಣ್ಣಮ್ಮೋ
ಇಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ
ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡ್ ದಡಕ್ ದಡಕ್
(ಕೋರಸ್!!)
(ಚಿಕ್ಕಮಗಳೂರಿಗೆ ಹೋಗುವಾಗ/ಬರುವಾಗ ಇದನ್ನು ಗಟ್ಟಿಯಾಗಿ ಹೇಳ್ಕೋತಾ ಹೋಗಬಹುದು!!)
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

