ಗುಂಪೆ ವಲಯ- ಶಿಷ್ಯ ಹಿತಂ ಸ್ವರ್ಣ ಸವಾರಿ ಸಂಪನ್ನ

Upayuktha
0


ಧರ್ಮತ್ತಡ್ಕ: ಶಿಷ್ಯರ ಹಿತಕ್ಕಾಗಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಹೊಸದಾಗಿ ಕರುಣಿಸಿದ ಸುವರ್ಣ ಸವಾರಿಯ ಗುಂಪೆ ವಲಯದ ಮಾಹಿತಿ ಸಮರ್ಪಣೆ ಹಾಗೂ ಸ್ವರ್ಣ ಪಾದುಕಾ ಪೂಜೆಗಳು ಇತ್ತೀಚೆಗೆ ಶ್ರದ್ಧಾಭಕ್ತಿ ಗೌರವಪೂರ್ವಕ ಸಂಭ್ರಮೋಲ್ಲಾಸಗಳಿಂದ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡವು.


ಮೊದಲ ದಿನ ಸಾಯಂಕಾಲ 5 ಗಂಟೆಯ ಹೊತ್ತಿಗೆ ಪೆರಡಾಲ ವಲಯದಿಂದ ಆಗಮಿಸಿದ ದಿವ್ಯ ಸ್ವರ್ಣ ಪಾದುಕೆಗಳನ್ನು ಹೊತ್ತ ಭವ್ಯ ಬೆಳ್ಳಿ ಪಲ್ಲಕ್ಕಿಯನ್ನು ಗುಂಪೆಯ ಉಮೇಶ ಜಿಎನ್ ಅವರ ವಸತಿ ಮನೆಯಲ್ಲಿ ಅದ್ದೂರಿಯಿಂದ ಸ್ವಾಗತಿಸಲಾಯಿತು.


ವಿಶೇಷವಾಗಿ ಮಕ್ಕಳು ಮತ್ತು ಮಾತೆಯರು ಮಾಡಿದ ಸ್ವಚ್ಛತೆ, ತಳಿರು ತೋರಣ ಅಲಂಕಾರಗಳು, ರಂಗೋಲಿ, ತುಳಸೀ ಮಾಲೆ ಹಾಗೂ ಪೂರ್ಣಕುಂಭ ಮತ್ತಿತರ ವ್ಯವಸ್ಥೆಗಳು ಅತಿ ಸುಂದರವಾಗಿ ಗೋಚರಿಸಿದವು. ಜೊತೆಗೆ ವೈದಿಕ ಬಂಧುಗಳಿಂದ ವೇದ ಘೋಷ, ಶಂಖ-ಜಾಗಟೆ-ಜಯಗಂಟೆ-ಚೆಂಡೆ-ತಾಳಗಳ ಸುನಾದಗಳು, ಸೇರಿದ್ದ ಶಿಷ್ಯ ಸ್ತೋಮದ ಜಯಘೋಷಗಳು ಸ್ವಾಗತಕ್ಕೆ ಅದ್ದೂರಿಯ ಮೆರುಗು ನೀಡಿ ಬೆರಗು ಮೂಡಿಸಿದ್ದವು. ಮುಳ್ಳೇರಿಯ ಮಂಡಲದ, ಮತ್ತು ಇತರ ವಲಯಗಳ ಪದಾಧಿಕಾರಿಗಳು ಹಾಗೂ ಘಟಕಗಳ ಗುರಿಕ್ಕಾರರುಗಳು ಹಾಜರಿದ್ದರು.


ಪೂಜ್ಯರಾದ ಆಚಾರ-ವಿಚಾರ ಭಟ್ಟರ ನೇತೃತ್ವದಲ್ಲಿ ಧೂಳೀಪೂಜೆ, ಮಹಾಮಂಡಲ ಗುರುಕುಲ ಪ್ರಕಲ್ಪ ಸಂಯೋಜಕರಿಂದ ಪ್ರಾಸ್ತಾವಿಕ ಹಾಗೂ ಏಳು ಘಟಕಗಳ ಗುರಿಕ್ಕಾರರುಗಳಿಂದ ಶಿಷ್ಯ ಮಾಹಿತಿ ಪುಸ್ತಕಗಳ ಸಮರ್ಪಣೆಗಳು ನಡೆದುವು.


