ಮಂಗಳೂರು: ಗಾನ ನೃತ್ಯ ಅಕಾಡೆಮಿ ಮಂಗಳೂರು ಇದರ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯ ಹಾಗೂ ಚಂದ್ರಶೇಖರ್ - ವಿದ್ಯಾ ದಂಪತಿ ಪುತ್ರ ಅನಂತಕೃಷ್ಣ ಸಿ ವಿ ಇವರ ಭರತನಾಟ್ಯ ರಂಗಪ್ರವೇಶವು ಅಕ್ಟೋಬರ್ 25ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 5.15 ಗಂಟೆಗೆ ಜರಗಲಿದೆ.
ಗುರು ಗೀತಾ ಸರಳಾಯ ಇವರಲ್ಲಿ ಅಭ್ಯಸಿಸಿ ಭರತನಾಟ್ಯದ ಪ್ರೀ ವಿದ್ವತ್ ಹಂತದ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುವ ಅನಂತಕೃಷ್ಣ ನೂರಕ್ಕೂ ಮಿಕ್ಕಿ ಪ್ರದರ್ಶನಗಳನ್ನು ನೀಡಿರುತ್ತಾರೆ. ಭಾರತ ಸರಕಾರದ ಸಿ ಸಿ ಆರ್ ಟಿ ಶಿಷ್ಯವೇತನ ಪಡೆದಿರುವ ಇವರು ಆಳ್ವಾಸ್ ಕಾಲೇಜಿನಲ್ಲಿ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಪದವಿಯನ್ನು ಅಭ್ಯಸಿಸುತ್ತಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಹಿರಿಯ ನೃತ್ಯ ಗುರು ಉಳ್ಳಾಲ ಮೋಹನ ಕುಮಾರ್, ಎಸ್. ಡಿ. ಎಂ ಶಾಲೆಯ ಪ್ರಾಂಶುಪಾಲೆ ಜೋಯ್ ಜೀವನ್ ರೈ, ತುಮಕೂರಿನ ಖ್ಯಾತ ನೃತ್ಯ ಗುರು ಸಾಗರ್ ಟಿ ಯಸ್ ಹಾಗೂ ಡಾ. ಕಿಶೋರ್ ಕುಮಾರ್ ಉಬ್ರಂಗಳ ಭಾಗವಹಿಸಲಿದ್ದಾರೆ.
ಹಿಮ್ಮೇಳದಲ್ಲಿ ಹಾಡುಗಾರಿಕೆಯಲ್ಲಿ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ನಟುವಾಂಗದಲ್ಲಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು, ಮೃದಂಗದಲ್ಲಿ ವಿನಯ್ ನಾಗರಾಜನ್ ಬೆಂಗಳೂರು, ಕೊಳಲಿನಲ್ಲಿ ರಘುನಂದನ್ ಬೆಂಗಳೂರು ಹಾಗೂ ವೀಣೆಯಲ್ಲಿ ಸೌಂದರ್ ರಾಜನ್ ತಿರುವನಂತಪುರ ಇವರು ಸಹಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಭಟ್ ತಿಳಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


