ಬದುಕು ಅಂದರೆ ಕೇವಲ ಉಸಿರಾಡುವುದಲ್ಲ-ಅದು ಮನದ ಪಯಣ, ಭಾವಗಳ ಯಾತ್ರೆ. ಪ್ರತಿಯೊಬ್ಬರ ಜೀವನವೂ ವಿಭಿನ್ನವಾದ ಹಾದಿಯಲ್ಲಿ ಸಾಗುತ್ತದೆ. ಮನುಷ್ಯ ಜೀವನವು ಸರಳವಾದರೂ ಅದರಲ್ಲಿ ಅನೇಕ ಸಂತೋಷ ಮತ್ತು ಕಷ್ಟಗಳ ಸಂಯೋಗವಿದೆ. ಬದುಕು ಎಂಬುದು ಮರೆಯಲಾಗದ ಒಂದು ಅನುಭವಯಾತ್ರೆ. ದಯೆ, ಪ್ರೀತಿ, ಸತ್ಯ ಮತ್ತು ಧರ್ಮ ಇವುಗಳು ಜೀವನವನ್ನು ಅರ್ಥಪೂರ್ಣವಾಗಿಸುವ ಪ್ರಮುಖ ಮೌಲ್ಯಗಳು.
ಸತ್ಯ –ಜೀವನದ ದಾರಿದೀಪ.
ಧರ್ಮ –ಮಾನವೀಯತೆಯ ಆಧಾರ.
ಕರುಣೆ –ಇತರರ ನೋವನ್ನು ಅರ್ಥಮಾಡಿಕೊಳ್ಳುವ ಹೃದಯ.
ಪ್ರೀತಿ –ಬಾಂಧವ್ಯದ ಬಲ.
ಬದುಕಿನಲ್ಲಿ ಎದುರಾಗುವ ಸವಾಲುಗಳು, ಅಡೆತಡೆಗಳು ನಮ್ಮನ್ನು ಪರೀಕ್ಷಿಸುತ್ತವೆ. ಆದರೆ ಮನೋಬಲ ಕಳೆದುಕೊಳ್ಳದೆ ಮುಂದೆ ಸಾಗುವುದು ನಿಜವಾದ ಮಾನವನ ಲಕ್ಷಣ.
ನಾವು ಹುಟ್ಟಿದ ಕ್ಷಣದಿಂದಲೇ ಜೀವನದ ಪಾಠಗಳು ಆರಂಭವಾಗುತ್ತವೆ. ಒಂದು ಪುಸ್ತಕದಂತೆ ನಮ್ಮ ಬದುಕು ಹಂತ ಹಂತವಾಗಿ ಬರೆಯಲ್ಪಡುತ್ತದೆ- ಬಾಲ್ಯದ ಆಟಗಳು, ಕಲಿಕೆ, ತಾಯಿ-ತಂದೆಯ ಪ್ರೀತಿ, ಸಹೋದರ-ಸಹೋದರಿಯ ಬಾಂಧವ್ಯ, ಸಹಪಾಠಿಗಳ ಸ್ನೇಹ ಇವು ಬದುಕಿನ ಅಧ್ಯಾಯಗಳು. ಮುಂದಿನ ಹಂತಗಳಲ್ಲಿ ಕನಸುಗಳು ಬೆಳೆಸುತ್ತೇವೆ, ಭವಿಷ್ಯದ ಯೋಜನೆ ಮಾಡುತ್ತೇವೆ. ಕೆಲವೊಮ್ಮೆ ನಮ್ಮ ಆಸೆಗಳು ನಿರಾಸೆಯಾಗುತ್ತವೆ,ಆದರೆ ಮತ್ತೆ ಎದ್ದು ನಿಲ್ಲುತ್ತೇವೆ. ಈ ಹೋರಾಟವೇ ಬದುಕಿನ ನಿಜವಾದ ಅರ್ಥವನ್ನು ತಿಳುಸುತ್ತದೆ.
ಬದುಕು ಯಾವಾಗಲೂ ಹೂವುಗಳಂತೆಯೇ ಸುಂದರವಾಗಿರುವುದಿಲ್ಲ. ಕೆಲವೊಮ್ಮೆ ನೋವು, ದುಃಖ, ನಷ್ಟಗಳು ನಮ್ಮ ಹಾದಿಯಲ್ಲಿ ಎದುರಾಗುತ್ತವೆ. ಆದರೆ ಇವುಗಳೇ ನಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತವೆ. ಸುಖವೂ ದುಃಖವೂ ಎರಡೂ ಬದುಕಿನ ಅವಿಭಾಜ್ಯ ಭಾಗಗಳು-ಒಂದಿಲ್ಲದೆ ಮತ್ತೊಂದು ಅರ್ಥಹೀನ.
ಬದುಕಿನ ಅರ್ಥ ಬೇರೆಯವರ ನೋವನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಒಳ್ಳೆಯ ಮನುಷ್ಯನಾಗುವಲ್ಲಿ ಅಡಗಿದೆ.
ಹೋರಾಟಗಳ ನಡುವೆಯೂ ನಂಬಿಕೆ ಕಳೆದುಕೊಳ್ಳದೇ, ಕತ್ತಲೆಯಿಂದ ಬೆಳಕಿನತ್ತ ಸಾಗುವುದು ಜೇವನದ ನಿಜವಾದ ಜಯ. ಪ್ರತೀದಿನ ಹೊಸ ಅವಕಾಶಗಳು ನಮ್ಮ ಮುಂದೆ ಬಾಗಿಲು ತಟ್ಟುಟ್ಟವೆ. ನಾವು ನಗುತ್ತಾ ಬದುಕಿದರೆ, ಜೀವನದ ಸೌಂದರ್ಯವನ್ನು ನಿಜವಾಗಿ ಅರಿತುಕೊಳ್ಳಬಹುದು.
ಬದುಕು ಅಮೂಲ್ಯ -ಅದನ್ನು ಪ್ರೀತಿಸಬೇಕು, ಗೌರವಿಸಬೇಕು ಮತ್ತು ಸಂತೋಷದಿಂದ ನಡೆಸಬೇಕು. ಬದುಕು ಒಂದು ಕಥೆಯಂತಿದೆ; ನಾವು ಯಾವ ಪಾತ್ರವನ್ನು ವಹಿಸುತ್ತೇವೆ ಎಂಬುವುದು ನಮ್ಮ ಕೈಯಲ್ಲಿದೆ. ಪ್ರೀತಿ, ಶಾಂತಿ, ಪ್ರಾಮಾಣಿಕತೆ ಮತ್ತು ನಗುವು - ಇವುಗಳೇ ಜೀವನದ ನಿಜವಾದ ಅಲಂಕಾರಗಳು.
ಇದೇ ಬದುಕಿನ ಪಯಣ- ಅರ್ಥಪೂರ್ಣವಾಗಿ ಬದುಕುವುದು, ಅಷ್ಟೇ ಜೀವನದ ನಿಜವಾದ ಸಾಧನೆ.
- ನಮ್ರತಾ ಆಚಾರ್ಯ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