ಸಾಯಂ 7. 30 ರಿಂದ ರಾತ್ರಿ 9.00 ರವರೇಗೆ ನೀರಾಮೂಲೆ ವೆಂಕಟರಾಜ ಮತ್ತು ನೀರಮೂಲೆ ವೆಂಕಟರಮಣ  ಅವರ ಮನೆಗಳಿಗೆ ಮೊದಲೇ ನಿಗದಿಯಾದಂತೆ ಭೇಟಿ ನೀಡಿ ಪೂಜೆಗಳು ಸಂಪನ್ನಗೊಂಡು ವಸತಿ ಮನೆಗೆ ಮರಳಲಾಯಿತು.


ಮರುದಿನ ಮನೆ-ಮನೆ ಸವಾರಿ ಬೆಳಿಗ್ಗೆ 7:30 ಕ್ಕೆ ಆರಂಭಗೊಂಡು 10:45ರವರೆಗೆ‌ ಘಟಕದ ಗುರಿಕಾರರಾದ ನೆರೆಯ ಹೆಗಡೆ ಲಕ್ಷ್ಮೀನಾರಾಯಣ ಭಟ್, ನೆರಿಯ ಶಿವಪ್ರಸಾದ ಭಟ್, ಚಂದ್ರಶೇಖರ ಭಟ್, ಗುಂಪೆ ಮಹೇಶ ಜಿ ಎನ್ ಮನೆಗಳಲ್ಲಿ ಪೂಜೆಗಳು ನಡೆದುವು. ನಂತರ ವಸತಿ ಮನೆಯಲ್ಲಿ ಭಿಕ್ಷಾ ಸೇವೆ ಹಾಗೂ ಸ್ವರ್ಣ ಪಾದುಕಾ ಪೂಜೆಗಳು ಸಂಪನ್ನಗೊಂಡವು. 


ಏಕಾದಶಿಯ ಈ ವಿಶೇಷ ದಿನದಂದು ನಡೆದ ಈ ಸ್ವರ್ಣ ಪಾದುಕಾ ಭಿಕ್ಷಾ ಸೇವೆಯ ಭಾಗವಾಗಿ ಅಷ್ಟಾವಧಾನ ಹಾಗೂ ಆಂದೋಲನ ಸೇವೆಗಳು ಜರುಗಿದವು. ಈ ಸಂದರ್ಭದಲ್ಲಿ ಮಾತೆಯರಿಂದ ಕುಂಕುಮಾರ್ಚನೆ ಯು ಜರಗಿತು. ಗುಂಪೆಯ ಶಂಕರನಾರಾಯಣ ಭಜನಾ ಸಂಘದವರಿಂದ ಭಜನಾ ಸೇವೆಯು ಗುರುಪಾದಕ ಸ್ತೋತ್ರ ಪಠಣವು ಜರಗಿತು.


ಮಧ್ಯಾಹ್ನ ಭೋಜನದ ನಂತರ 2:45ಕ್ಕೆ ಮನೆ ಮನೆ ಸವಾರಿಯ ಮುಂದಿನ ಭಾಗವಾಗಿ ಕೃಷ್ಣಪ್ರಕಾಶ್ ಗುಂಪೆ, ಪ್ರಕಾಶ ಜಿಎನ್ ಗುಂಪೆ, ಸುಬ್ರಹ್ಮಣ್ಯ ಭಟ್ ಗುಂಪೆ  ಅವರ ಮನೆಗಳಿಗೆ ಭೇಟಿ ನೀಡಿ ಮುಂದಿನ ಕುಂಬಳೆ ವಲಯಕ್ಕೆ ಬೀಳ್ಕೊಡಲಾಯಿತು.


ಮಂಡಲ ಪದಾಧಿಕಾರಿಗಳು ಹಾಗೂ ವಲಯದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪ್ರಮುಖ ಪದಾಧಿಕಾರಿಗಳೂ ಸಂಚಾರದ ಜತೆಗಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top