ಎಂಆರ್‍ಪಿಎಲ್ ಸಂಸ್ಥೆಯ ಸಿ.ಎಸ್.ಆರ್ ಅನುದಾನದಲ್ಲಿ ಶೌಚಾಲಯ, ಸೋಲಾರ್ ವ್ಯವಸ್ಥೆ ನಿರ್ಮಾಣ
ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಕೃತಿಕ ಭವನಕ್ಕೆ ಎಂ.ಆರ್.ಪಿ.ಎಲ್. ಮಂಗಳೂರು ಸಂಸ್ಥೆಯ ಸಿ.ಎಸ್.ಆರ್. ಅನುದಾನದಿಂದ ನಿರ್ಮಾಣಗೊಂಡ ನೂತನ ಶೌಚಾಲಯ ಹಾಗೂ ಸೋಲಾರ್ ಅಳವಡಿಕೆಯ ಉದ್ಘಾಟನೆಯನ್ನು ಎಂ.ಆರ್.ಪಿ.ಎಲ್. ಸಂಸ್ಥೆಯ ಎಚ್. ಆರ್. ವಿಭಾಗದ ಮ್ಯಾನೇಜರ್ ಹರೀಶ್ ರಾವ್ ಅವರು ಉದ್ಘಾಟನೆಗೊಳಿಸಿದರು.
ಎಂ. ಆರ್ .ಪಿ.ಎಲ್.ಸಂಸ್ಥೆಯು ಸಮಾಜ ಸೇವೆಯ ಯೋಜನೆಯಡಿ, ಸಂರಕ್ಷಣಾ ವಿಭಾಗದಲ್ಲಿ ಐದು ವಿಷಯಗಳಿಗೆ ಪ್ರಾಧಾನ್ಯತೆ ನೀಡಿದೆ. ಪ್ರಧಾನವಾಗಿ ಶಿಕ್ಷಣ, ಆರೋಗ್ಯ, ಬಹುಜನ, ಪ್ರಕೃತಿ, ಸಂಸ್ಕೃತಿ, ಸಂರಕ್ಷಣೆಯ ಕರ್ತವ್ಯವನ್ನು ಸಿರಿಬಾಗಿಲು ಪ್ರತಿಷ್ಠಾನ ಸಿರಿಬಾಗಿಲನ್ನು ಪ್ರಧಾನ ಕೇಂದ್ರವಾಗಿಸಿ, ಸಾಂಸ್ಕೃತಿಕ ವಲಯವನ್ನು ಉಳಿಸುವ, ಬೆಳೆಸುವ, ಮುಂದಿನ ಪೀಳಿಗೆ ಹಸ್ತಾಂತರಿಸುವ ಯೋಜನೆಯನ್ನು ಹಮ್ಮಿಕೊಂಡು ಕಠಿಣ ಶ್ರಮದ ಮೂಲಕ ಯಶಸ್ವಿಯಾಗುತ್ತಿದೆ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಈ ಯೋಜನೆಯಡಿ ಸೋಲಾರ್ ವ್ಯವಸ್ಥೆಗೆ ಅನುದಾನ ನೀಡಿರುತ್ತದೆ. ಪ್ರತಿಷ್ಠಾನದಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯುವ ಕಾರಣ ಆಗಮಿಸುವ ಕಲಾವಿದರಿಗೆ, ಪ್ರೇಕ್ಷಕರಿಗೆ ಉಪಯುಕ್ತವಾಗಲು ಆರೋಗ್ಯ ರಕ್ಷಣೆ ಯಡಿ ಶೌಚಾಲಯ ವ್ಯವಸ್ಥೆಗೆ ಅನುದಾನ ನೀಡಿರುತ್ತದೆ. ನಮ್ಮ ಸಂಸ್ಥೆಗೆ ಕಲೆ ಸಂಸ್ಕೃತಿಯನ್ನು ಉಳಿಸುವ, ಅದು ಗಡಿನಾಡು ಕಾಸರಗೋಡಿನಲ್ಲಿ ಇಂತಹ ಬೃಹತ್ ಸಂಸ್ಥೆಗೆ ಅನುದಾನ ನೀಡುವ ಮೂಲಕ ನಮಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ಪ್ರತಿಷ್ಠಾನಕ್ಕೆ ಧನ್ಯವಾದಗಳು ಅರ್ಪಿಸುತ್ತಿದ್ದೇವೆ ಎಂದರು.
ಎಂಆರ್ ಪಿಎಲ್ ಸಂಸ್ಥೆಯ ಎಚ್ ಆರ್ ವಿಭಾಗದ ಕೃಷ್ಣ ಹೆಗ್ಡೆ ಮಿಯ್ಯಾರು ಅವರ ಅನುಪಸ್ಥಿತಿಯಲ್ಲಿ ಹರೀಶ್ ರಾವ್ ಅವರು ಈ ಕಾರ್ಯಕ್ರಮ ನೆರವೇರಿಸಿದರು. ಸೆಲ್ಕೋ ಸೋಲಾರ್ ಪ್ರೈವೇಟ್ ಲಿ. ಸಂಸ್ಥೆಯ ಮಹಾಪ್ರಬಂದಕ ಗುರುಪ್ರಸಾದ್ ಶೆಟ್ಟಿ ಅವರು ಸೋಲಾರ್ ವ್ಯವಸ್ಥೆಗೆ ಚಾಲನೆ ನೀಡಿ ಶುಭಹಾರೈಸಿರು. ಸಿರಿಬಾಗಿಲಿನ ಸಮಾಜಸೇವಕ ರವೀಂದ್ರ ರೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಅಧ್ಯಕ್ಷತೆ ವಹಿಸಿ ಸಹಕರಿಸಿದ ಸಂಸ್ಥೆಗೆ ಅಭಾರಿಯಾಗಿದ್ದೇವೆ ಎಂದರು. ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ಇವರು ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಕೃಷ್ಣ ಕಾರಂತ ದೇಶಮಂಗಲ ಅತಿಥಿಗಳನ್ನು ಸ್ವಾಗತಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

